ಸಿನಿಮಾ

ಹಾಸನಕ್ಕೆ ಬಿಜೆಪಿ ಕೊಡುಗೆ 60 ಬ್ರ್ಯಾಂಡಿ ಶಾಪ್; ವ್ಯಂಗ್ಯವಾಡಿದ ರೇವಣ್ಣ

ಹಾಸನ: ಎಚ್​.ಡಿ.ದೇವೇಗೌಡ ಮತ್ತು ಎಚ್​.ಡಿ.ಕುಮಾರಸ್ವಾಮಿ ಹಾಸನದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ದೇವೇಗೌಡರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ನಡೆದಿದೆ. ಗ್ರಾಮೀಣ ಪ್ರದೇಶ, ನಗರ ಪ್ರದೇಶದ ಜನರಿಗೆ ಒಳ್ಳೆಯ ಶಿಕ್ಷಣ ನೀಡಬೇಕೆಂದು ಹೋರಾಟ ಮಾಡಿದ್ದೇವೆ. ಆದರೆ ಎರಡು ರಾಷ್ಟ್ರೀಯ ಪಕ್ಷಗಳು ಶಿಕ್ಷಣವನ್ನು ವ್ಯಾಪಾರಿ ಸಂಸ್ಥೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

ನಾನು ಎಂದಾದರು ಈ ರೀತಿ ಹೇಳಿಕೊಂಡಿದ್ದೇನಾ?

ಎಚ್.ಡಿ.ರೇವಣ್ಣ ಮಾತನಾಡುತ್ತಾ, ಹಾಸನದ ಗಲ್ಲಿ ಗಲ್ಲಿಯಲ್ಲಿ ರಸ್ತೆಗಳು ನಿರ್ಮಾಣವಾಗಿವೆ ಎಂದು ಕೆಲವರು ಹೇಳಿಕೊಂಡು ಬರುತ್ತಿದ್ದಾರೆ. ನಾನು ಎಂದಾದರು ಈ ರೀತಿ ಹೇಳಿಕೊಂಡಿದ್ದೇನಾ? ಇವತ್ತಿನ ಕಾಲದಲ್ಲಿ ಗಲ್ಲಿ ರಸ್ತೆ ಮಾಡುವುದು ದೊಡ್ಡದಾ? ಕಾರ್ಯಾದೇಶ ಆಗಿರುವ ಯೋಜನೆಗಳನ್ನು ತಡೆಹಿಡಿಯುವುದೇ ಇವರ ಸಾಧನೆ. ಆರ್​​ಟಿ ಕಾಲೇಜು ಆದೇಶವನ್ನು ಕಿತ್ತುಕೊಂಡಾಗ ಸ್ಥಳೀಯ ಶಾಸಕರು ಉಸಿರು ಬಿಡಲಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: ರಾಮ, ಹನುಮಂತನ ಮೇಲೆ ಕಾಂಗ್ರೆಸ್ಸಿಗರಿಗೆ ಯಾಕಿಷ್ಟು ಕೋಪ? ಪ್ರತಾಪ್ ಸಿಂಹ ಪ್ರಶ್ನೆ

ರಸ್ತೆಗೆ ಟಾರು ಹಾಕುವುದು, ಮತ್ತೆ ಬೆಳಗಾಗುವಷ್ಟರಲ್ಲಿ ಕಿತ್ತು ಹೋಗುವುದು. ಇಂಜಿನಿಯರ್​ಗಳು, ಕಂಟ್ರಾಕ್ಟರ್ ಸೇರಿ ಲೂಟಿ ಹೊಡೆಯುವ ಕಾಮಾಗಾರಿ ಮಾಡುತ್ತಿದ್ದಾರೆ. ನಾವು ಈ ರೀತಿಯ ಕಾಮಗಾರಿ ಮಾಡಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ರೇವಣ್ಣ ಸವಾಲೆಸೆದರು.

ಅವನು ಯಾರನ್ನು ಬೇಕಾದರೂ ಮರ್ಡರ್ ಮಾಡ್ಸೋನು!

ಒಬ್ಬ ಹುಡುಗನ ಮೇಲೆ ಗ್ರೇಟ್ ಡಿವೈಎಸ್‌ಪಿ, ಗ್ರೇಟ್ ಸರ್ಕಲ್ ಇನ್ಸ್‌ಪೆಕ್ಟರ್ ಮೂರು ತಿಂಗಳ ಹಿಂದೆ ರೌಡಿ ಶೀಟರ್ ತೆರೆದಿದ್ದಾರೆ. ಸ್ವರೂಪ್ ಪರವಾಗಿ ಓಟು ಹಾಕಿಸುತ್ತಾನೆ ಎಂದು ಗಡಿಪಾರು ಮಾಡಲಾಗಿದೆ. ಗಡಿಪಾರು ಮಾಡಲು ಅವನೇನು ಇಲ್ಲಿ ಯಾರನ್ನಾದರು ಕೊಲೆ ಮಾಡಲು ಹೋಗಿದ್ದನಾ? ಚುನಾವಣೆ ಇದ್ದಾಗ ಗಡಿಪಾರು ಮಾಡುವ ಅವಶ್ಯಕತೆ ಏನಿತ್ತು? ರೌಡಿಗಳ ತಾಣದ ಅಧಿಕಾರಿ ದಿ ಗ್ರೇಟ್ ಉದಯ್‌ ಭಾಸ್ಕರ್. ಅವನು ಯಾರನ್ನು ಬೇಕಾದರೂ ಮರ್ಡರ್ ಮಾಡ್ಸೋನು. ಹೋಗಿ ಕೊಲೆ ಮಾಡಿ ಬನ್ನಿ, ನಾನು ಬೇಲ್ ಕೊಡಿಸುತ್ತೇನೆ ಎಂದು ಹೇಳುತ್ತಿದ್ದ.

ಇದನ್ನೂ ಓದಿ: ‘ಗಂಭೀರ’ ಸಮಸ್ಯೆಯಿದ್ದರೆ ಕರೆ ಮಾಡಿ… ‘ವಿರಾಟ’ ರೂಪದಲ್ಲಿ ಸಹಾಯ ಮಾಡುತ್ತೇವೆ; ವೈರಲ್ ಆಯ್ತು ಹು-ಧಾ ಪೊಲೀಸರ ಟ್ವೀಟ್

ಬಿಜೆಪಿ ಅವರ ಕೊಡುಗೆ 60 ಬ್ರ್ಯಾಂಡಿ ಶಾಪ್

ಇಡೀ ಅಧಿಕಾರಿಗಳೆಲ್ಲಾ ಸೇರಿ ಅವನನ್ನು ರಜೆ ಮೇಲೆ ಕಳುಹಿಸಿದ್ದಾರೆ. ಅವನನ್ನು ಉಳಿಸಲು ಸ್ಥಳೀಯ ಶಾಸಕರು ಬಹಳ ಪ್ರಯತ್ನ ಪಟ್ಟರು. ನಮ್ಮ ರೌಡಿಗಳಿಗೆಲ್ಲಾ ರಕ್ಷಣೆ ಕೊಡುತ್ತಾನೆ, ಸ್ವರೂಪ್ ಕಡೆಯವರು ನಿಂತುಕೊಂಡರೆ ತೊಂದರೆ ಕೊಡುತ್ತಾನೆಂದು ಹೊರಗೋಡಿಸಿದ್ದಾರೆ. ಇಂತಹ ಕೆಲಸ ದೇವೇಗೌಡರು, ರೇವಣ್ಣ, ಕುಮಾರಸ್ವಾಮಿ ಎಂದಾದರು ಮಾಡಿದ್ದರಾ? ಹಾಸನ ನಗರಕ್ಕೆ ಬಿಜೆಪಿ ಅವರ ಕೊಡುಗೆ 60 ಬ್ರ್ಯಾಂಡಿ ಶಾಪ್. ಕುಡ್ಕಂಡು ಇರಿ ಎಂದು ಕೊಡುಗೆ ಕೊಟ್ಟಿದ್ದಾರೆ ರೇವಣ್ಣ ಕಿಡಿಕಾರಿದರು.

Latest Posts

ಲೈಫ್‌ಸ್ಟೈಲ್