More

    ಭೋಜಪುರಿಗೆ ಹರ್ಷಿಕಾ; ಲಂಡನ್​ನಲ್ಲಿ ಇಡೀ ಚಿತ್ರದ ಚಿತ್ರೀಕರಣ

    ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಹರ್ಷಿಕಾ ಪೂಣಚ್ಚ ದಕ್ಷಿಣ ಭಾರತದ ಎಲ್ಲ ಚಿತ್ರರಂಗಗಳಲ್ಲಿ ಕೆಲಸ ಮಾಡಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ, ತುಳು, ಕೊಡವ ಮತ್ತು ಕೊಂಕಣಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರ ಆ ಬಹುಭಾಷಾ ಖಾತೆಗೆ ಭೋಜಪುರಿಯೂ ಸೇರಿಕೊಳ್ಳುತ್ತಿದೆ. ಅಂದರೆ, ಶೀರ್ಷಿಕೆ ಅಂತಿಮವಾಗದ ಭೋಜಪುರಿ ಭಾಷೆಯ ಸಿನಿಮಾವೊಂದನ್ನು ಒಪ್ಪಿಕೊಂಡು, ಅರ್ಧ ಭಾಗದ ಚಿತ್ರೀಕರಣವನ್ನೂ ಮುಗಿಸಿದ್ದಾರೆ ಹರ್ಷಿಕಾ.

    ಸದ್ಯ ಲಂಡನ್​ನಲ್ಲಿರುವ ಹರ್ಷಿಕಾ ಅಲ್ಲಿಂದಲೇ ಆ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘ಆರೇಳು ಭಾಷೆಯಲ್ಲಿ ನಟಿಸಿದ ನನಗೆ ಇದೀಗ ಭೋಜಪುರಿಯಲ್ಲಿಯೂ ನಟಿಸುವ ಅವಕಾಶ ಸಿಕ್ಕಿದೆ. ಭೋಜಪುರಿಯಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಪವನ್ ಸಿಂಗ್ ಈ ಚಿತ್ರದ ನಾಯಕ. ಯಾಶಿ ಪ್ರೊಡಕ್ಷನ್ಸ್​ನಲ್ಲಿ ಅಭಯ್ ಸಿನ್ಹಾ ಎಂಬುವವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ’ ಎನ್ನುವ ಹರ್ಷಿಕಾ, ‘ಭೋಜಪುರಿ ಜತೆಗೆ ಹಿಂದಿಗೂ ಈ ಚಿತ್ರ ಡಬ್ ಆಗಿ ತೆರೆಕಾಣಲಿದೆ.

    ಲವ್​ಸ್ಟೋರಿವುಳ್ಳ ಈ ಚಿತ್ರದ ಪೂರ್ತಿ ಶೂಟಿಂಗ್ ಲಂಡನ್​ನಲ್ಲಿ ನಡೆಯುತ್ತಿದೆ. ಈಗಾಗಲೇ ಶೇ. 50 ಭಾಗದ ಶೂಟಿಂಗ್ ಸಹ ಮುಗಿದಿದೆ. ಶ್ರೀಮಂತ ಕುಟುಂಬದಿಂದ ಬಂದ ಹುಡುಗಿಯಾಗಿ ನಾನಿಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂಬುದು ಅವರ ಮಾತು. ಭೋಜಪುರಿ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ಸಿನಿಮಾ ನಿರ್ದೇಶನ ಮಾಡಿರುವ ಪ್ರೇಮಾಂಶು ಸಿಂಗ್ ಈ ಚಿತ್ರಕ್ಕೆ ಆಕ್ಷನ್- ಕಟ್ ಹೇಳುತ್ತಿದ್ದಾರೆ. ಸದ್ಯ ಕನ್ನಡದಲ್ಲಿಯೂ ಎರಡು ಸಿನಿಮಾ ಕೆಲಸಗಳಲ್ಲಿ ಹರ್ಷಿಕಾ ಬಿಜಿಯಾಗಿದ್ದಾರೆ.

    ಕದಿಯೋಕಂತಲೇ 3 ಬೈಕ್​ಗಳಲ್ಲಿ 6 ಮಂದಿ, 6 ಕಿ.ಮೀ. ಚೇಸ್ ಮಾಡಿದ್ರು; ಯಾರಿವರಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts