More

    ತಂತ್ರಜ್ಞಾನದಿಂದ ಗ್ರಾಮೀಣ ಭಾರತ ಅಭಿವೃದ್ಧಿ

    ಸಕಲೇಶಪುರ: ತಂತ್ರಜ್ಞಾನ ಹೆಚ್ಚು ಅಭಿವೃದ್ಧಿಯಾದಂತೆ ಗ್ರಾಮೀಣ ಭಾರತವೂ ಅಭಿವೃದ್ಧಿಯಾಗಲಿದೆ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.
    ಹಾನುಬಾಳ್ ಗ್ರಾಪಂನಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿ, ಹಿಂದೆ ತಂತ್ರಜ್ಞಾನ ಮಹಾನಗರಗಳಿಗೆ ಸಿಮೀತವಾಗಿತ್ತು. ಇದರಿಂದ ಅಭಿವೃದ್ಧಿ ಎಂಬುದು ನಗರಗಳಿಗೆ ಮೀಸಲಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಗ್ರಾಮೀಣ ಭಾಗಗಳಲ್ಲೂ ವ್ಯಾಪಿಸುತ್ತಿರುವುದರಿಂದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದರು.
    ತಂತ್ರಜ್ಞಾನ ಮುಂದುವರಿದಂತೆ ಗ್ರಾಮೀಣ ಭಾಗದಲ್ಲೂ ಡಿಜಿಟಲೀಕರಣಗೊಳ್ಳುತ್ತಿರುವುದು ಬದಲಾಗುತ್ತಿರುವ ಭಾರತಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
    ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಮಾತನಾಡಿ, ಇಷ್ಟವಾದ ಪುಸ್ತಕಗಳು ಸಿಗುವುದೆ ಒಂದು ಪವಾಡ ಎಂಬಾಂತಾಗಿತ್ತು. ಆದರೆ, ಇದೀಗ ಗ್ರಂಥಾಲಯಗಳು ಡಿಜಿಟಲೀಕರಣವಾಗುತ್ತಿರುವುದರಿಂದ ಬೇಕಾದ ಪುಸ್ತಕವನ್ನು ಬೇಕಾದ ಸಂದರ್ಭ ಓದುವ ಹಾಗೂ ಮಾಹಿತಿ ಕಲೆ ಹಾಕುವ ಮೂಲಕ ಕೌಶಲವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದರು.
    ಜಿಪಂ ಸದಸ್ಯ ಸುಪ್ರದೀಪ್ತ್ ಯಜಮಾನ್ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts