More

    ಪುರ ಪ್ರವೇಶ ಮಾಡಿದ ದೇವಿಯರು.

    ಕೊಡೇಕಲ್: ನಾರಾಯಣಪುರ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗದ್ದೆಮ್ಮ ದೇವಿ ಮತ್ತು ದುರಗಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಆಹೋರಾತ್ರಿ ನಡೆದ ಅದ್ದೂರಿ ಮೆರವಣಿಗೆಯೊಂದಿಗೆ ದೇವಿಯರು ಪುರ ಪ್ರವೇಶ ಮಾಡಿದರು.

    ಗ್ರಾಮದಲ್ಲಿ ಊರ ಹಬ್ಬವೆಂದೆ ಕರೆಯಲಾಗುವ ದೇವಿಯರ ಜಾತ್ರಾ ಮಹೋತ್ಸವ ನಿಮಿತ್ತ ಇಡೀ ಗ್ರಾಮವೇ ಕಳೆಗಟ್ಟಿದ್ದು, ಎಲ್ಲಡೆ ಸಂಭ್ರಮದ ವಾತಾವರಣ ಮನೆ ಮಾಡಿದ್ದು, ಸೋಮವಾರ ರಾತ್ರಿ ದೇವರಗಡ್ಡಿ ಗ್ರಾಮದಿಂದ ಆಗಮಿಸಿದ ಗದ್ದೆಮ್ಮ ದೇವಿ ಹಾಗೂ ನಾರಾಯಣಪುರದ ದುರಗಮ್ಮ ದೇವಿಯರು ಛಾಯಾ ಭಗವತಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ಕೃಷ್ಣಾ ನದಿಯಲ್ಲಿ ಗಂಗಾಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

    ನಂತರ ಸಕಲ ಬಾಜಾ ಭಜಂತ್ರಿ, ಡೊಳ್ಳು ಮತ್ತು ತಮಟೆಗಳ ವಾದ್ಯಗಳ ಮೆರವಣಿಗೆಯೊಂದಿಗೆ ಹಾಗೂ ಮುತ್ತೆÊದೆಯರು ಹೊತ್ತ ಆರತಿಯೊಂದಿಗೆ ನಾರಾಯಣಪುರದತ್ತ ಹೆಜ್ಜೆಹಾಕಿದರು. ದೇವಿಕಟ್ಟೆಯಲ್ಲಿರುವ ದೇವಿಯರಿಗೆ ರಾಜಾ ಜಿತೇಂದ್ರನಾಯಕ ಜಹಾಗೀರದಾರ ಸೀರೆ ಸಮರ್ಪಿಸಿದರು. ನಂತರ ಪುರಪ್ರವೇಶ ಮಾಡಿದ ದೇವತೆಯರಿಗೆ ಅಹೋರಾತ್ರಿ ಅದ್ದೂರಿ ಮೆರವಣಿಗೆ ನಡೆಯಿತು.

    ಮಂಗಳವಾರ ಬೆಳಗಿನ ಜಾವ ದೇವಿಯರು ಗರ್ಭಗುಡಿಯಲ್ಲಿ ವಿರಾಜಮಾನರಾದರು. ಬೆಳಗ್ಗೆ ೧೦ಕ್ಕೆ ತಾಂಬಾದ ನೆಲಮಾಳ ಸಿz್ದೆÃಶ್ವರ ಗಾಯನ ಸಂಘದವರು ನಡೆಸಿಕೊಟ್ಟ ಕಿರುಗಥಾ ಗಾಯನ ಎಲ್ಲರ ಗಮನ ಸೆಳೆಯಿತು.

    ಬುಧವಾರ ಬೆಳಗ್ಗೆ ೪ಕ್ಕೆ ದೇವಸ್ಥಾನದಲ್ಲಿ ಅಕ್ಕಿ ಪಾಯಸ ಕರ‍್ಯಕ್ರಮ ಜರುಗುವು ನಂತರ ಮಧ್ಯಾಹ್ನ ೩ಕ್ಕೆ ಅರ್ಚಕರಿಂದ ಅಗ್ನಿಕುಂಡ ಪ್ರವೇಶ, ನಂತರ ದೇವಿಗೆ ಸೀರೆ ಅರ್ಪಿಸಿ ವಿಶೇಷ ಪೂಜೆಯಾದ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.

    ನಾರಾಯಣಪುರ ಗ್ರಾಮದಲ್ಲಿ ನಡೆಯುತ್ತಿರುವ ಗದ್ದೆಮ್ಮ ದೇವಿ ಹಾಗೂ ದುರಗಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ರಾತ್ರಿ ಅದ್ದೂರಿ ಮೆರವಣಿಗೆಯೊಂದಿಗೆ ಪುರ ಪ್ರವೇಶ ಮಾಡುತ್ತಿರುವ ದೇವಿಯರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts