More

    ಕಾಲೇಜು ಕ್ಯಾಂಪಸ್‌ನಲ್ಲಿ ಬಣ್ಣದ ಲೋಕ

    ದಾವಣಗೆರೆ : ನಗರದ ಜೈನ್ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಬುಧವಾರ ಸಂಭ್ರಮದ ವಾತಾವರಣ. ಸದಾ ಓದು, ಪಾಠ ಕೇಳುವುದರಲ್ಲಿ ಮಗ್ನರಾಗಿರುತ್ತಿದ್ದ ವಿದ್ಯಾರ್ಥಿಗಳು ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು. ಬಗೆ ಬಗೆಯ ಉಡುಪು ತೊಟ್ಟಿದ್ದ ಯುವಕ ಯುವತಿಯರು ಎಲ್ಲ ಒತ್ತಡಗಳನ್ನು ಮರೆತು ಕ್ಯಾಂಪಸ್‌ನಲ್ಲಿ ಗರಿ ಬಿಚ್ಚಿ ಹಾರಿದರು.
     ಎತ್ನಿಕ್ ಡೇ ಅಂಗವಾಗಿ ಅಲ್ಲಿ ಬಣ್ಣದ ಲೋಕವೇ ಸೃಷ್ಟಿಯಾಗಿತ್ತು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸಾಂಪ್ರದಾಯಿಕ ಉಡುಪುಗಳಲ್ಲಿ ಮಿಂಚಿದರು. ಅವರು ಹಾಡಿದರು, ಕುಣಿದರು. ಕ್ಯಾಂಪಸ್ ತುಂಬ ಅವರ ಕಲರವ ಆವರಿಸಿತ್ತು. ಯುವತಿಯರು ಸೀರೆಗಳಲ್ಲಿ ಕಂಗೊಳಿಸಿದರೆ ಯುವಕರು ಅಂಗಿ, ಪಂಚೆ ತೊಟ್ಟು ಬಂದಿದ್ದರು. ವೈವಿಧ್ಯಮಯ ವೇಷಗಳಲ್ಲಿ ಗಮನ ಸೆಳೆದರು.
     ವಿವಿಧ ವಿಭಾಗದ ವಿದ್ಯಾರ್ಥಿಗಳು ಹಳ್ಳಿ ಜಾತ್ರೆ, ಗ್ರಾಮೀಣ ಸೊಗಡು, ಸಂಕ್ರಾಂತಿ ಹಬ್ಬ, ಮದುವೆ ಸಮಾರಂಭ, ದಸರಾ, ಗಣೇಶ ಉತ್ಸವ, ಕನ್ನಡ ಸಂಭ್ರಮ, ನವದುರ್ಗಿ ಮತ್ತು ಕೃಷ್ಣ ಜನ್ಮಾಷ್ಟಮಿ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು.
     ಹಿರಿಯ ಕಲಾವಿದ ಎ. ಮಹಾಲಿಂಗಪ್ಪ ಹಾಗೂ ಡಾ. ಶೃತಿ ರಾಜ್ ತಿರ್ಪುಗಾರರಾಗಿದ್ದರು. ವಿದ್ಯಾರ್ಥಿಗಳ ಉತ್ಸಾಹ, ಪ್ರತಿಭೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಚಾರ್ಯ ಡಾ. ಡಿ.ಬಿ. ಗಣೇಶ್, ಸಲಹೆಗಾರ ಡಾ. ಮಂಜಪ್ಪ ಸಾರಥಿ, ಸಂಚಾಲಕ ಡಾ. ಎಸ್. ಮೌನೇಶ ಆಚಾರಿ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts