More

    ಜನರಲ್ಲಿ ಮತದಾನ ಜಾಗೃತಿ ಮೂಡಿಸಿ

    ಹರಪನಹಳ್ಳಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಿಮಿತ್ತ ತರಬೇತಿ ನೀಡುವ ಸಲುವಾಗಿ ಚುನಾವಣಾ ಅಧಿಕಾರಿಗಳು ಪ್ರತಿಬೂತ್‌ಗಳಿಗೆ ತೆರಳಿ, ಮತದಾನ ಮಾಡುವ ಕುರಿತು ಪ್ರಾತ್ಯಕ್ಷಿಕೆ, ಅನುಮಾನಗಳ ಬಗೆಹರಿಸುವ ಕೆಲಸ ಮಾಡಲಿದ್ದಾರೆ ಎಂದು ತಹಸೀಲ್ದಾರ ಡಾ.ಶಿವಕುಮಾರ ಬಿರಾದಾರ ಹೇಳಿದರು.

    ಪಟ್ಟಣದಲ್ಲಿ ಚುನಾವಣಾ ಅಧಿಕಾರಿಗಳು, ಬಿಎಲ್‌ಒಗಳಿಗೆ ಪ್ರಾತ್ಯಕ್ಷಿಕ ಮತಯಂತ್ರಗಳನ್ನು ನೀಡಿ, ವಿವಿಧ ಗ್ರಾಮಗಳಿಗೆ ತೆರಳುವ ವಾಹನಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಚುನಾವಣಾ ಆಯೋಗದ ನಿರ್ದೇಶನದಂತೆ ಎಲೆಕ್ಷನ್ ನಿಗದಿಗೊಳಿಸುವ ಮುನ್ನ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪ್ರತಿಬೂತ್‌ಗೆ ಎರಡು ಬಾರಿ ಪ್ರಾತ್ಯಕ್ಷಕೆ ಹಾಗೂ ಅರಿವು ಮೂಡಿಸುವ ಕೆಲಸ ಪೂರ್ಣಗೊಳಿಸಬೇಕಿದೆ. ಒಂದು ತಿಂಗಳ ಕಾಲ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಂದೇಹಗಳು ಏನಾದರೂ ಇದ್ದಲ್ಲಿ ಮತದಾರರು, ರಾಜಕೀಯ ಮುಖಂಡರು ಬಗೆಹರಿಸಿಕೊಳ್ಳಬೇಕು ಎಂದರು.

    ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಮಾತನಾಡಿದರು. ಅಧಿಕಾರಿಗಳಾದ ಅರವಿಂದ, ಜಯಮಾಲತೇಶ್, ಉದಯಶಂಕರ, ಕುಬೇಂದ್ರನಾಯ್ಕ, ಕೊಟ್ರೇಶ, ವಿರೇಶ್, ವಿಶ್ವನಾಥ, ದೃವಕುಮಾರ, ಬಸವನಗೌಡ ಪಾಟೀಲ್, ಮಹ್ಮದ ಗನೀಫ್, ಹುಸೇನ ಪೀರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts