More

    ಇನ್ನೋರ್ವ ಕಪ್ಪುವರ್ಣೀಯನ ಹತ್ಯೆ! ಅಮೆರಿಕದಲ್ಲಿ ಭುಗಿಲೆದ್ದಿದೆ ಹಿಂಸಾಚಾರ

    ಅಟ್ಲಾಂಟಾ: ಆಫ್ರಿಕನ್​ ಮೂಲದ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ನಂತರ ಅಮೆರಿಕದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ಇನ್ನೂ ಶಮನವಾಗುವ ಮೊದಲೇ ಇನ್ನೋರ್ವ ಕಪ್ಪು ವರ್ಣೀಯನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ!

    ಅಟ್ಲಾಂಟಾದಲ್ಲಿ ಈ ಘಟನೆ ನಡೆದಿದ್ದು, ಆಕಸ್ಮಿಕವಾಗಿ ಗುಂಡು ತಗುಲಿರುವುದಾಗಿ ಹೇಳಲಾಗುತ್ತಿದೆ. 27 ವರ್ಷದ ರೇಶರ್ಡ್‌ ಬ್ರೂಕ್ಸ್‌ ಎಂಬಾತ ಪೊಲೀಸರ ಗುಂಡಿಗೆ ಬಲಿಯಾದವ.

    ಈ ಘಟನೆ ಖಂಡಿಸಿ ಅಟ್ಲಾಂಟಾದಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಘಟನೆಯ ನೈತಿಕ ಹೊಣೆ ಹೊತ್ತು ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಅಟ್ಲಾಂಟಾ ಪೊಲೀಸ್‌ ಮುಖ್ಯಸ್ಥ ಎರಿಕಾ ಶೀಲ್ಡ್ಸ್‌ ರಾಜೀನಾಮೆ ನೀಡಿದ್ದಾರೆ. ಬ್ರೂಕ್ಸ್ ಹತ್ಯೆಯನ್ನು ಅಚಾತುರ್ಯ ಎಂದಿರುವ ಶೀಲ್ಡ್ಸ್, ತಾವು ರಾಜೀನಾಮೆ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
    ಈ ಕುರಿತು ಮಾಹಿತಿ ನೀಡಿರುವ ಅಟ್ಲಾಂಟಾ ನಗರದ ಮೇಯರ್ ಕೀಶಾ ಲ್ಯಾನ್ಸ್ ಬಾಟಮ್ಸ್, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಬ್ರೂಕ್ಸ್ ಮೇಲೆ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಬಾಟಮ್ಸ್ ಹೇಳಿದ್ದಾರೆ.

    ಇದನ್ನೂ ಓದಿ: ಅಮೆರಿಕ ಪ್ರತಿಭಟನೆಯಿಂದ ಹೊತ್ತಿ ಉರಿದ ಬಳಿಕ ಈ ಯುವಕನಿಗೆ ಗಿಫ್ಟ್​​ಗಳ ಸುರಿಮಳೆ!

    ಇಲ್ಲಿಯ ಪೊಲೀಸರ ಪ್ರಕಾರ, ಸ್ಥಳೀಯ ವೆಂಡಿ ರೆಸ್ಟೋರೆಂಟ್‌ನ ವಾಹನ ಪಾರ್ಕಿಂಗ್‌ ಸ್ಥಳದಲ್ಲಿರುವ ಕಾರೊಂದರಲ್ಲಿ ರೇಶರ್ಡ್‌ ಬ್ರೂಕ್ಸ್‌ ಮಲಗಿದ್ದ. ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಕೆಲವರು ಪೊಲೀಸರಿಗೆ ದೂರು ನೀಡಿದ್ದರು.

    ಸ್ಥಳಕ್ಕೆ ತೆರಳಿದ್ದ ಪೊಲೀಸರು, ಕಾರಿನಲ್ಲಿ ಮಲಗಿದ್ದ ಬ್ರೂಕ್ಸ್​ನಲ್ಲಿ ಎಬ್ಬಿಸಿದ್ದಾರೆ. ಈ ಸಮಯದಲ್ಲಿ ಅವರಿಗೆ ಬ್ರೂಕ್ಸ್ ಮದ್ಯಪಾನ ಮಾಡಿರುವ ಶಂಕೆ ವ್ಯಕ್ತವಾಗಿದೆ.
    ಮದ್ಯಪಾನದ ಪರೀಕ್ಷೆಗೆ ಒಳಗಾಗುವಂತೆ‌ ಸೂಚಿಸಿದ್ದಾರೆ. ಆದರೆ ಬ್ರೂಕ್ಸ್​ ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದೂ ಅಲ್ಲದೇ ಓಡಿ ಹೋಗಲು ಯತ್ನಿಸಿದ್ದಾನೆ.
    ಈ ಸಂದರ್ಭದಲ್ಲಿ ಪೊಲೀಸರು ಆತನನ್ನು ಹಿಡಿಯಲು ಪೊಲೀಸರು ಯತ್ನಿಸಿದಾಗ, ಅವರ ಕೈಯಲ್ಲಿದ್ದ ಟೇಸರ್‌ (ತಪ್ಪಿಸಿಕೊಂಡು ಹೋಗುವವರತ್ತ ವಿದ್ಯುತ್‌ ತರಂಗ ಹೊರಹೊಮ್ಮಿಸಿ, ಅವರು ಚಲಿಸದಂತೆ ಮಾಡಲು ಪೊಲೀಸರು ಉಪಯೋಗಿಸುವ ಸಾಧನ) ಕಿತ್ತುಕೊಂಡಿದ್ದಾನೆ ಬ್ರೂಕ್ಸ್‌. ಅದರೊಂದಿಗೆ ಓಡಿ ಹೋಗುತ್ತಿದ್ದಾಗ ಪೊಲೀಸರು ಗುಂಡು ಹಾರಿಸಿದರು. ಗುಂಡೇಟಿನಿಂದ ಕುಸಿದು ಬಿದ್ದ ಬ್ರೂಕ್ಸ್ ಸ್ಥಳದಲ್ಲೇ ಅಸುನೀಗಿದ್ದಾನೆ ಎಂದು ಹೇಳಲಾಗಿದೆ.

    VIDEO: ಜನಾಂಗೀಯ ದ್ವೇಷದ ವಿರುದ್ಧ ಚುಂಬಿಸುತ್ತಾ ಪ್ರತಿಭಟನೆ ಮಾಡಿದ ನವದಂಪತಿ!

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts