More

    ಡೆಂೆ ಜ್ವರ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಅಗತ್ಯ,ಎಡಿಸಿ

    ಚಿತ್ರದುರ್ಗ: ಈಚೆಗೆ ಡೆಂೆ ಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು ಸೂಕ್ತ ಮುನ್ನೇಚ್ಚರಿಕೆ ವಹಿಸುವ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳ ಬೇಕಿದೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
    ರಾಷ್ಟ್ರೀಯ ಡೆಂೆ ದಿನದ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಡೆಂೆ ವಿರುದ್ಧದ ಜಾಗೃತಿ ಜಾಥಾಕ್ಕೆ ಸೆಂಟ್ ಮೇರಿಸ್ ನರ್ಸಿಂಗ್ ಕಾ ಲೇಜು ಬಳಿ ಚಾಲನೆ ನೀಡಿ ಮಾತನಾಡಿದ ಅವರು,ನಾಗರಿಕರಲ್ಲಿ ಡೆಂೆ ವಿರುದ್ಧ ಜಾಗೃತಿಗಾಗಿ ಜಾಥಾ ಏರ್ಪಡಿಸಲಾಗಿದೆ. ಆರೋಗ್ಯಕ್ಕೆ ಪೂರಕವಾಗಿರುವ ಇಲಾಖೆಯ ಸಲಹೆಗಳನ್ನು ಚಾಚೂ ತಪ್ಪದೆ ಪಾಲಿಸುವ ಮೂಲಕ ಡೆಂೆ ಜ್ವರವನ್ನು ನಿಯಂತ್ರಿಸಬೇಕಿದೆ ಎಂದರು.
    ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ,ಸೊಳ್ಳೆ ಕಡಿತದಿಂದ ರಕ್ಷಣೆ ಪಡೆಯ ಬೇಕು. ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸ್ವಚ್ಛತೆ ಕಾಪಾಡಿಕೊಳ್ಳ ಬೇಕೆಂದು ನಾಗರಿಕರಿಗೆ ಮನವಿ ಮಾಡಿದರು.
    ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಶಿ ಅವರು ಮಾತನಾಡಿ,ಈ ಬಾರಿ ಕಳೆದ ವರ್ಷಕ್ಕಿಂತ ಹೆ ಚ್ಚು ಡೆಂೆ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಿವೆ. ಒಟ್ಟು 187 ಪ್ರಕರಣಗಳಲ್ಲಿ,133 ಪ್ರಕರಣಗಳು ನಗರ ಪ್ರದೇಶಗಳಲ್ಲಿ ಕಾಣಿಸಿದ್ದು, ಸೂಕ್ತ ಚಿಕಿತ್ಸೆಯಿಂದ ಎಲ್ಲ ರೋಗಿಗಳು ಗುಣಮುಖರಾಗಿದ್ದಾರೆ.‘ಸಮುದಾಯದೊಂದಿಗೆ ಸೇರಿ ಡೆಂೆ ಜ್ವರವನ್ನು ನಿಯಂತ್ರಿಸೋಣ’ ಎಂಬ ರಾಷ್ಟ್ರೀಯ ಡೆಂೆ ದಿನದ ಈ ವರ್ಷದ ಘೋಷವಾಕ್ಯದಂತೆ ಈ ರೋಗದ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದೆ ಎಂದರು.
    ಸೆಂಟ್ ಮೇರಿಸ್‌ನರ್ಸಿಂಗ್ ಕಾಲೇಜಿನಿಂದ ಆರಂಭವಾದ ಜಾಥಾ,ಶ್ರೀ ಏಕನಾಥೇಶ್ವರಿ ಪಾದಗುಡಿ ಬಳಿ ಮಾನವ ಸರಪಳಿ ರಚಿಸಲಾ ಯಿತು. ಕಾಮನಬಾವಿ ಬಡಾವಣೆ,ಕರುವಿನಕಟ್ಟೆ ವೃತ್ತದಿಂದ ಪೋಸ್ಟ್‌ಆಫೀಸ್ ಮಾರ್ಗ ಮಹಾರಾಣಿ ಕಾಲೇಜು ಮೂಲಕ ಸೆಂಟ್ ಮೇರಿ ಸ್ ನರ್ಸಿಂಗ್ ಕಾಲೇಜು ಸಮೀಪ ಅಂತ್ಯಗೊಂಡಿತು.
    ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್‌ಕಂಬಾಳಿಮಠ್,ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಾನಾಯ್ಕಾ,ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂ ಗಪ್ಪ,ಬಿ.ಜಾನಕಿ,ಮುಖ್ಯಆರೋಗ್ಯ ಮೇಲ್ವಿಚಾರಣಾಧಿಕಾರಿ ಎಂ.ಬಿ.ಹನುಮಂತಪ್ಪ,ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸುರೇಶ್‌ಬಾ ಬು,ಮಲ್ಲಿಕಾರ್ಜುನ,ನಾಗರಾಜ್,ಪುನೀತ್,ಶ್ರೀನಿವಾಸ ಗುರುಮೂರ್ತಿ,ಗಂಗಾಧರ್‌ರೆಡ್ಡಿ, ರಂಗಾರೆಡ್ಡಿ,ಪ್ರಸನ್ನಕುಮಾರ್,ಸಿರೀಶ್,ರುದ್ರ ಮುನಿ,ಪ್ರಾಂಶುಪಾಲ ಪುನೀತ್ ಮತ್ತಿತರರು ಜಾಥಾದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts