More

    ಮನೆಮನೆಗಳಲ್ಲಿ ಗೋದಾಮು: ಗೋಮಾಂಸದ ರಾಶಿ! ಪೊಲೀಸರೇ ದಿಗಿಲು

    ಹರಿಯಾಣ: ಹರಿಯಾಣದ ನುಹ್ ಜಿಲ್ಲೆಯ ಜಮಲ್​ಘರ್​ ಗ್ರಾಮಲ್ಲಿರುವ ಹಲವು ಗೋದಾಮುಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ರಾಶಿ ರಾಶಿ ಗೋಮಾಂಸಗಳನ್ನು ವಶಕ್ಕೆ ಪಡೆದಿದ್ದಾರೆ. ಇದರ ಜತೆಗೆ ಅವುಗಳ ಚರ್ಮದಿಂದ ಮಾಡಿರುವ 2,572 ಚಾವಟಿಗಳೂ ದೊರೆತಿವೆ.

    ಇಲ್ಲಿ ಹಸುಗಳ ಕಳ್ಳಸಾಗಣೆ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ. ಇದರ ಬಗ್ಗೆ ಬಂದಿರುವ ವರದಿಯನ್ನು ಆಧರಿಸಿ ಪೊಲಿಸರು ದಾಳಿ ನಡೆಸಿದಾಗ ಇದು ಸಿಕ್ಕಿದೆ. ಇದರ ಜತೆಗೆ ಹಸುಗಳ ಕಳ್ಳಸಾಗಣೆಕೆಗಾಗಿ ಬಳಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪರಿಯ ಮಾಂಸಗಳನ್ನು ನೋಡಿ ಪೊಲೀಸರೇ ದಂಗಾಗಿದ್ದಾರೆ.

    ಕಳ್ಳಸಾಗಣೆ ಮೂಲಕ ಗೋವುಗಳನ್ನು ತರಲಾಗುತ್ತಿದ್ದು, ಅವುಗಳ ಮಾಂಸ ಮತ್ತು ಚರ್ಮವನ್ನು ದೆಹಲಿ ಮತ್ತು ಇತರ ಪ್ರದೇಶಗಳಿಗೆ ಸಾಗಣೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ನಂತರ ಪೊಲೀಸರು ಈ ಬಗ್ಗೆ ಅಕ್ಕಪಕ್ಕದ ಗ್ರಾಮಸ್ಥರಲ್ಲಿ ವಿಚಾರಿಸಿದಾಗ ಕಳ್ಳದಂಧೆ ನಡೆಯುತ್ತಿರುವ ಬಗ್ಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

    ಇದನ್ನೂ ಓದಿ: ಮೀನಿಗೆ ಗಾಳ ಹಾಕಿದಾಗ ಮಕ್ಕಳಿಗೆ ಸಿಕ್ತು ಚಿನ್ನದ ಮೂರ್ತಿ: ಮುಂದೇನಾಯ್ತು?

    ಇಡೀ ಗ್ರಾಮದಲ್ಲಿ ಅನೇಕ ಕಡೆಗಳಲ್ಲಿ ಈ ಕಳ್ಳವ್ಯವಹಾರ ನಡೆಯುತ್ತಿದೆ. ಇದಕ್ಕಾಗಿ ಗೋದಾಮುಗಳನ್ನು ಸ್ಥಾಪಿಸಲಾಗಿದೆ ಎಂಬ ಸುಳಿವಿನ ಆಧಾರದ ಮೇಲೆ ಬೆಳಗ್ಗೆ 5ರಿಂದ ಸಂಜೆ 7ರವರೆಗೆ ಶೋಧನಾ ಕಾರ್ಯ ಜರುಗಿಸಲಾಗಿತ್ತು. ಯಾರೂ ಹಳ್ಳಿಯಿಂದ ಪರಾರಿಯಾಗದಂತೆ ಪೊಲೀಸರು ಗ್ರಾಮವನ್ನು ಸುತ್ತುವರೆದಿದ್ದರು. ಪ್ರತಿಯೊಂದು ಮನೆಯಲ್ಲಿಯೂ ಶೋಧನಾ ಕಾರ್ಯ ನಡೆಸಲಾಗಿತ್ತು. ನಂತರ ಹಲವು ಕಡೆಗಳಲ್ಲಿ ಗೋಮಾಂಸ ಮತ್ತು ಚಾವಟಿಗಳು ಪತ್ತೆಯಾಗಿವೆ.

    ಪೊಲೀಸರು ಬಂದಿರುವ ಸುಳಿವು ಸಿಗುತ್ತಿದ್ದಂತೆಯೇ ಅನೇಕ ಮಂದಿ ಓಡಿ ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳಸಾಗಣೆ ಸಂಬಂಧ ನಿನ್ನಾ ಅಲಿಯಾಸ್ ನಿಜಾಮ್, ಸಲಾಮು, ದಿನು, ಅಹ್ಮದ್ ಹುಸೇನ್, ಬಾಬುಡಿನ್, ಅಸಾರ್, ಇಲ್ಯಾಸ್, ಮಮ್ಮನ್ ನಿವಾಸಿಯನ್ ಅವರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ.
    ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.

    ಇದನ್ನೂ ಓದಿ: ಆರೋಗ್ಯ ಸಚಿವರಿಗೆ ಕರೊನಾ ಸೋಂಕು! ಆಸ್ಪತ್ರೆಗೆ ದಾಖಲು

    ನಿಜೂಮ್, ಫರುಖ್, ಹಸೀಮ್ ಅವರ ಮನೆಗಳಲ್ಲಿ ನಿರ್ಮಿಸಲಾದ ಗೋದಾಮುಗಳ ಮೇಲೆ ನಡೆದ ದಾಳಿಯಲ್ಲಿ ಒಟ್ಟು 1060 ಚಾವಟಿ, ದಿನು, ಅಹ್ಮದ್ ಹುಸೇನ್, ಇಲ್ಯಾಸ್, ಮಮ್ಮನ್ ಅವರ ಮನೆಗಳಲ್ಲಿ ನಿರ್ಮಿಸಲಾದ ಗೋದಾಮುಗಳಲ್ಲಿ ಹಸು ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ. ನಿನ್ನಾ ಅಲಿಯಾಸ್ ನಿಜಾಮ್, ಫಾರೂಕ್, ಹಸೀಮ್, ದಿನು, ಆಲ್ಲಿ, ಆಸಿಫ್, ನಿಜಾಮ್, ಮುಸ್ತಾಕಿಮ್, ನಿಯಾಜು ನಿರ್ಮಿಸಿರುವ ಗೋದಾಮುಗಳಿಂದ ಒಟ್ಟು 2572 ಹಸುವಿನ ಚರ್ಮ ಮತ್ತು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    2019ರಲ್ಲಿ ಗೋವು ಕಳ್ಳಸಾಗಾಣಿಕೆದಾರರನ್ನು ವಿರೋಧಿಸಿದ್ದಕ್ಕಾಗಿ ಗೋಪಾಲ್ ಎಂಬ ಯುವಕನನ್ನು ಇದೇ ಸ್ಥಳದಲ್ಲಿ ಕೊಲೆ ಮಾಡಲಾಗಿತ್ತು. (ಏಜೆನ್ಸೀಸ್​)

    ಒಂದು ಫೋಟೋ ನೂರು ಭಾವ: ಚಿಕಿತ್ಸೆಗಾಗಿ ಬಿಳಿಯನನ್ನು ಒಯ್ಯುತ್ತಿರುವ ಕಪ್ಪುವರ್ಣೀಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts