More

    ಟ್ರ್ಯಾಕ್ಟರ್ ಖರೀದಿಸಿದ ಎಚ್​ಡಿಕೆ; ತಾವೇ ಚಲಾಯಿಸಿ ಖುಷಿ ಪಟ್ಟ ಮಾಜಿ ಸಿಎಂ

    ರಾಮನಗರ: ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ನಾಯಕ ಎಚ್​.ಡಿ ಕುಮಾರಸ್ವಾಮಿ ಅವರು ಬುಧವಾರದಂದು ಹೊಸ ಟ್ರ್ಯಾಕ್ಟರ್​ ಒಂದನ್ನು ಖರೀದಿಸಿದ್ದಾರೆ. ಹೊಸ ಟ್ರ್ಯಾಕ್ಟರ್​ಗೆ ಪೂಜೆ ಸಲ್ಲಿಸಿ ತಾವೇ ಚಲಾಯಿಸಿದ್ದಾರೆ.

    ಕುಮಾರಸ್ವಾಮಿ ಅವರಿಗೆ ರಾಮನಗರ ಜಿಲ್ಲೆ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ಕೃಷಿ ಭೂಮಿ ಇದೆ. ಕರೊನಾದ ಈ ಸಮಯದಲ್ಲಿ ತಮ್ಮ ಕೃಷಿ ಭೂಮಿಯನ್ನು ಮಾದರಿ ತೋಟವನ್ನಾಗಿ ಪರಿವರ್ತಿಸಲು ಅವರು ಆಸಕ್ತಿ ತೋರಿದ್ದಾರೆ. ಕೆಲ ದಿನಗಳ ಹಿಂದೆ ಹಸುವನ್ನು ಖರೀದಿ ಮಾಡಿ ಸಾಕಲಾರಂಭಿಸಿದ್ದರು. ಇದೀಗ ಟ್ರ್ಯಾಕ್ಟರ್​ ಖರೀದಿ ಮಾಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಗಾಡಿಗೆ ಪೂಹೆ ಸಲ್ಲಿಸಲಾಗಿದೆ.

    ಟ್ರ್ಯಾಕ್ಟರ್ ವಿಶೇಷತೆ:
    ಜಾನ್ ಡಿರ್ 5210 ಗೇರ್ ಪ್ರೊ ಟ್ರ್ಯಾಕ್ಟರ್ ಹಾಗೂ 42 ಬ್ಲೇಡ್ ಇರುವ ರೋಟವೇಟರ್. ಟ್ರ್ಯಾಕ್ಟರ್ 50hp ಪವರ್ ಹೊಂದಿದ್ದು ಸರ್ವ ಕೃಷಿ ಕಾಮಗಾರಿಗಳನ್ನು ಮಾಡುತ್ತದೆ. ತಾಂತ್ರಿಕತೆಯಲ್ಲಿ ದಕ್ಷತೆಯುಳ್ಳ ಗೇರ್ ಬಾಕ್ಸ್ ಮತ್ತು 4 ವೀಲ್ ಡ್ರೈವ್ ಗಾಡಿಯಾಗಿರುತ್ತದೆ. ಜಾನ್ ಡಿಯರ್ ಭಾರತದಲ್ಲಿ 22 ವರ್ಷಗಳಿಂದ ರೈತರ ಸೇವೆಗೆ ಟ್ರ್ಯಾಕ್ಟರ್ ಮತ್ತು ಯಂತ್ರೋಪಕರಣಗಳು ಮಾರಾಟ ಮಾಡುತ್ತಿದೆ.

    ಲಾಕ್​ಡೌನ್​ನಲ್ಲಿ ಗಾಡಿ ಸೀಜ್​ ಮಾಡಿದ ನಕಲಿ ಪೊಲೀಸ್​! ಠಾಣೆಗೆ ಹೋಗಿ ಪರಿಶೀಲಿಸಿದಾಗ ಆಗಿದ್ದೇ ಬೇರೆ..

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ‘ಅಪ್ಪಾ, ನನ್ನ ಕ್ಷಮಿಸಿ’ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ನವ ವಿವಾಹಿತ ವೈದ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts