More

    ಭಕ್ತರಿಗಾಗಿ ಯಾತ್ರಿ ನಿವಾಸ ನಿರ್ಮಾಣ: ಹನುಮಸಾಗರದಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿಕೆ

    ಹನುಮಸಾಗರ: ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

    ಪಟ್ಟಣದಲ್ಲಿ ಶ್ರೀ ಅಂಬಾಭವಾನಿ ದೇವಸ್ಥಾನದ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಅಂಬಾಭವಾನಿ ದೇವಸ್ಥಾನಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಅವರು ಉಳಿದುಕೊಳ್ಳಲು 40 ಲಕ್ಷ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸುತ್ತಿದ್ದು, ಕೆಳಗಡೆ ಹಾಲ್ ಹಾಗೂ ಮೇಲ್ಗಡೆ ಕೋಣೆಗಳಿರಲಿವೆ. ಪಟ್ಟಣದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಭೋವಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಾಗಪ್ಪ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ಎಸ್‌ಎಸ್‌ಕೆ ಸಮುದಾಯದ ಅಧ್ಯಕ್ಷ ಮಾರುತಿಸಾ ರಂಗ್ರೆಜ್, ಭೋವಿ ಸಮುದಾಯದ ತಾಲೂಕಾಧ್ಯಕ್ಷ ಸೂಚಪ್ಪ ಭೋವಿ, ಮುಖಂಡರಾದ ಸಂಗಯ್ಯ ವಸ್ತ್ರದ, ಮಹಾಂತೇಶ ಅಗಸಿಮುಂದಿನ, ಭವಾನಿಸಾ ಪಾಟೀಲ್, ಮರೇಗೌಡ ಬೋದುರ, ರಾಮಣ್ಣ, ದುರಗಪ್ಪ, ಬಸಪ್ಪ, ಹನುಮಂತಪ್ಪ, ಯಮನಪ್ಪ, ಶರಣಪ್ಪ, ಅಂಬಸಾ ರಂಗ್ರೇಜ್, ಆನಂದ ಮೆಹರವಾಡೆ ಇತರರಿದ್ದರು.

    ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ: ಪಟ್ಟಣದ ಡಾ.ಅಂಬೇಡ್ಕರ ವೃತ್ತದಲ್ಲಿ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ಅಮರೇಗೌಡ ಬಯ್ಯಪುರ ಚಾಲನೆ ನೀಡಿದುರ. ತಳುವಗೇರಿ ಗ್ರಾಮದಿಂದ ಹನುಮಸಾಗರದ ಶ್ರೀ ಜಗದಂಬಾ ವೃತ್ತದವರೆಗೆ ಅಂದಾಜು 14 ಕಿಮೀ ರಸ್ತೆಗೆ ಮರು ಡಾಂಬರ್ ಹಾಕುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕೆಕೆಆರ್‌ಡಿಬಿ ಯೋಜನೆ ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 5.20 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

    ಇನ್ನೂ ಹಳೆಯ ಜೆಸ್ಕಾಂ ಕಚೇರಿಯಿಂದ ಜಗದಂಬಾ ವೃತ್ತದವರೆಗೆ 3.20 ಲಕ್ಷ ರೂ.ವೆಚ್ಚದಲ್ಲಿ ರಸ್ತೆ ದುರಸ್ತಿ ನಡೆಯಲಿದ್ದು, ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಶಾಸಕರು ಸೂಚಿಸಿದರು. ಮುಖಂಡರಾದ ಪ್ರಶಾಂತ ಗಡಾದ, ಸೂಚಪ್ಪ ದೇವರಮನಿ, ಮೈನುದ್ದೀನ್ ಖಾಜಿ, ಬಸವಂತಪ್ಪ ಕಂಪ್ಲಿ, ವಿಶ್ವನಾಥ ಕನ್ನೂರ, ಮೌಲಾಸಾಬ್ ಮೋಟಗಿ, ಹನುಮಂತ ಪೂಜಾರ, ಮಂಜುನಾಥ ಶಿರೋಳ, ದುರಗಪ್ಪ ಮಡಿವಾಳರ, ಇಂಜಿನಿಯರ್ ತಾಜುದ್ದೀನ್, ಇರ್ಫಾನ್, ಗ್ರಾಪಂ ಸದಸ್ಯರಾದ ಶ್ರೀಶೈಲ ಮೋಟಗಿ, ಸಂಗಮೇಶ ಕರಂಡಿ, ಮುತ್ತು ಪತ್ತಾರ, ಶಿವಪ್ಪ ಕಂಪ್ಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts