More

    ಮಧ್ವನವಮಿ ದಿನದಂದು ‘ಹನುಮ ಭೀಮ ಮಧ್ವ’ ಚಿತ್ರದ ಘೋಷಣೆ

    ಬೆಂಗಳೂರು: ‘ಶ್ರೀ ಜಗನ್ನಾಥದಾಸರು’, ‘ಶ್ರೀ ವಿಜಯದಾಸರು’, ‘ಶ್ರೀ ಪ್ರಸನ್ನವೆಂಕಟದಾಸರು’ … ಹೀಗೆ ಸಾಲುಸಾಲು ದಾಸವರೇಣ್ಯರ ಚಿತ್ರಗಳನ್ನು ನಿರ್ದೇಶಿಸಿರುವ ಮಧುಸೂದನ್ ಹವಾಲ್ದಾರ್ ಈಗ ಇನ್ನೊಂದು ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಅವರು ‘ಹನುಮ ಭೀಮ ಮಧ್ವ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಮಧ್ವನವಮಿ ಅಂಗವಾಗಿ, ಸೋಮವಾರ ಚಿತ್ರದ ಅಧಿಕೃತ ಘೋಷಣೆಯಾಗಿದೆ.

    ಇದನ್ನೂ ಓದಿ: ‘ಪಠಾಣ್​’ ಯಶಸ್ಸು: ಈ ದೇಶ ಯಾವತ್ತೂ ಖಾನ್​ಗಳನ್ನು ಪ್ರೀತಿಸುತ್ತಲೇ ಬಂದಿದೆ ಎಂದ ಕಂಗನಾ ರಣಾವತ್​

    ವಾಯುದೇವರು ಮೊದಲು ಹನುಮನಾಗಿ ಅವತರಿಸಿ‌ ಶ್ರೀರಾಮದೇವರನ್ನು ಸೇವೆ ಮಾಡುತ್ತಾರೆ. ನಂತರ ದ್ವಾಪರದಲ್ಲಿ ಭೀಮಸೇನನಾಗಿ ಶ್ರೀ ಕೃಷ್ಣನನ್ನು, ಆನಂತರ ಕಲಿಯುಗದಲ್ಲಿ ಮಧ್ವಾಚಾರ್ಯರಾಗಿ ಅವತರಿಸಿ ಶ್ರೀವೇದವ್ಯಾಸ ದೇವರನ್ನು ಭಜಿಸುತ್ತಾರೆ. ಈ ಮೂರು ಅವರತಾರಗಳ ಕುರಿತು ಈ ಚಿತ್ರದಲ್ಲಿರುತ್ತದೆ.

    ಶ್ರೀಗಂಧ ಪಿಕ್ಚರ್ಸ್ ಲಾಂಛನದಲ್ಲಿ ರಮೇಶ್ ಕಶ್ಯಪ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಮಧುಸೂದನ್ ಹವಾಲ್ದಾರ್ ನಿರ್ದೇಶನ ಮಾಡುತ್ತಿದ್ದಾರೆ. ಜೆ.ಎಂ. ಪ್ರಹ್ಲಾದ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದಲ್ಲಿ ಮಹಾಮಹಿಮರ ಮಹಿಮೆ ಸಾರುವ ಎಂಟು ಹಾಡುಗಳಿರಲಿದ್ದು, ವಿಜಯ್ ಕೃಷ್ಣ ಸಂಗೀತ ಸಂಯೋಜಿಸಲಿದ್ದಾರೆ.

    ಇದನ್ನೂ ಓದಿ: ರಾಮಾಯಣದಿಂದ ಹೃತಿಕ್​ ಹೊರಕ್ಕೆ … ರಾವಣನಾಗ್ತಾರಾ ಯಶ್​?

    ಈ ಚಿತ್ರವನ್ನು ಆನೆಗೊಂದಿ, ಕನಕಗಿರಿ, ಬೀಳಗಿ, ಹೊಸಪೇಟೆ ಸುತ್ತಮುತ್ತ ಚಿತ್ರೀಕರಣ ಮಾಡಬೇಕೆಂಬುದು ಚಿತ್ರತಂಡದ ಯೋಚನೆ. ಈ ಚಿತ್ರದಲ್ಲಿ ಹೊಸ ಪ್ರತಿಭೆಗಳೇ ನಟಿಸುತ್ತಿರುವುದು ವಿಶೇಷ.

    ಕಾಲಿವುಡ್​ ಎಂಟ್ರಿ ಕುರಿತು ಸ್ಪಷ್ಟನೆ ಕೊಟ್ಟ ರಕ್ಷಿತ್​ ಶೆಟ್ಟಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts