More

    ಹಾವೇರಿ ಮೆಡಿಕಲ್ ಕಾಲೇಜು ಕಟ್ಟಡ ಪರಿಶೀಲನೆ

    ಹಾವೇರಿ: ಇಲ್ಲಿನ ದೇವಗಿರಿ ಯಲ್ಲಾಪುರದ ಬಳಿ ನಿರ್ಮಿಸುತ್ತಿರುವ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್)ಯ ಕಟ್ಟಡದ ಕಾಮಗಾರಿ ಸ್ಥಳಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಕೋರಿಶೆಟ್ಟರ, ಮಹದೇವ ಬಣಕಾರ ಟ್ರಸ್ಟ್ ಕಮಿಟಿ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ ಹಾಗೂ ಟ್ರಸ್ಟ್ ಕಾರ್ಯದರ್ಶಿ ಅಬ್ದುಲ್ ಹುಬ್ಬಳ್ಳಿ ಭಾನುವಾರ ಜಂಟಿಯಾಗಿ ಭೇಟಿ ನೀಡಿ ಕಾಮಗಾರಿ ಗುಣಮಟ್ಟದ ಕುರಿತು ಪರಿಶೀಲಿಸಿದರು.
    ಈಗಾಗಲೇ ಮೊದಲ ಬ್ಯಾಚ್‌ಗೆ 150 ವಿದ್ಯಾರ್ಥಿಗಳು ಆಯ್ಕೆಯಾಗಿ ಅಭ್ಯಾಸ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಎರಡನೇ ಬ್ಯಾಚ್ ಬರುವಷ್ಟರಲ್ಲಿ ಕಟ್ಟಡ ಕಾಮಗಾರಿ ಆದಷ್ಟು ಬೇಗ ಮುಗಿದರೆ, ವಿದ್ಯಾರ್ಥಿಗಳಿಗೆ ಸುಸಜ್ಜಿತ ಕಟ್ಟಡ, ಹಾಸ್ಟೆಲ್, ಇತರ ಸೌಲಭ್ಯಗಳು ಸಿಕ್ಕಂತಾಗುತ್ತದೆ.
    ಮೆಡಿಕಲ್ ಕಾಲೇಜು ಜತೆಗೆ ಆಸ್ಪತ್ರೆಯೂ ಆರಂಭವಾಗಬೇಕು. ಕಾಲೇಜು ಸಂಪರ್ಕಿಸುವ ರಸ್ತೆಯ ಪಕ್ಕದಲ್ಲಿ ರೈತರು, ದನ, ಕರುಗಳು ಓಡಾಡಲು ಸರ್ವಿಸ್ ರಸ್ತೆಯ ಮಾದರಿಯ ರಸ್ತೆ ನಿರ್ಮಿಸಬೇಕು. ಕಾಲೇಜು ಆವರಣದಲ್ಲಿ ಮಳೆ ನೀರು ನಿಲ್ಲದಂತೆ ಮಾಡಲು ದೊಡ್ಡ ಕಾಲುವೆ ನಿರ್ಮಿಸಬೇಕು ಎಂದು ಹಿಮ್ಸ್ ಅಧಿಕಾರಿಗಳಿಗೆ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts