More

    ಬೀಡಾಡಿ ದನಗಳ ಹಾವಳಿ ನಿಯಂತ್ರಿಸಲು ಒತ್ತಾಯ

    ಹಟ್ಟಿಚಿನ್ನದಗಣಿ: ದಾರಿಹೋಕರಿಗೆ ಅಡ್ಡಿಯುಂಟು ಮಾಡಿ, ರೈತರ ಹೊಲಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿರುವ ಬೀಡಾಡಿದನಗಳ ನಿಯಂತ್ರಣಕ್ಕೆ ಆಗ್ರಹಿಸಿ ಸಾರ್ವಜನಿಕರು ಪಪಂ ಹಾಗೂ ಅಧಿಸೂಚಿತ ಪ್ರದೇಶ ಸಮಿತಿ ಕಚೇರಿಯ ಮುಖ್ಯಾಧಿಕಾರಿ ಜಗನ್ನಾಥ್ ಕುಲಕರ್ಣಿಗೆ ಸೋಮವಾರ ಮನವಿ ಸಲ್ಲಿಸಿದರು.

    ಇದನ್ನೂ ಓದಿರಿ: ಬೀಡಾಡಿ ದನಗಳ ನಿಯಂತ್ರಣಕ್ಕೆ ಕಠಿಣ ಕ್ರಮ

    ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ

    ಗ್ರಾಪಂ ಮಾಜಿ ಅಧ್ಯಕ್ಷ ಸೂಗಪ್ಪ ಗಲಗ್ ಮಾತನಾಡಿ, ಹಟ್ಟಿ-ರಾಯಚೂರು ಮುಖ್ಯ ರಸ್ತೆಯಲ್ಲಿ ಬೀಡುಬಿಟ್ಟಿರುವ ಬೀಡಾಡಿ ದನಗಳು, ಸಂಜೆಯಾಗುತ್ತಲೇ ಹೊಲಗಳಿಗೆ ನುಗ್ಗಿ ಬೆಳೆ ನಾಶ ಪಡಿಸುತ್ತಿವೆ. ಇವುಗಳಿಂದ ಸಾರ್ವಜನಿಕರು, ರೈತರಿಗೆ ತೊಂದರೆಯಾಗಿದೆ. ಸಾವಿರಾರು ರೂ. ವ್ಯಯಿಸಿ ಬಿತ್ತಿದ ಬೆಳೆಗಳೆಲ್ಲ ನಾಶವಾಗುತ್ತಿದ್ದು, ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ಕೂಡಲೇ ಪಪಂ ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

    ಕಳೆದ 6 ತಿಂಗಳಿಂದ ಹಟ್ಟಿಗೆ ಕುಡಿವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಕುರಿತು ಹಲವು ಬಾರಿ ಪಪಂ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ವಾರದೊಳಗೆ ಸಮಸ್ಯೆ ಇತ್ಯರ್ಥ ಪಡಿಸದಿದ್ದರೆ ಪಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಮಂಡಲ ಪ್ರಧಾನ್ ನರಸಿಂಗಬಾನ್ ಠಾಕೂರ್ ಎಚ್ಚರಿಸಿದರು.

    ಪಟ್ಟಣದ ಪ್ರಮುಖರಾದ ಜಗದೀಶ್, ಹುಲುಗಪ್ಪ ಟೈಲರ್, ಅಮರಗುಂಡಯ್ಯ ಸ್ವಾಮಿ, ಯಂಕಣ್ಣ ಯಾದವ್, ಮಲ್ಲಪ್ಪ ಬುದ್ಧಿನ್ನಿ, ಅಮರಪ್ಪ ಅಳ್ಳಳ್ಳಿ, ಅಮೀನುದ್ದೀನ್, ಈರಪ್ಪ ಜಾಲಹಳ್ಳಿ, ವೀರೇಶ್ ಮಡಿವಾಳರ್, ಲಿಂಗಣ್ಣ ಹೊಳ್ಯಾಚಿ, ಗೋಕುಲ್‌ಸಾಬ್, ಮಲ್ಲಪ್ಪ ಮಸ್ಕಿ, ಪಪಂ ಸಿಬ್ಬಂದಿ ಅಕ್ರಂ ಖಾದ್ರಿ, ರಾಜಪ್ಪ ಮಾಚನೂರು ಮತ್ತಿತರರಿದ್ದರು.

    ನಾನು ಅಧಿಕಾರವಹಿಸಿಕೊಂಡು ಒಂದು ವಾರ ಕಳೆದಿದೆ. ಸರ್ವ ಸದಸ್ಯರ ಸಭೆ ಕರೆದು ಕುಡಿವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸಲಾಗಿದೆ. ಶೀಘ್ರವೇ ಅಗತ್ಯ ಕ್ರಮಕೈಗೊಳ್ಳುತ್ತೇವೆ. ಬೀಡಾಡಿ ದನಗಳ ನಿಯಂತ್ರಿಸಲು ವಾರದ ಗಡುವು ನೀಡಿ ಸಂಬಂಧಿಸಿದವರಿಗೆ ನೋಟಿಸ್ ನೀಡುತ್ತೇವೆ. ತಹಬಂದಿಗೆ ಬಾರದಿದ್ದರೆ ಗೋಶಾಲೆಗೆ ಹಸ್ತಾಂತರಿಸಲು ಕ್ರಮಕೈಗೊಳ್ಳುತ್ತೇವೆ.

    | ಜಗನ್ನಾಥ್ ಕುಲಕರ್ಣಿ ಹಟ್ಟಿ ಪಪಂ ಹಾಗೂ ಅಧಿಸೂಚಿತ ಪ್ರದೇಶ ಸಮಿತಿ ಕಚೇರಿಯ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts