More

    ಜಿಎಚ್ ಕಾಲೇಜು ಮೈದಾನದಲ್ಲಿ ವಾಕರ್ಸ್ ಮತ್ತು ಟಾಕರ್ಸ್ ಸಮೂಹದಿಂದ ಪಾಸ್ಟಿಕ್ ಸ್ವಚ್ಛತಾ ಅಭಿಯಾನ

    ಹಾವೇರಿ: ನಗರದ ಕೆಎಲ್‌ಇ ಸಂಸ್ಥೆಯ ಜಿಎಚ್ ಕಾಲೇಜು ಆವರಣದಲ್ಲಿ ಸೋಮವಾರ ವಾಕರ್ಸ್ ಮತ್ತು ಟಾಕರ್ಸ್ ಸಮೂಹದಿಂದ ಪಾಸ್ಟಿಕ್ ಸ್ವಚ್ಛತಾ ಅಭಿಯಾನ ನಡೆಯಿತು. 50ಕ್ಕೂ ಅಧಿಕ ಸದಸ್ಯರು ಕಾಲೇಜು ಆವರಣದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕಸವನ್ನು ಸ್ವಚ್ಛಗೊಳಿಸಿದರು.
    30ರಿಂದ 70 ವಷದ ವಯೋಮಾನದ ಸಮೂಹದ ಸದಸ್ಯರು ಪ್ರತಿದಿನ ಕಾಲೇಜು ಆವರಣದಲ್ಲಿ ವಾಯುವಿಹಾರಕ್ಕೆ ಬರುತ್ತಾರೆ. ಇದರಲ್ಲಿ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಗಳು, ವ್ಯಾಪಾರಸ್ಥರು, ನಿವೃತ್ತ ಅಧಿಕಾರಿಗಳು, ಬ್ಯಾಂಕಿನ ನಿವತ್ತ ಸಿಬ್ಬಂದಿ, ಸಕಾರಿ ಅಧಿಕಾರಿಗಳು, ಪತ್ರಕರ್ತರು ಉತ್ಸಾಹದಿಂದ ಭಾಗಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದರು.
    ಕಾಲೇಜು ಆವರಣ ಸ್ವಚ್ಛವಾಗಿರಬೇಕು, ಅದರಲ್ಲೂ ಪ್ಲಾಸ್ಟಿಕ್ ಮುಕ್ತವಾಗಿರಬೇಕು. ಪ್ಲಾಸ್ಟಿಕ್ ಪರಿಸರಕ್ಕೆ ಅತ್ಯಂತ ಹಾನಿಕಾರಕವಾಗಿದ್ದು, ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಮಾದರಿಯಾಬೇಕು. ಪರಿಸರಕ್ಕೆ ಹಾನಿಯಾಗುವ ಯಾವುದೇ ವಸ್ತುವಿನ ಬಳಕೆಯನ್ನು ನಿಷೇದಿಸಬೇಕು. ಅಲ್ಲದೇ ವಿದ್ಯಾರ್ಥಿಗಳು ಈ ಬಗ್ಗೆ ಈಗಿನಿಂದಲೇ ಅರಿವು ಹೊಂದಬೇಕು ಎಂದು ಅಭಿಯಾನದಲ್ಲಿ ಪಾಲ್ಗೊಂಡಿದ್ದ ಹಿರಿಯರು ಮಾರ್ಗದರ್ಶನ ಮಾಡಿದರು.
    ಜಗದೀಶ ಬಸೇಗೆಣ್ಣಿ, ವಿಜಯಕುಮಾರ ಮುದಕಣ್ಣನವರ, ಶಿವಬಸಪ್ಪ ವಾಲಿಶೆಟ್ಟರ್, ನಿಂಗಪ್ಪ ಕೋತಿನ್, ಎಂ.ಬಿ.ಅಂಬಿಗೇರ, ಎಸ್.ಜಿ.ಕೋಟಿ, ದಿವಾಕರ ಬದಾಮಿನಾಯ್ಕ, ಮಲ್ಲಿಕಾರ್ಜುನ ಶಿವಸಾಲಿ, ಚನ್ನಬಸಪ್ಪ ಕಳ್ಳಿಹಾಳ, ನಿರಂಜನ ಮರಡೂರ, ಬಸವರಾಜ ಮರಳಿಹಳ್ಳಿ, ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts