More

    ನಮ್ಮತ್ರ ಹಣವಿಲ್ಲ, ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನ ಹಾಕುತ್ತಿಲ್ಲ: ದೇವೇಗೌಡ

    ರಾಯಚೂರು: ಈ ಬಾರಿಯ ಉಪ ಚುನಾವಣೆಗಳಿಗೆ ಜೆಡಿಎಸ್​ನಿಂದ ಅಭ್ಯರ್ಥಿಗಳನ್ನು ಹಾಕುತ್ತಿಲ್ಲ, ನಮ್ಮ ಬಳಿ ಚುನಾವಣೆಗೆ ಹಣ ಇಲ್ಲ. ಬೆಳಗಾವಿ ಲೋಕಸಭಾ, ಮಸ್ಕಿ, ಸಿಂದಗಿ ಹಾಗೂ ಬಸವ ಕಲ್ಯಾಣ ಕ್ಷೇತ್ರಗಳ ಬೈ ಎಲೆಕ್ಷನ್​ಗೆ ಜೆಡಿಎಸ್​ ಸ್ಪರ್ಧಿಸಲ್ಲ ಎಂದು ಪಕ್ಷದ ವರಿಷ್ಠ ಎಚ್​.ಡಿ. ದೇವೇಗೌಡ ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡ, 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ತಳಮಟ್ಟದಿಂದ ಪಕ್ಷ ಸಂಘಟಿಸುವಲ್ಲಿ ನಿರತನಾಗಿದ್ದೇನೆ. ಕುಮಾರಸ್ವಾಮಿ ಸರ್ಕಾರ ಮುಗಿದ ಮೇಲೆ ನಾನ್ಯಾರಿಗೂ ನಿಂದನೆ ಮಾಡಿಲ್ಲ. ಪಕ್ಷ ಕಟ್ಟುವುದರಲ್ಲೇ ಸಂಪೂರ್ಣ ಭಾಗಿಯಾಗ್ತೇನೆ. ಅಸ್ಥಿರತೆಗೆ ನಾನು ಅವಕಾಶ ನೀಡಲ್ಲ ಎಂದರು. ಇದನ್ನೂ ಓದಿರಿ ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

    ನಮ್ಮತ್ರ ಹಣವಿಲ್ಲ, ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನ ಹಾಕುತ್ತಿಲ್ಲ: ದೇವೇಗೌಡಪ್ರಾದೇಶಿಕ ಪಕ್ಷ ಕಟ್ಟುವುದಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡ್ತೇನೆ. ನಮ್ಮಲ್ಲೂ 34 ಜನ ಶಾಸಕರಿದ್ದಾರೆ, ನಾವು ವಿಲೀನ ಆಗ್ತೇವೆ ಅಂತಾರೆ. ಕುಮಾರಸ್ವಾಮಿ ಸಿಎಂ ಆಗಬೇಕು ಅಂತಾ ಯಾರ ಮನೆಗೂ ಹೋಗಿಲ್ಲ. ಗುಲಾಂನಬಿ ಆಜಾದ್ ಅವರೇ ಕುಮಾರಸ್ವಾಮಿ ಸಿಎಂ ಆಗಲು ಕಾರಣ. ನನ್ನ ಮಗನಿಗೆ ಎರಡು ಮೇಜರ್ ಸರ್ಜರಿ ಆಗಿದೆ ಅಂದಿದ್ದೆ. ಸೋನಿಯಾಗಾಂಧಿ ಮಾತುಕತೆ ನಂತರ ಕುಮಾರಸ್ವಾಮಿ ಸಿಎಂ ಆಗಿದ್ರು. ಸದ್ಯ ಸಿಎಂ ಯಡಿಯೂರಪ್ಪ ಬಗ್ಗೆ ನಾನು ಯಾವುದೇ ಆರೋಪ ಮಾಡಲ್ಲ. ನನ್ನ ಶರೀರದಲ್ಲಿ ಶಕ್ತಿ ಇರೋವರೆಗೂ ಪಕ್ಷ ಕಟ್ಟುತ್ತೇನೆ ಎಂದು ದೇವೇಗೌಡ ಹೇಳಿದರು. ಅಲ್ಲದೆ ಟಿಕೆಟ್ ನೀಡುವ ವಿಚಾರದಲ್ಲಿ ನಾವು ತಪ್ಪು ಮಾಡಿದ್ದೇವೆ ಎಂದೂ ಅವರು ಹೇಳಿದರು.

    ನಮ್ಮತ್ರ ಹಣವಿಲ್ಲ, ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನ ಹಾಕುತ್ತಿಲ್ಲ: ದೇವೇಗೌಡಇನ್ನು ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡ, ತಮಿಳುನಾಡಿನಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಧೈರ್ಯ ಮೆಚ್ಚುವಂತಹದ್ದು. ಮತಗಳು ಕಡಿಮೆ ಬಂದ್ರೂ ಈ ಬಾರಿ ಮಮತಾ ಮತ್ತೆ ಅಧಿಕಾರ ಪಡೆಯಬಹುದು. ಇಡೀ ಬಿಜೆಪಿ ಟೀಂ ಪಶ್ಚಿಮ ಬಂಗಾಳದಲ್ಲಿ ನೆಲೆಯೂರಿದೆ. ಸಚಿವರು, ಶಾಸಕರು ಪಕ್ಷ ಬಿಟ್ಟಿರೋದು ಸ್ವಲ್ಪ ಹಿನ್ನೆಡೆ ಆಗಬಹುದು. ಆದ್ರೆ ಮೂರನೇ ಬಾರಿಯೂ ಮಮತಾ ಸಿಎಂ ಆಗಲಿದ್ದಾರೆ ಎಂದು ಎಚ್.ಡಿ. ದೇವೇಗೌಡ ಭವಿಷ್ಯ ನುಡಿದರು.

    ಇನ್ನು ನಾಳೆ ಬೆಳಗ್ಗೆ ದೆಹಲಿಗೆ ಹೋಗಿ ಬಜೆಟ್ ಚರ್ಚೆಯಲ್ಲಿ ಪಾಲ್ಗೊಳ್ಳುವುದಿದೆ. ದೇವದುರ್ಗದ ಗಾಣಧಾಳ ಗ್ರಾಮದಲ್ಲಿ ರೈತನೊಬ್ಬ 2 ಗುಂಟೆ ಜಮೀನಿನಲ್ಲಿ ಎಚ್​ಡಿಡಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಅವರ ಮನೆಗೆ ಭೇಟಿ ನೀಡುವುದಿದೆ ಎಂದರು.

    ಛೇ, ಅದೆಂಥ ಅಸಹ್ಯ ಮಾತು ಹೇಳಿಬಿಟ್ಟೆ? ನೊಂದ ಪ್ರಿಯತಮೆ ಸತ್ತೇ ಹೋದಳು!

    ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

    ಅಡಕೆ ರೂಪದಲ್ಲಿ ಮನೆಗೆ ಬಂದ ಜವರಾಯ 1 ವರ್ಷದ ಮಗುವಿನ ಪ್ರಾಣ ಹೊತ್ತೊಯ್ದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts