More

    ಜಾಂಬವತಿ ಕಲ್ಯಾಣ ತಾಳಮದ್ದಲೆ ಪ್ರದರ್ಶನ

    ಸೊರಬ: ತಾಲೂಕಿನ ಹೊಡಬಟ್ಟೆ ಗ್ರಾಮದ ಸುಬ್ರಾಯ ಭಟ್ ಅವರ ಮನೆ ಆವರಣದಲ್ಲಿ ಜಾಂಬವತಿ ಕಲ್ಯಾಣ ಯಕ್ಷಗಾನ ತಾಳಮದ್ದಲೆ ಶನಿವಾರ ನಡೆಯಿತು.
    ಹಿಮ್ಮೇಳದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ. ಎಂ.ಕೆ.ಭಟ್ ಜಾಂಬವಂತನಾಗಿ, ಶಂಕರನಾರಾಯಣ ಹೊಸಕೊಪ್ಪ ಕೃಷ್ಣನಾಗಿ, ರಾಮಮೂರ್ತಿ ಬಲರಾಮನಾಗಿ ಪಾತ್ರ ನಿರ್ವಹಿಸಿದರು. ಭಾಗವತರಾಗಿ ಎಚ್.ಎಂ.ವೆಂಕಟರಾವ್, ಮೃದಂಗವನ್ನು ನಾಗಭೂಷಣ ಕೇಡಲೇಸರ, ಛಂಡೆಯಲ್ಲಿ ಭಾರ್ಗವ ಕೇಡಲೇಸರ ಸಾಥ್ ನೀಡಿದರು.
    ಡಾ. ಎಂ.ಕೆ.ಭಟ್ ಮಾತನಾಡಿ, ಕ್ರಿಯಾಶೀಲ ಮನಸ್ಸು ಇದ್ದಲ್ಲಿ ಆರೋಗ್ಯ ಹೊಂದಲು ಸಾಧ್ಯ. ಜೀವನದಲ್ಲಿ ನಿರಂತವಾಗಿ ಹೊಸತನ ಮೈಗೂಡಿಸಿಕೊಳ್ಳಬೇಕು. ಕಲೆ ಬೆಳೆಸಿದಲ್ಲಿ ಕಲಾವಿದನನ್ನು ಉಳಿಸಲು ಸಾಧ್ಯ ಎಂದರು. ಸಾನ್ವಿತ ಪ್ರಾರ್ಥಿಸಿದರು. ಪ್ರಶಾಂತ್ ಭಟ್ ನಿರೂಪಿಸಿದರು. ಮೈಥಿಲಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts