More

    ಹರಪನಹಳ್ಳಿ ತಾಲೂಕು ಅಭಿವೃದ್ಧಿಗೆ ಆದ್ಯತೆ

    ಹರಪನಹಳ್ಳಿ: ಹಿಂದುಳಿದ ತಾಲೂಕನ್ನು ಅಭಿವೃದ್ಧಿಗೊಳಿಸಿ ರಾಜ್ಯಕ್ಕೆ ಮಾದರಿಯನ್ನಾಗಿ ಮಾಡಲು ಸರ್ವ ಪ್ರಯತ್ನ ಮಾಡುವುದಾಗಿ ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.

    ತಾಲೂಕಿನ ಬಾಗಳಿ ಗ್ರಾಮದಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕೇಂದ್ರ ಮತ್ತು ರಾಜ್ಯ ಡಬಲ್ ಇಂಜಿನ್ ಸರ್ಕಾರದ ಅವಧಿಯಲ್ಲಿ ಅನೇಕ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲಾಗಿದೆ. ರಾಜ್ಯದಲ್ಲಿ ಉತ್ತಮ ಅಭಿವೃದ್ಧಿಯಾಗಿದ್ದು ತಾಲೂಕಿನಲ್ಲೂ ಸಹ ಶಿಕ್ಷಣ, ವಸತಿ ನಿಲಯ, ಆರೋಗ್ಯ, ರಸ್ತೆ, ಕುಡಿವ ನೀರಿಗೆ ಆದ್ಯತೆ ನೀಡಲಾಗಿದೆ. ಮುಂದೆಯೂ ಸಹ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತಂದಲ್ಲಿ ತಾಲೂಕನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.

    ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ಬಾಗಳಿ ಕೊಟ್ರೇಶಪ್ಪ ಮಾತನಾಡಿ, ಬಿಜೆಪಿಯ ಎರಡು ಸರ್ಕಾರಗಳು ರೈತರಿಗೆ ಒತ್ತು ನೀಡಿದ್ದು, ಪಿಎಂ ಕಿಸಾನ್ ಮೂಲಕ ಅನೇಕ ಸೌಲಭ್ಯಗಳನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡುವ ಮೂಲಕ ರೈತ ಪರ ಸರ್ಕಾರಗಳಾಗಿವೆ. ಬಾಗಳಿ ಗ್ರಾಮದಲ್ಲಿ ಉತ್ತಮ ರಸ್ತೆ, ಕುಡಿವ ನೀರು ಒಳಗೊಂಡು ಇತರೆ ಕಾಮಗಾರಿ ಕೆಲಸಗಳನ್ನು ಮಾಡಲಾಗಿದ್ದು ತಾವೆಲ್ಲರೂ ಬಿಜೆಪಿ ಸಂಘಟನೆಯನ್ನು ಬಲಪಡಿಸಲು ಮುಂದಾಗಬೇಕು ಎಂದರು.

    ಚಿಕ್ಕಹಳ್ಳಿ ಹಾಗೂ ಮಾಡಲಗೆರಿಯಲ್ಲಿ 30 ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎಂ.ಕೆ.ಜಾವೀದ್, ಗ್ರಾಪಂ ಸದಸ್ಯ ಎನ್.ಮಂಜುನಾಥ, ಬಿಜೆಪಿ ಮುಖಂಡರಾದ ವಕೀಲ ಪ್ರಕಾಶ, ಕೆ.ಶಿವಾನಂದ, ಸಂಗಪ್ಪ, ನಂದಿಬೇವೂರು ರಾಮನಗೌಡ್ರು, ಜಗದೀಶ, ಸಿ.ರವಿ, ಸಿಪಿ ಮಂಜುನಾಥ, ಕೆ.ನಾರಪ್ಪ, ಶಂಕ್ರಪ್ಪ, ಹೊಳೆಯಾಚೆ ಉಮೇಶ, ವಿಶ್ವನಾಥ, ಇಮ್ರಾನ್, ಬಸವರಾಜ, ಅಜ್ಜಯ್ಯ, ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts