More

    ಮನವಿ ಮಾಡಿದ್ರೂ ಜಮೀನಿನಲ್ಲಿ ವಿದ್ಯುತ್ ಕಂಬ ಅಳವಡಿಕೆ: ವಿಷಯ ತಿಳಿದ ರೈತ ಹೃದಯಾಘಾತದಿಂದ ಸಾವು

    ಹಾವೇರಿ: ಜಮೀನಿನಲ್ಲಿ ವಿದ್ಯುತ್​ ಕಂಬಗಳನ್ನು ಹಾಕಬೇಡಿ ಎಂದು ಮನವಿ ಮಾಡಿಕೊಂಡರು ವಿದ್ಯುತ್​ ಕಂಬಗಳನ್ನು ಹಾಕಿದ ವಿಷಯ ತಿಳಿದು ರೈತನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹಾನಗಲ್ ತಾಲ್ಲೂಕಿನ ಇನಾಂ ಲಕ್ಮಾಪೂರ ಗ್ರಾಮದಲ್ಲಿ ನಡೆದಿದೆ.

    ಮಲ್ಲಿಕಾರ್ಜುನ ಶೀರಿಹಳ್ಳಿ ಮೃತ ರೈತ. ಮೂಡಿ ಏತ ನೀರಾವರಿ ಯೋಜನೆಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿದ್ದ ಕೆಇಬಿ ಅಧಿಕಾರಿಗಳು ಮುಂದಾಗಿದ್ದರು. ಮಲ್ಲಿಕಾರ್ಜುನ ಅಲ್ಪಸ್ವಲ್ಪ ಜಮೀನು ಹೊಂದಿದ್ದರು. ಆದರೆ, ಕೆಇಬಿ ಯೋಜನೆಯಂತೆ ರೈತನ ಜಮೀನಿನ ಮೇಲೆಯೇ ವಿದ್ಯುತ್​ ಕಂಬ ಹಾದು ಹೋಗುತ್ತಿತ್ತು.

    ಬೇರೆ ಮಾರ್ಗವಾಗಿ ವಿದ್ಯುತ್ ಸಂಪರ್ಕ ಮಾಡಿ ಎಂದು ಹಲವು ಬಾರಿ ಅಧಿಕಾರಿಗಳಿಗೆ ರೈತ ಮಲ್ಲಿಕಾರ್ಜುನ ಮನವಿ ಮಾಡಿದ್ದ. ಆದರೆ, ರೈತನ ಮನವಿಗೆ ಕ್ಯಾರೆ ಎನ್ನದ ಕೆಇಬಿ ಅಧಿಕಾರಿಗಳು ಮತ್ತು ತಹಸೀಲ್ದಾರರು ಗುತ್ತಿಗೆದಾರರ ಸಮ್ಮುಖದಲ್ಲಿ ರೈತನ ವಿರೋಧದ ನಡುವೆಯೂ ಹೈವೊಲ್ಟೇಜ್ ಲೈನ್ ಎಳೆಯಲು ಮುಂದಾಗಿದ್ದರು.

    ಇದರಿಂದ ಮನನೊಂದ ರೈತ ಕೆಲವೇ ಕ್ಷಣದಲ್ಲಿ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ತಹಸೀಲ್ದಾರ್​, ಕೆಇಬಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಉದ್ದಟತನಕ್ಕೆ ಬಲಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಾವಿಗೆ ಅಧಿಕಾರಿಗಳ ಮಾನಸಿಕ ಒತ್ತಡವೇ ಕಾರಣ ಎಂದು ದೂರಿದ್ದಾರೆ. ಆಡೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್​)

    3 ವರ್ಷದ ಹೆಣ್ಣು ಮಗುವಿನ ಕೊಲೆ ಪ್ರಕರಣ ಬೆನ್ನತ್ತಿ ಹೋದ ಪೊಲೀಸರಿಂದ ಸ್ಫೋಟಕ ರಹಸ್ಯ ಬಯಲು!

    ಅಂಗಡಿಯಿಂದ ಬಂದ ತಾಯಿ ಮಗಳ ಕೋಣೆ ತೆರೆಯುತ್ತಿದ್ದಂತೆ ಕಾದಿತ್ತು ಶಾಕ್​: ಬೆಚ್ಚಿಬೀಳಿಸುವ ಘಟನೆ ಇದು!

    ಯಾರಿಗೂ ಹೇಳದೆ ಮಕ್ಕಳೊಂದಿಗೆ ಮನೆಯಿಂದ ಹೊರಟ ದಂಪತಿಯ ಬದುಕು ದುರಂತ ಅಂತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts