More

    ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ಗೊತ್ತಾ? ಸುಮ್ನೆ ಚಿಕಿನ್​ ತಿನ್ಲಾ…’ ಎಂದ ಸಿದ್ದುಗೆ ಹಿಗ್ಗಾಮುಗ್ಗಾ ತರಾಟೆ

    ಚಿಕ್ಕಮಗಳೂರು: ನಿನ್ನೆ(ಭಾನುವಾರ) ಎಲ್ಲೆಡೆ ಹನುಮ ನಾಮ ಜಪ ನಡೆಯುತ್ತಿತ್ತು. ಅದೇ ದಿನ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ, ‘ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕಿನ್​ ತಿನ್ಲಾ…’ ಎಂದು ಸ್ನೇಹಿತರೊಬ್ಬರಿಗೆ ಹೇಳಿದ್ದು ಸಾರ್ವಜನಿಕ ವಲದಲ್ಲಿ ಟೀಕೆಗೆ ಗುರಿಯಾಗಿದೆ.

    2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಭಾನುವಾರ ಮತದಾನ ನಡೆದಿದ್ದು, ಓಟು ಹಾಕಲು ಸ್ವಗ್ರಾಮ ಮೈಸೂರಿನ ಸಿದ್ದರಾಮನಹುಂಡಿಗೆ ಬಂದಿದ್ದ ಸಿದ್ದರಾಮಯ್ಯ ರಿಲ್ಯಾಕ್ಸ್​ ಮೂಡ್​ನಲ್ಲಿದ್ದರು. ಬಾಲ್ಯದ ಗೆಳೆಯ ಸಿದ್ದರಾಮನಹುಂಡಿ ಗ್ರಾಮದ ಕೆಂಪೀರಯ್ಯ ಅವರ ಮನೆಯಲ್ಲಿ ಮಾಂಸಾಹಾರ ಭೋಜನ ಸೇವಿಸುತ್ತಿದ್ದರು. ಈ ವೇಳೆ ‘ಅಣ್ಣ ಇಂದು ಹನುಮ ಜಯಂತಿ. ಇವತ್ತು ನಾನ್​ವೆಜ್​ ತಿನ್ನೋದಾ?’ ಎಂದು ಗ್ರಾಮಸ್ಥರೊಬ್ಬರು ಸಿದ್ದರಾಮಯ್ಯಗೆ ಹೇಳಿದರು. ಅದಕ್ಕುತ್ತರಿಸಿದ ಸಿದ್ದರಾಮಯ್ಯ, ‘ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಏನೂ ಆಗಲ್ಲ ತಿನ್ಲಾ. ಹನುಮ ಹುಟ್ಟಿದ ದಿನಾಂಕ ಗೊತ್ತಿದ್ರೆ ಮಾಡಬೇಕು. ಗೊತ್ತಿಲ್ಲ ಅಂದ್ರೆ ಚಿಕನ್ ತಿನ್ನು’ ಎಂದಿದ್ದರು. ಈ ಹೇಳಿಕೆ ಕುರಿತು ಸೋಮಾವರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೆಲವರಿಗೆ ಎಲ್ಲವನ್ನು ಅನುಮಾನಿಸುವ ಪ್ರವೃತ್ತಿ ಇರುತ್ತದೆ. ಸಿದ್ದರಾಮಯ್ಯ ಅವರಿಗೆ ಅನುಮಾನಿಸುವ ಕಾಯಿಲೆ ಇದ್ದರೆ ಅದು ಅವರ ದೋಷ. ಕೆಲವರಿಗೆ ಭಗವಂತ ಕಾಣುವುದಿಲ್ಲ. ಮತ್ತೆ ಕೆಲವರಿಗೆ ಎಲ್ಲೆಡೆ ಭಗವಂತನ ದರ್ಶನವಾಗುತ್ತದೆ, ನಂಬಿಕೆಗಳು ಎಲ್ಲವನ್ನು ಮೀರಿದ್ದು ಎಂದರು. ಇದನ್ನೂ ಓದಿರಿ ಪೊಲೀಸರ ವಿರೋಧದ ನಡುವೆಯೂ ಬೆಳಗಾವಿ ಪಾಲಿಕೆ ಮುಂಭಾಗ ಹಾರಿತು ನಾಡಧ್ವಜ!

    ‘ನಿಮ್ಮ ತಂದೆ ಇವರೇ’ ಎಂದು ತಾಯಿ ತನ್ನ ಮಕ್ಕಳಿಗೆ ಹೇಳೀದಾಗ ಅವರು ನಂಬುತ್ತಾರೆಯೇ ಹೊರತು ಸಾಕ್ಷಿ ಕೇಳುವುದಿಲ್ಲ. ಆದರೆ ಸಾಕ್ಷಿ ಕೇಳುವ ಮನಸ್ಥಿತಿಯ ಜನ ಕೆಲವರಿರುತ್ತಾರೆ. ಅನುಮಾನಿಸುವ ಪ್ರವೃತ್ತಿ ಬಹುಶಃ ಹುಟ್ಟಿನಿಂದ ಬಂದಿರೋದಲ್ಲ, ಸಹವಾಸ ದೋಷದಿಂದ ಬಂದಿರಬಹುದು ಎಂದು ಸಿದ್ದರಾಮಯ್ಯಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಿ.ಟಿ. ರವಿ, ಸಿದ್ದರಾಮಯ್ಯ ಅವರ ಪಾಲಕರು ದೇವರ ಮೇಲೆ ಶ್ರದ್ಧೆ ಹೊಂದಿದ್ದರಿಂದಲೇ ಮಗನಿಗೆ ಭಗವಂತನ ಹೆಸರನ್ನೆ ನಾಮಕರಣ ಮಾಡಿದ್ದಾರೆ ಎಂದರು.

    ನಂಬಿಕೆಗಳ ಜಗತ್ತಿನಲ್ಲಿ ಭಗವಂತನನ್ನು ತೋರಿಸು ಎಂದು ಯಾರಾದರೂ ಕೇಳಿದರೆ ತೋರಿಸಲು ಸಾಧ್ಯ. ನೋಡುವ ದೃಷ್ಟಿ ಇಲ್ಲದವರಿಗೆ ಭಗವಂತ ಎದುರಿಗೆ ಬಂದು ನಿಂತರೂ ಕಾಣುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದರು.

    ಹೋಟೆಲ್​ ಬಿಲ್​ 2 ಸಾವಿರ ಆದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಾನೆ ಈ ಭೂಪ!

    ಯುವಕನೊಂದಿಗೆ ಹೊಂಡಕ್ಕೆ ಜಿಗಿದ ಹೋರಿ ಅಭಿಮಾನಿಗಳ ಎದುರಲ್ಲೇ ಪ್ರಾಣಬಿಟ್ಟಿತು…

    ರಾತ್ರಿಗಿಂತ ಹಗಲಿನಲ್ಲೇ ಕಾಂಡಂ ಮಾರಾಟ ಜಾಸ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts