More

    ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಓದಲಿ; ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯ

    ಹರಪನಹಳ್ಳಿ: ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಅಭ್ಯಾಸ ಮಾಡಿದರೆ ಖಾಸಗಿ ಶಾಲೆ, ಕಾಲೇಜುಗಳಿಗೆ ಭವಿಷ್ಯವಿಲ್ಲದಂತೆ ಮಾಡಬಹುದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಹಿತಿ ಡಿ.ರಾಮ ನಮಲಿ ಅವರ ‘ನಾನು ಕ್ವಾರಂಟೈನ್ ಆದದ್ದು’ ಎಂಬ ಪ್ರಬಂಧ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

    ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಬಡವರು, ಮದ್ಯಮ ಮತ್ತು ಕೆಳವರ್ಗದವರ ಮಕ್ಕಳು ಅಭ್ಯಾಸ ಮಾಡುತ್ತಾರೆ. ಇಲ್ಲಿ ಯಾರು ಐಎಎಸ್, ಐಪಿಎಸ್ ಮಕ್ಕಳು ಇರುವುದಿಲ್ಲ. ಹಾಗಾಗಿ ಸರ್ಕಾರಿ ಶಾಲಾ ಕಾಲೇಜುಗಳನ್ನು ಉತ್ತಮ ಪಡಿಸಬೇಕು ಎಂದರು.

    ಕನ್ನಡ ಸಾಹಿತ್ಯ ಎಂದರೆ ವಿವಿಧ ಕೊಂಬೆ, ರೆಂಬೆಗಳು, ಕಥೆ, ಕಾದಂಬರಿ, ಕಾವ್ಯಗಳನ್ನು ಒಳಗೊಂಡಿರುತ್ತವೆ. ಯಾವುದೇ ವಿಷಯ ಕುರಿತು ಪ್ರಬಂಧವನ್ನು ಬರೆಯಬಹುದು. ಆದರೆ, ಆ ಪ್ರಬಂಧ ವಾಚಕರಿಗೆ ಸಂತಸ ತಂದುಕೊಡಬೇಕು. ನಮ್ಮ ಕಣ್ಮುಂದೆ ನಡೆಯುವ ಘಟನೆಗಳ ಕುರಿತು ಅನೇಕ ಸಾಹಿತಿಗಳು ಪ್ರಬಂಧಗಳನ್ನು ಬರೆದಿದ್ದಾರೆ. ಅವುಗಳು ಖುಷಿ ಕೊಟ್ಟಿವೆ. ಸಾಹಿತಿ ಡಿ.ರಾಮನ ಮಲಿ ಬರೆದಿರುವ ‘ಕ್ವಾರಂಟೈನ್’ ಪದ ಅನೇಕ ಅರ್ಥಗಳನ್ನು ಕೊಡುತ್ತದೆ ಎಂದರು.

    ಲೇಖಕರಾದವರು ಸಾಮಾಜಿಕ ವೈರುಧ್ಯಗಳನ್ನು ಮತ್ತು ಸಮಕಾಲೀನ ತಲ್ಲಣಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

    ಇಂದು ಪಠ್ಯದಲ್ಲಿ ಯಾವುದೋ ವ್ಯಕ್ತಿ ಅಂಡಮಾನ್ ಜೈಲ್‌ನಿಂದ ಹಕ್ಕಿಯ ಮೇಲೆ ಹಾರಿಹೋಗುತ್ತಾರೆ ಎಂಬುದು ಸೇರಿಸಿದ್ದಾರೆ. ಆತನ ಹೆಸರು ಹೇಳಿದರೆ ಬೆದರಿಕೆ ಪತ್ರಗಳು ಬರುತ್ತಿವೆ. ಈಗಾಗಲೇ ನನಗೆ 7 ಬೆದರಿಕೆ ಪತ್ರಗಳು ಬಂದಿವೆ ಎಂದು ಆತಂಕ ವ್ಯಕ್ತಪಡಿಸಿದರು.

    ಲೇಖಕ ಡಿ.ರಾಮ ನಮಲಿ, ಬೆಂಗಳೂರಿನ ನಂ.ರೇಡಿಯೋ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಗಿರಿಧರ ಹವಾಲ್ದಾರ್ ಹಾಗೂ ಅಮೆರಿಕ ಬ್ರಾಕ್‌ಪೋರ್ಟ್ ನ್ಯೂಯಾರ್ಕ್ ವಿವಿ ವಿಶ್ರಾಂತ ಕುಲಪತಿ ಡಾ.ಟಿ.ಮಹಾದೇವರಾವ್ ಪುಸ್ತಕ ಕುರಿತು ಮಾತನಾಡಿದರು.

    ಪ್ರಾಚಾರ್ಯ ಎನ್.ಎಂ.ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಇಸಿಒ ಇಸ್ಮಾಯಿಲ್ ಎಲಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ರಾಜಬಕ್ಷಿ, ಎಸ್.ಕಾಶಿಮ್ ಸಾಹೇಬ್, ಬಸವರಾಜ ಸಂಗಪ್ಪನವರ್, ಹೇಮಪ್ಪ ಮೋರಿಗೇರಿ, ಉಪನ್ಯಾಸಕ ಹುಚ್ಚುರಾಯಪ್ಪ, ಸಾಹಿತಿಗಳಾದ ಮೇಟಿ ಕೊಟ್ರಪ್ಪ, ಹುರಕಡ್ಲಿ ಶಿವಕುಮಾರ, ಪೂಜಾರ ಷಣ್ಮುಖಪ್ಪ, ಸಿ.ಗಂಗಾಧರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts