More

    ಪಟಾಕಿ ಗೋದಾಮು ಮೇಲೆ ದಾಳಿ, ಪ್ರಕರಣ ದಾಖಲು

    ಶಿವಮೊಗ್ಗ: ಜಿಲ್ಲೆಯಾದ್ಯಂತ ಪಟಾಕಿ ಗೋದಾಮು ಮತ್ತು ಮಳಿಗೆಗಳ ಮೇಲೆ ಪೊಲೀಸರು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳ ತಂಡ ದಾಳಿ ನಡೆಸಿ 63 ಮಳಿಗೆ ಮತ್ತು ಗೋದಾಮುಗಳನ್ನು ಪರಿಶೀಲಿಸಿದ್ದು ನಿಯಮ ಉಲ್ಲಂಘಿಸಿ ಪಟಾಕಿ ಸಂಗ್ರಹಿಸಿಟ್ಟಿದ್ದ ಮತ್ತು ಮಾರಾಟ ಮಾಡುತ್ತಿದ್ದ ಮೂರು ಮಳಿಗೆ ಮತ್ತು ಗೋದಾಮು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರ ಸೂಚನೆ ಮೇರೆಗೆ ಪಟಾಕಿಗಳನ್ನು ಮಾರಾಟ ಮಾಡುವ ಮಳಿಗೆ ಮತ್ತು ಗೋದಾಮುಗಳ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮವಾಗಿ ಪರಿಶೀಲಿಸಿದ್ದು ಭದ್ರಾವತಿ ಹೊಸಮನೆ, ಹೊಳೆಹೊನ್ನೂರು ಮತ್ತು ಕೋಟೆ ಠಾಣೆ ವ್ಯಾಪ್ತಿಯ ತಲಾ ಒಂದೊಂದು ಗೋದಾಮಿನಲ್ಲಿದ್ದ ಪರವಾನಗಿಗಿಂತ ಹೆಚ್ಚುವರಿ ಸಂಗ್ರಹಿಸಿದ್ದ ಒಟ್ಟಾರೆ 1,700 ಕೆಜಿ ಪಟಾಕಿಗಳನ್ನು ಜಪ್ತಿ ಮಾಡಲಾಗಿದೆ.
    ಡಿವೈಎಸ್ಪಿಗಳಾದ ಬಾಲರಾಜ್, ಎಂ.ಸುರೇಶ್, ನಾಗರಾಜ್, ಗೋಪಾಲಕೃಷ್ಣ ತಿಮ್ಮಣ್ಣನಾಯ್ಕ್, ಶಿವಾನಂದ್ ಮದರಖಂಡಿ, ಗಜಾನನ ವಾಮನ ಸುತಾರ ಹಾಗೂ ಆಯಾ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐಗಳು ಹಾಗೂ ಕಂದಾಯ, ಲೋಕೋಪಯೋಗಿ, ಅಗ್ನಿಶಾಮಕ, ಮೆಸ್ಕಾಂ, ಮಹಾನಗರ ಪಾಲಿಕೆ, ನಗರ ಪಾಲಿಕೆ, ತಾಲೂಕು ಪಂಚಾಯತಿಯ ಅಧಿಕಾರಿಗಳನ್ನೊಳಗೊಂಡ ಪ್ರತ್ಯೇಕ ತಂಡ ಕಾರ್ಯಾಚರಣೆ ನಡೆಸಿತು.
    ಶಿವಮೊಗ್ಗ-ಎ ಉಪವಿಭಾಗ ಮತ್ತು ಬಿ ಉಪ ವಿಭಾಗದಲ್ಲಿ ತಲಾ 3, ಭದ್ರಾವತಿ ಉಪವಿಭಾಗದಲ್ಲಿ 21, ಸಾಗರ ಉಪ ವಿಭಾಗದಲ್ಲಿ 9, ಶಿಕಾರಿಪುರ ಉಪವಿಭಾಗದಲ್ಲಿ 20, ಮತ್ತು ತೀರ್ಥಹಳ್ಳಿ ಉಪ ವಿಭಾಗದಲ್ಲಿ 7 ಸೇರಿ ಜಿಲ್ಲೆಯಾದ್ಯಂತ ಒಟ್ಟು 63 ಮಳಿಗೆ ಮತ್ತು ಗೋದಾಮುಗಳಲ್ಲಿ ಪಟಾಕಿ ಸಂಗ್ರಹ ಮತ್ತು ಮಾರಾಟಕ್ಕೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಮತ್ತು ಪರವಾನಿಗೆ ಪಡೆದಿರುವ ಬಗ್ಗೆ, ಮಳಿಗೆ ಹಾಗೂ ಗೋದಾಮುಗಳಲ್ಲಿ ಎಲ್ಲ ಅವಶ್ಯಕ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತಿರುವ ಬಗ್ಗೆ ಮತ್ತು ಪಟಾಕಿ ಮಾರಾಟ ಮಾಡಲು ನಿರ್ಮಿಸಿರುವ ಮಳಿಗೆಗಳು ಸುರಕ್ಷತಾ ದೃಷ್ಠಿಯಿಂದ ಸೂಕ್ತವಿರುವ ಬಗ್ಗೆ ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts