More

    ಬಿಳಿಯನ ರಕ್ಷಣೆಗೆ ಕಪ್ಪುವರ್ಣೀಯರೇ ಬರಬೇಕಾಯ್ತು!

    ಲಂಡನ್‌: ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಕಪ್ಪುವರ್ಣೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಹತ್ಯಾಕಾಂಡಗಳನ್ನು ವಿರೋಧಿಸಿ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಅಮೆರಿಕ, ಲಂಡನ್​ನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿದೆ.

    ಇದೇ ವೇಳೆ, ವರ್ಣಭೇದ ನೀತಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ ವೇಳೆ ಗಾಯಗೊಂಡ ಬಿಳಿ ವರ್ಣದ ವ್ಯಕ್ತಿಯೊಬ್ಬನನ್ನು ಕಪ್ಪು ವರ್ಣೀಯ ಸಮುದಾಯದ ವ್ಯಕ್ತಿ ಚಿಕಿತ್ಸೆಗಾಗಿ ಹೊತ್ತೊಯ್ಯುತ್ತಿರುವ ಫೋಟೊ ವೈರಲ್‌ ಆಗಿದ್ದು ಇದೀಗ ಭಾರಿ ಚರ್ಚೆಗೂ ಗ್ರಾಸವಾಗಿದೆ. ಮಾತ್ರವಲ್ಲದೇ ವಿಶ್ವದ ಪ್ರಮುಖ ಪತ್ರಿಕೆಗಳಲ್ಲಿ ಈ ಫೋಟೋ ಪ್ರಕಟಗೊಂಡಿದೆ.

    ಆಫ್ರಿಕನ್​ ಮೂಲದ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ನಂತರ ಅಟ್ಲಾಂಟಾದಲ್ಲಿ 27 ವರ್ಷದ ರೇಶರ್ಡ್‌ ಬ್ರೂಕ್ಸ್‌ ಎಂಬ ಕಪ್ಪುವರ್ಣೀಯರನ್ನು ಹತ್ಯೆ ಮಾಡಿರುವ ಪ್ರಕರಣದ ಹಿನ್ನೆಲೆಯಲ್ಲಿ ಲಂಡನ್​ನಲ್ಲಿಯೂ ಪ್ರತಿಭಟನೆ ನಡೆಯುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ.

    ಇದನ್ನೂ ಓದಿ: ಇನ್ನೋರ್ವ ಕಪ್ಪುವರ್ಣೀಯನ ಹತ್ಯೆ! ಅಮೆರಿಕದಲ್ಲಿ ಭುಗಿಲೆದ್ದಿದೆ ಹಿಂಸಾಚಾರ

    ಸಾವಿರಾರು ಮಂದಿ ಪ್ರತಿಭಟನೆ ನಡೆಸುವಾಗ ಬಿಳಿ ವರ್ಣದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡ. ಕೂಡಲೇ ಕಪ್ಪು ವರ್ಣೀಯ ವ್ಯಕ್ತಿ ಜನರ ನಡುವಿನಿಂದ ನುಗ್ಗಿ ಬಂದು ತಡ ಮಾಡದೇ ಬಿಳಿವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಚಿಕಿತ್ಸೆಗಾಗಿ ಧಾವಿಸಿದ. ಆತನ ಹಿಂದೆ ಇನ್ನೂ ಕೆಲವು ಕಪ್ಪುವರ್ಣೀಯರು ಬಂದರು.

    ಪ್ರತಿಭಟನೆಯ ಫೋಟೋ ಕ್ಲಿಕ್ಕಿಸುತ್ತಿದ್ದ ಪ್ರಸಿದ್ಧ ಛಾಯಾಚಿತ್ರಕಾರ ರಾಯಿಟರ್ಸ್‌ ಸಂಸ್ಥೆಯ ಡೈಲನ್‌ ಮಾರ್ಟಿನೆಜ್‌ ಕೂಡಲೇ ಇದನ್ನು ಕ್ಲಿಕ್ಕಿಸಿದ್ದಾರೆ. ಜತೆಗೆ ವಿಡಿಯೋ ಕೂಡ ಮಾಡಿದ್ದಾರೆ. ‘ಗಾಯಗೊಂಡಿರುವ ವ್ಯಕ್ತಿ ಬಲಪಂಥೀಯ. ಆತನಿಗೆ ಸಹಾಯ ಮಾಡಬೇಡ’ ಎಂದು ಗುಂಪಿನಲ್ಲಿದ್ದ ಕೆಲವರು ಕೂಗಿದ್ದರೂ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದ ಕಪ್ಪುವರ್ಣೀಯ ಧಾವಿಸಿ ಬಂದಿರುವುದಾಗಿ ಮಾರ್ಟಿನೆಜ್‌ ತಿಳಿಸಿದ್ದಾರೆ.

    ಇದನ್ನೂ ಓದಿ:  ಅಣ್ವಸ್ತ್ರದಲ್ಲಿ ಭಾರತಕ್ಕಿಂತಲೂ ಪಾಕ್, ಚೀನಾನೇ ಸ್ಟ್ರಾಂಗ್​ ಎಂದಿದೆ ವರದಿ!

    ಈ ಚಿತ್ರ ಇದೀಗ ಇಡೀ ವಿಶ್ವದ ಗಮನ ಸೆಳೆದಿದೆ. ಕಪ್ಪುವರ್ಣೀಯರನ್ನು ಬಿಳಿಯರು ಎಷ್ಟೇ ದ್ವೇಷಿಸಿದರೂ ಅವರು ಮಾತ್ರ ಸಹಾಯಕ್ಕಾಗಿ ಕಿಂಚಿತ್​ ಯೋಚನೆ ಮಾಡುವುದಿಲ್ಲ. ಬಿಳಿ ವರ್ಣೀಯರು ಆ ಪ್ರತಿಭಟನೆ ಸಮಯದಲ್ಲಿ ನೆರೆದಿದ್ದರೂ ಆತನ ಸಹಾಯಕ್ಕಾಗಿ ಬಂದುದು ಕಪ್ಪುವರ್ಣೀಯನೇ. ಇದು ಅವರ ಪರಿಚಯವನ್ನು ತೋರಿಸುತ್ತದೆ ಎಂದು ಅನೇಕ ಕಮೆಂಟಿಗರು ಶ್ಲಾಘಿಸಿದ್ದಾರೆ.

    ನಂತರ ರಕ್ಷಣೆ ಮಾಡಿದ ಕಪ್ಪು ವರ್ಣೀಯನ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು ಆತನನ್ನು ಪ್ಯಾಟ್ರಿಕ್ ಹಚಿನ್ಸನ್ ಎಂದು ಗುರುತಿಸಿದ್ದಾರೆ. ಘಟನೆಯ ನಂತರ ಅವರು “ನಾವು ಇಂದು ಜೀವವನ್ನು ಉಳಿಸಿದ್ದೇವೆ” ಎಂದು ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವುದು ಕಂಡುಬಂದಿದೆ. (ಏಜೆನ್ಸೀಸ್​)

    ತಮಿಳುನಾಡಿನಲ್ಲಿ ನಾಲ್ಕು ಜಿಲ್ಲೆಗಳು ಸಂಪೂರ್ಣ ಲಾಕ್​ಡೌನ್​: ಮುಖ್ಯಮಂತ್ರಿ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts