More

    ಇಂದಿನಿಂದ ಹಂಪಿ ಉತ್ಸವ; ಮೂರು ದಿನಗಳ ಕಾಲ ನಡೆಯಲಿವೆ ವಿವಿಧ ಆಕರ್ಷಕ ಕಾರ್ಯಕ್ರಮಗಳು…

    ವಿಜಯನಗರ: ವಿಜಯನಗರದ ಗತ ವೈಭವ ಸಾರುವ ಹಂಪಿ ಉತ್ಸವಕ್ಕೆ ಇಂದು ಶುರು ಆಗಲಿದ್ದು, ಈ ವಿಶಿಷ್ಟ ಕಾರ್ಯಕ್ರಮ ವಿಜಯನಗರ ಸಾಮ್ರಾಜ್ಯದ ಕಲೆ, ವಾಸ್ತುಶಿಲ್ಪ, ಸಾಹಿತ್ಯದ ಇತಿಹಾಸ ಹೇಳಲಿದೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಂಪಿ ಉತ್ಸವಕ್ಕೆ ಇಂದು ಸಣಜೆ 6ಕ್ಕೆ ಚಾಲನೆ ನೀಡಲಿದ್ದಾರೆ. ಹಂಪಿ ಬೈ ಸ್ಕೈ, ಸೌಂಡ್ ಅಂಡ್ ಲೈಟ್ಸ್ ಸೇರಿದಂತೆ ಸಾಹಸ, ಜಲ ಕ್ರೀಡೆಗಳು, ಕುಸ್ತಿ ಪಂದ್ಯಾವಳಿಗೆ ಚಾಲನೆ ಮುಖ್ಯಮಂತ್ರಿ ನೀಡಲಿದ್ದಾರೆ. ಇಂದು ಸಿಎಂ ಬೊಮ್ಮಾಯಿ ವಿಜಯನಗರ ಜಿಲ್ಲಾ ಪ್ರವಾಸ ಮಾಡಲಿದ್ದು ಇದೇ ಸಂದರ್ಭದಲ್ಲಿ ಹಂಪಿ ಉತ್ಸವದ ಚಾಲನೆಗೂ ಆಗಮಿಸಲಿದ್ದಾರೆ. ಸಂಜೆ 5 ಗಂಟೆಗೆ ಹಂಪಿಯ ಕನ್ನಡ ವಿವಿಯ ಹೆಲಿಪ್ಯಾಡ್‌ಗೆ ಮುಖ್ಯಮಂತ್ರಿ ಆಗಲಿಸಲಿದ್ದು ಹಂಪಿ ಉತ್ಸವದ ಗಾಯತ್ರಿ ಪೀಠ ಮುಖ್ಯ ವೇದಿಕೆ ಉದ್ಘಾಟನೆ ಮಾಡಿ ಕಾರ್ಯಕ್ರಮದಲ್ಲಿ ಸಿಎಂ ಭಾಗಿ ಆಗಲಿದ್ದಾರೆ. ನಂತರ 6.45 ಕ್ಕೆ ಬೆಂಗಳೂರಿಗೆ ಬೊಮ್ಮಾಯಿ ವಾಪಾಸಾಗಲಿದ್ದಾರೆ.

    ಇಂದಿನಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಯಲಿದ್ದು ಹಾಲಿವುಡ್, ಸ್ಯಾಂಡಲ್​ವುಡ್ ಕಲಾವಿದರಿಂದ ಸಂಗೀತದ ರಸದೌತಣ ಕೂಡ ನಡೆಯಲಿದೆ. ಖ್ಯಾತ ಸಂಗೀತಗಾರರಾದ ಕೈಲಾಶ್ ಕೇರ್, ಅರ್ಮಾನ್ ಮಲೀಕ್, ಅಂಕಿತ್ ತೀವಾರಿ ಅವರಿಂದ ಸಂಗೀತ ಸುಧೆ ಹರಿಯಲಿದೆ.

    ಅರ್ಜುನ್ ಜನ್ಯಾ, ರಘು ದೀಕ್ಷಿತ್, ವಿಜಯ್ ಪ್ರಕಾಶ್ ಸೇರಿದಂತೆ ಅನೇಕ ಕಲಾವಿದರಿಂದ ಸಂಗೀತ-ನೃತ್ಯ ಕಾರ್ಯಕ್ರಮ ಆಯೋಜನೆ ಆಗಿದೆ. ಹಂಪಿಯಲ್ಲಿ ವಿವಿಧ ಕಾರ್ಯಕ್ರಮಗಳಿಗಾಗಿ ಒಟ್ಟು ನಾಲ್ಕು ವೇದಿಕೆಗಳ ನಿರ್ಮಾಣ ಮಾಡಲಾಗಿದೆ.

    ಕರೊನಾ ಬಳಿಕ ಇದೇ ಮೊದಲ ಬಾರಿಗೆ ಹಂಪಿ ಉತ್ಸವ ನಡೆಯುತ್ತಿದ್ದು ಜನರು ಈ ಉತ್ಸವದಲ್ಲಿ ಭಾಗವಹಿಸಲು ಉತ್ಸಾಹಿತರಾಗಿದ್ದಾರೆ. ಹಂಪಿ ಉತ್ಸವಕ್ಕೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts