More

    VIDEO: ದ್ರಾವಿಡ್ ಅದ್ಭುತ ಕ್ಯಾಚ್‌ಗಳನ್ನು ಮೆಲುಕು ಹಾಕಿದ ಹರ್ಭಜನ್ ಸಿಂಗ್..!

    ನವದೆಹಲಿ: ದಿಗ್ಗಜ ರಾಹುಲ್ ದ್ರಾವಿಡ್ ಕೇವಲ ಬ್ಯಾಟ್ಸ್‌ಮನ್ ಅಷ್ಟೇ ಅಲ್ಲ, ಅತ್ಯುತ್ತಮ ಫೀಲ್ಡರ್ ಕೂಡ. ಅದರಲ್ಲೂ ಶಾಟ್ ಲೆಗ್, ಸಿಲ್ಲಿ ಪಾಯಿಂಟ್, ಸ್ಲಿಪ್‌ನಲ್ಲಿ ದ್ರಾವಿಡ್ ಹಿಡಿಯುತ್ತಿದ್ದ ಮನಮೋಹಕ ಕ್ಯಾಚ್‌ಗಳಿಗೆ ಬೆರಗಾದವರೇ ಇಲ್ಲ. ಬ್ಯಾಟಿಂಗ್‌ನಲ್ಲಿ ವಾಲ್ ಎಂದು ಹೆಸರು ಮಾಡಿದ್ದರೆ, ಅತ್ಯಂತ ಸುರಕ್ಷಿತ ಫೀಲ್ಡರ್ ಎಂದು ವಿಶ್ವ ಕ್ರಿಕೆಟ್‌ನಲ್ಲಿ ಹೆಸರು ಮಾಡಿದ್ದರು ಕನ್ನಡಿಗ ದ್ರಾವಿಡ್. ಸಹಪಾಠಿ ಹರ್ಭಜನ್ ಸಿಂಗ್ ದ್ರಾವಿಡ್ ಅವರ ಅತ್ಯಾಕರ್ಷಕ ಕ್ಯಾಚ್‌ಗಳ ವಿಡಿಯೋ ಬಿಡುಗಡೆ ಮಾಡಿದ್ದಾರೆ.

    ಇದನ್ನೂ ಓದಿ: ಧೋನಿ, ಕೊಹ್ಲಿ 10ನೇ ತರಗತಿಯಲ್ಲಿ ಪಡೆದ ಅಂಕಗಳೆಷ್ಟು ಗೊತ್ತೇ ?

    ಹರ್ಭಜನ್ ಸಿಂಗ್ ವಿಡಿಯೋ ಹಾಕಿದ ಬೆನ್ನಲ್ಲೇ ಮಾಜಿ ಆಟಗಾರ ಆಕಾಶ್ ಚೋಪ್ರಾ ಹಾಗೂ ಸ್ಪಿನ್ನರ್ ಆರ್.ಅಶ್ವಿನ್ ದ್ರಾವಿಡ್ ಕ್ಯಾಚ್ ಹಿಡಿಯುತ್ತಿದ್ದ ಕೌಶಲದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ಬ್ಯಾಟ್ಸ್‌ಮನ್ ಜತೆಗೆ ಓರ್ವ ಉತ್ತಮ ಫೀಲ್ಡರ್ ಕೂಡ ಅವರು, ಯುವ ಕ್ರಿಕೆಟಿಗರು ವಿಡಿಯೋ ಅವನ್ನು ಮನರಂಜನೆ ದೃಷ್ಟಿಯಿಂದ ನೋಡಲು ಬದಲಿಗೆ ಮಾದರಿಯಾಗಿ ಸ್ವೀಕರಿಸಬೇಕು ಎಂದು ಆಕಾಶ್ ಹೇಳಿದ್ದಾರೆ. ಭಾರತ ತಂಡದ ನಾಯಕನಾಗಿಯೂ ಕಾರ್ಯನಿರ್ವಹಿಸಿದ ದ್ರಾವಿಡ್, ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿದ್ದಾರೆ. ಭಾರತ ತಂಡದ ಪರ 164 ಟೆಸ್ಟ್ ಪಂದ್ಯಗಳಿಂದ 13288 ರನ್ ಬಾರಿಸಿದ್ದರೆ, 210 ಕ್ಯಾಚ್ ಹಿಡಿದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಕ್ಯಾಚ್ ಹಿಡಿದಿರುವ ಆಟಗಾರ ಎನಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಟಿಕ್​ಟಾಕ್​ ಬ್ಯಾನ್​ ಆಗಿದ್ದಕ್ಕೆ ವಾರ್ನರ್​ ಕಾಲೆಳೆದ ಅಶ್ವಿನ್​!

    ಟೆಸ್ಟ್ ಕ್ರಿಕೆಟ್ ಕೇವಲ ಇಬ್ಬರು ಆಟಗಾರರಷ್ಟೇ 200 ಕ್ಯಾಚ್ ಹಿಡಿದಿದ್ದಾರೆ. ಶ್ರೀಲಂಕಾದ ಮಹೇಲ ಜಯವರ್ಧನೆ (205ಕ್ಯಾಚ್, 149 ಟೆಸ್ಟ್) 2ನೇ ಆಟಗಾರ. ಭಾರತದ ಪರ ವಿವಿಎಸ್ ಲಕ್ಷ್ಮಣ್ (135 ಕ್ಯಾಚ್, 134 ಪಂದ್ಯ), ಸಚಿನ್ ತೆಂಡುಲ್ಕರ್ (115 ಕ್ಯಾಚ್, 200 ಪಂದ್ಯ) ನಂತರದ ಸ್ಥಾನದಲ್ಲಿದ್ದಾರೆ. 344 ಏಕದಿನ ಪಂದ್ಯಗಳಿಂದ ಸರಾಸರಿ 39.16 ರಂತೆ 10,889 ರನ್ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸಿರುವ ದ್ರಾವಿಡ್, 196 ಕ್ಯಾಚ್ ಹಾಗೂ 14 ಸ್ಪಂಪಿಂಗ್ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts