More

    ಮಹರ್ಷಿ ವಾಲ್ಮೀಕಿ ಜಾಗೃತಿ ಜಾತ್ರೆ ಫೆ.8ರಿಂದ

    ಹಾವೇರಿ: ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ 2024ರ ಫೆ.8 ಮತ್ತು 9ರಂದು ಮಹರ್ಷಿ ವಾಲ್ಮೀಕಿ ಜಾಗೃತಿ ಜಾತ್ರೆ ನಡೆಯಲಿದೆ. ಜಾತ್ರೆಯಲ್ಲಿ ಸಮಾಜದ ಜಾಗೃತಿಗಾಗಿ ಹಾಗೂ ಸಮಾಜದ ಆಗು-ಹೋಗುಗಳ ಬಗ್ಗೆ, ನಕಲಿ ಜಾತಿ ಪ್ರಮಾಣ ಪತ್ರ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸುವ ಮೂಲಕ ಸಮಾಜ ಬಾಂಧವರಲ್ಲಿ ಅರಿವು ಮೂಡಿಸಲಾಗುವುದು ಎಂದು ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸಾನ್ನಾನಂದ ಸ್ವಾಮೀಜಿ ಹೇಳಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ವಾಲ್ಮೀಕಿ ಜಾತ್ರೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಶ್ರೀಮಠದ 26ನೇ ವಾರ್ಷಿಕೋತ್ಸವ, ಲಿಂ.ಜಗದ್ಗುರು ಪುಣ್ಯಾನಂದಪುರಿ ಸ್ವಾಮೀಜಿಯವರ 17ನೇ ವರ್ಷದ ಪುಣ್ಯಾರಾಧನೆ ಹಾಗೂ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ಸಮಾರಂಭ ನಡೆಲಿದೆ. ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
    ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ ಮಾತನಾಡಿ, ಹಾವೇರಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನದ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಮಹರ್ಷಿ ವಾಲ್ಮೀಕಿ ಸರ್ಕಲ್‌ನಲ್ಲಿ ವಾಲ್ಮೀಕಿ ಪುತ್ಥಳಿಯನ್ನು ಶೀರ್ಘದಲ್ಲಿಯೇ ಸ್ಥಾಪಿಸಲಾಗುವುದು ಎಂದರು.
    ಸಭೆಯಲ್ಲಿ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರ ಕಳ್ಳಿಮನಿ, ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷ ನಾಗರಾಜ ಬಡಮ್ಮನವರ, ತಾಲೂಕ ಯುವ ಘಟಕದ ಅಧ್ಯಕ್ಷ ಮಾಲತೇಶ ರಿತ್ತಿ, ಸಂಗಪ್ಪ ಮಲ್ಲಿಗಾರ, ಬಸವರಾಜ ಭೀಮಕ್ಕನವರ, ಉಮೇಶ ನಾಗಣ್ಣನವರ, ಶಿವಣ್ಣ ಜವಳಿ, ಮಾರುತಿ ಕನವಳ್ಳಿ, ಮಾಲತೇಶ ಮರೋಳ, ಸೋಮನೌಡ ಪಾಟೀಲ, ಅಶೋಕ ತಳವಾರ, ಅಶೋಕ ಹರನಗಿರಿ, ಲವೇಶ ಸೋಮನಕಟ್ಟಿ, ಉಮೇಶ ಮಾಗಳ, ಮಾಲತೇಶ ಅಂಗೂರ, ಮತ್ತಿತರರು ಇದ್ದರು.
    ಪದಾಧಿಕಾರಿಗಳ ಆಯ್ಕೆ:
    ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9ರಂದು ನಡೆಯುವ ಮಹರ್ಷಿ ವಾಲ್ಮೀಕಿ ಜಾಗೃತಿ ಜಾತ್ರೆ-2024ರ ಹಾವೇರಿ ತಾಲೂಕು ಮುಖ್ಯಸ್ಥರನ್ನಾಗಿ ರಮೇಶ ಆನವಟ್ಟಿ, ಉಮೇಶ ಮಾಗಳ, ನಾಗರಾಜ ಬಡಮ್ಮನವರ, ಮಲ್ಲಿಕಾರ್ಜುನ ಬೂದಗಟ್ಟಿ, ಸಂಗಪ್ಪ ಮಲ್ಲಿಗಾರ, ಉಮೇಶ ನಾಗಮ್ಮನವರ ಅವರನ್ನು ಆಯ್ಕೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts