More

    ಹರ್ತಿ ನರೇಗಾ ಕಾಮಗಾರಿ ಪರಿಶೀಲನೆ, ಮತದಾನ ಜಾಗೃತಿ ಅಭಿಯಾನ

    ಗದಗ: ತಾಲೂಕಿನ ಹರ್ತಿ ಗ್ರಾಮದಲ್ಲಿ ನರೇಗಾದಡಿ ಪ್ರಗತಿಯಲ್ಲಿದ್ದ ಬದು ನಿರ್ಮಾಣ ಕಾಮಗಾರಿಯನ್ನು ತಾ.ಪಂ. ಸಹಾಯಕ ನಿರ್ದೇಶಕ (ಗ್ರಾ.ಉ) ಕುಮಾರ ಪೂಜಾರ ಪರಿಶೀಲಿಸಿ ಗ್ರಾಮದಲ್ಲಿನ ಕೂಲಿಕಾರರು ಉದ್ಯೋಗಕ್ಕಾಗಿ ಬೇರೆ ಊರುಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಕೂಲಿಕಾರ್ಮಿಕರಿಗೆ ಸ್ವಗ್ರಾಮದಲ್ಲಿ0iÉುೀ ನಿರಂತರವಾದ ಉದ್ಯೋಗವನ್ನು ಕಲ್ಪಿಸಲಾಗುವುದು. ಅದ್ದರಿಂದ ಉದ್ಯೋಗ ಖಾತ್ರಿ ಅಭಿಯಾನದಡಿ ಕೆಲಸ ಪಡೆಯಲು ನಮೂನೆ-06 ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.

    ಎ.ಡಿ.ಪಿ.ಸಿ ಕಿರಣಕುಮಾರ ಮಾತನಾಡಿ ನರೇಗಾ ಯೋಜನೆಯ ನಿಯಮಾನುಸಾರ ಕೂಲಿ ಕಾರ್ಮಿಕರು ಕೆಲಸ ನಿರ್ವಹಣೆ ಮಾಡಬೇಕು, ಹಾಜರಾತಿಯಲ್ಲಿ ಕಡ್ಡಾಯವಾಗಿ ಹೆಸರಿದ್ದ ಕೂಲಿಕಾರರು ಮಾತ್ರ ಕೆಲಸಕ್ಕೆ ಹಾಜರಾಗಬೇಕು ಹಾಗೂ ಕೆಲಸದ ಪ್ರಮಾಣಕ್ಕೆ ತಕ್ಕಂತೆ ಕೂಲಿ ಮೊತ್ತ ಪಾವತಿಸಲಾಗುವದು, ಗಂಡು ಮತ್ತು ಹೆಣ್ಣಿಗೆ ಸಮಾನ ಕೂಲಿ ನೀಡಲಾಗುವುದು ಎಂದು ತಿಳಿಸಿದರು.

    2024 ರ ಲೋಕಸಭೆ ಚುನಾವಣೆಯ ಪ್ರಯುಕ್ತ ಕಾಮಗಾರಿ ಸ್ಥಳದಲ್ಲಿ ಪಿ ಡಿ ಓ ಶಿವಲೀಲಾ ಅಂಗಡಿ ಹಾಜರಿದ್ದ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿ ಪ್ರತಿಯೊಬ್ಬ ಮತದಾರರು ಕೂಡ  ಮತದಾನ ಮಾಡುವುದು ಅವರ ಆದ್ಯ ಕರ್ತವ್ಯವಾಗಿರುತ್ತದೆ. 18 ವರ್ಷ ತುಂಬುದ ಯುವ ಮತದಾರರಿಗೆ VHA App  ದಲ್ಲಿ ನೋಂದಾಯಿಸಿಕೊಂಡು ಮತದಾರರಾಗಲು ಕರೆ ನೀಡಿದರು. ಮತದಾನ ಪ್ರಕ್ರಿ0iÉುಯಿಂದ ಯಾವೊಬ್ಬ ವ್ಯಕ್ತಿಯು ಕೂಡ ಹೊರಗುಳಿಯಬಾರದು ಎಂದು ತಿಳಿಸಿದರು, ನಂತರ ಹಾಜರಿದ್ದ ಕೂಲಿಕಾರರಿಗೆ ಮತದಾನ ಪ್ರತಿಜ್ಞಾ ವಿಧಿ ಭೋದಿಸಿದರು.

    ಈ ಸಂದರ್ಭದಲ್ಲಿ ನರೇಗಾ ತಾಂತ್ರಿಕ ಸಹಾಯಕ ಅಜಯ ಅಬ್ಬಿಗೇರಿ, ಬಿ.ಎಫ್.ಟಿ ಸಿದ್ದಯ್ಯ ಹೀರೆಮಠ, ಗ್ರಾಮ ಪಂಚಾಯತ ಸಿಬ್ಬಂದಿಗಳು, ನರೇಗಾ ಕಾಯಕ ಬಂಧುಗಳು, ನರೇಗಾ ನೋಂದಾಯಿತ ಕೂಲಿಕಾರರು ಹಾಜರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts