More

    ಸಂವಿಧಾನ ಸರ್ವರ ಹಿತಕ್ಕೆ ಬದ್ಧ

    ಹಟ್ಟಿಚಿನ್ನದಗಣಿ: ಎಲ್ಲರೂ ಹಕ್ಕುಗಳನ್ನು ಪಡೆದುಕೊಳ್ಳಲು ಡಾ.ಬಾಬಾಸಾಹೇಬರ ಸಂವಿಧಾನದಿಂದ ಮಾತ್ರ ಸಾಧ್ಯ. ಅದು ಸರ್ವ ಜನಾಂಗದ ಹಿತ ಕಾಯುತ್ತದೆ ಎಂದು ಲಿಂಗಸುಗೂರು ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ್ ಹೇಳಿದರು.

    ಶಿಕ್ಷಣದಿಂದ ಬದಲಾವಣೆ ಸಾಧ್ಯ

    ಕೋಠಾ ಹಾಗೂ ಗೌಡೂರು ಗ್ರಾಮದಲ್ಲಿ ಸಂವಿಧಾನ ಅಮೃತ ಮಹೋತ್ಸವ ಜಾಥಾದಲ್ಲಿ ಭಾನುವಾರ ಮಾತನಾಡಿದರು. ಶಿಕ್ಷಣದಿಂದ ಮಾತ್ರ ಜನರು ಅಭಿವೃದ್ಧಿಯಾಗಲು ಸಾಧ್ಯ. ಹಾಗಾಗಿ ಶೈಕ್ಷಣಿಕವಾಗಿ ಸರ್ಕಾರ ಹಲವು ಅವಕಾಶ ಕಲ್ಪಿಸಿದೆ. ಸರ್ಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಜನತೆ ಪ್ರಜ್ಞಾವಂತರಾಗಿ ಬದುಕು ಕಟ್ಟಿಕೊಳ್ಳುವತ್ತ ಗಮನಹರಿಸಬೇಕು. ಜಾಥಾದ ಮೂಲಕ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪ್ರತಿದಿನ ಸಂವಿಧಾನದ ಅಶಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದರು.

    ಇದನ್ನೂ ಓದಿ: ‘ಶ್ರೀರಾಮ ಮತ್ತು ರಾಷ್ಟ್ರದ ವಿಚಾರದಲ್ಲಿ ರಾಜಿಯಿಲ್ಲ; ಕಾಂಗ್ರೆಸ್‌ನಿಂದ ಉಚ್ಚಾಟಿತರಾದ ನಂತರ ಆಚಾರ್ಯ ಪ್ರಮೋದ್ ಕೃಷ್ಣಂ ಮೊದಲ ಪ್ರತಿಕ್ರಿಯೆ

    ವಿವಿಧ ಕಲಾ ತಂಡ ಹಾಗೂ ವಿದ್ಯಾರ್ಥಿಗಳಿಂದ ಕಲಾ ಪ್ರದರ್ಶನ ಮೆರವಣಿಗೆ ಜಾಥಾದಲ್ಲಿ ನಡೆಯಿತು. ಪೈದೊಡ್ಡಿ ಮೂಲಕ ಆರಂಭವಾದ ಜಾಥಾ ಗುರುಗುಂಟಾ, ಗೌಡೂರು, ಕೋಠಾ, ಮಾಚನೂರು, ಯಲಗಟ್ಟಾ, ರೋಡಲಬಂಡಾ, ಆನ್ವರಿ, ಗೆಜ್ಜಲಗಟ್ಟಾ ಮೂಲಕ ಭಾನುವಾರ ಸಾಯಂಕಾಲ ಹಟ್ಟಿಯಲ್ಲಿ ಸಮಾವೇಶಗೊಳ್ಳಲಿದೆ.
    ಸಿಡಿಪಿಒ ಗೋಕುಲ್‌ಸಾಬ್, ಕೋಠಾ ಗ್ರಾಪಂ ಅಧ್ಯಕ್ಷೆ ಗುಂಡಮ್ಮ ಬಸನಗೌಡ, ಮಾಜಿ ಅಧ್ಯಕ್ಷ ಅಮರೇಗೌಡ, ಶಿಕ್ಷಕ ಪರಶುರಾಮ್ ನಗನೂರು, ಮಾನವ ಬಂಧುತ್ವ ವೇದಿಕೆ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ್ ಚಿತ್ರನಾಳ್, ಹಟ್ಟಿ ಜೈಭೀಮ್ ಯುವಸೇನೆಯ ಕಾರ್ಯದರ್ಶಿ ಸುರೇಶ್ ಮಾಚನೂರು, ಪ್ರಮುಖರಾದ ಯಲ್ಲಪ್ಪ, ಸಮೀರ್, ಲಾಲ್‌ಪೀರ್ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿ ಸಾರ್ವಜನಿಕರು, ವಿದ್ಯಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts