More

    ಉತ್ತರ ಕರ್ನಾಟಕದ ಚಿಕ್ಕೋಡಿ ಬಳಿಯ ಸವಸುದ್ದಿ ಗ್ರಾಮದಲ್ಲಿ ಭುವನ್- ಹರ್ಷಿಕಾ!; ಕರೊನಾ ಜಾಗೃತಿ ಜತೆಗೆ ದಿನಸಿ ವಿತರಣೆ

    ಬೆಂಗಳೂರು: ಭುವನಂ ಫೌಂಡೇಷನ್ ವತಿಯಿಂದ ಕಳೆದೊಂದು ತಿಂಗಳಿಂದ ಒಂದಿಲ್ಲೊಂದು ರೀತಿಯಲ್ಲಿ ಎಲ್ಲರಿಗೂ ಸಹಾಯದ ಹಸ್ತ ಚಾಚುತ್ತಿರುವ ಭುವನ್ ಮತ್ತು ಹರ್ಷಿಕಾ, ಇದೀಗ ಉತ್ತರ ಕರ್ನಾಟಕದ ಭಾಗಕ್ಕೂ ತೆರಳಿದ್ದಾರೆ. ಬೆಂಗಳೂರು ಸುತ್ತಮುತ್ತ, ಕೊಡಗಿನಲ್ಲಿ ಸಾಕಷ್ಟು ಜನೋಪಕಾರಿ ಸೇವೆ ಸಲ್ಲಿಸಿದ್ದ ಈ ಜೋಡಿ ಇದೀಗ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಸವಸುದ್ದಿ ಗ್ರಾಮದಲ್ಲಿಯೂ ಬೀಡು ಬಿಟ್ಟಿದ್ದಾರೆ.

    ಇದನ್ನೂ ಓದಿ: ಮೊದಲು ಮಾನವರಾಗೋಣ … ರಶ್ಮಿಕಾ ಬಗ್ಗೆ ಮಾತಾಡಿದವರ ಬಗ್ಗೆ ರಕ್ಷಿತ್ ಬೇಸರ

    ಭುವನಂ ಸಂಸ್ಥೆಯ ರಾಯಬಾರಿಗಳಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರಾಯಭಾಗದ, ಸವಸುದ್ದಿ ಗ್ರಾಮಕ್ಕೆ ಭೇಟಿ ನೀಡುವ ಮೂಲಕ ಉತ್ತರ ಕರ್ನಾಟಕದಲ್ಲಿ ಭುವನಂ ಸಂಸ್ಥೆಯ ಅಡಿಯಲ್ಲಿ ಆಯೋಜಿಸಲಾದ “ಉಷಾರ್” – ಕರ್ನಾಟಕ ಕರೊನಾ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಅದೇ ಗ್ರಾಮವನ್ನು ಆಯ್ದುಕೊಳ್ಳಲು ಬಲವಾದ ಕಾರಣವೂ ಇದೆ. ಸವಸುದ್ದಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 70 – 80 ಸಾವುಗಳಾಗಿವೆ. ಅದನ್ನು ಅರಿತು ಖುದ್ದಾಗಿ ಬೆಂಗಳೂರಿನಿಂದ 12 ಗಂಟೆಗಳ ಕಾಲ ಅವರ ತಂಡದೊಡನೆ ಪಯಣ ಬೆಳೆಸಿ ಅಲ್ಲಿಯ ಜನರನ್ನು ಭೇಟಿ ಮಾಡಿ ಅವರ ತೊಂದರೆಗಳನ್ನು ಆಲಿಸಿದ್ದಾರೆ.

    ಇದನ್ನೂ ಓದಿ: ದರ್ಶನ್-ಪ್ರೇಮ್ ಹೊಸ ಚಿತ್ರ … ಸುದ್ದಿ ನಿರಾಕರಿಸಿದ ರಕ್ಷಿತಾ ಪ್ರೇಮ್

    ಅಷ್ಟೇ ಅಲ್ಲದೆ ಕರೊನಾ ಪೀಡಿತ 50 ಸಂಸಾರಗಳ ಮನೆಗೆ ತಾವೇ ತೆರಳಿ ಒಂದು ತಿಂಗಳಿಗೆ ಆಗುವಷ್ಟು ಅಗತ್ಯ ವಸ್ತುಗಳು, ದಿನಸಿ, ಔಷಧ ಮತ್ತು ಮಾಸ್ಕ್​ಗಳ್ಳನ್ನು ಹಂಚಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಅಲ್ಲಿನ ಜನರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts