More

    18ರ ಯುವಕನಂತೆ ಕಾಣಲು ಈತ ದಿನಕ್ಕೆ 16 ಕೋಟಿ ರೂ. ಖರ್ಚು ಮಾಡುತ್ತಾನೆ!

    ನವದೆಹಲಿ: ಅಮರತ್ವವನ್ನು ಪಡೆಯುವ ಕಥೆಗಳ ಬಗ್ಗೆ ನಾವು ಅದೆಷ್ಟೋ ಬಾರಿ ಕೇಳಿದ್ದೇವೆ. ಚಿರ ಯೌವನ ಯಾರಿಗೆ ಬೇಡ ಹೇಳಿ? ಇದರ ಹಿಂದೆ ಅಲೆಕ್ಸಂಡರ್​ನಂತಹ ಮಹಾನ್​ ದಂಡನಾಯಕನೂ ಬಿದ್ದಿದ್ದ. ಅದರಂತೆಯೇ ಇಲ್ಲೊಬ್ಬ ಬಯೊಟೆಕ್​ ಕಂಪೆನಿಯ ಸಿಇಒ ಕೂಡ ಚಿರ ಯೌವನದ ಹಿಂದೆ ಬಿದ್ದಿದ್ದಾನೆ. ಈತ ನವ ಯುವಕನಂತೆ ಕಾಣಲು ದಿನಕ್ಕೆ ಬರೋಬ್ಬರಿ 16 ಕೋಟಿ ರೂ. ಖರ್ಚು ಮಾಡುತ್ತಾನಂತೆ!

    ಉದ್ಯಮಿ ಬ್ರಿಯಾನ್ ಜಾನ್ಸನ್ “ಪ್ರಾಜೆಕ್ಟ್ ಬ್ಲೂಪ್ರಿಂಟ್” ಮೂಲಕ ತನ್ನ ಎಪಿಜೆನೆಟಿಕ್ ವಯಸ್ಸನ್ನು 5.1 ವರ್ಷಗಳಷ್ಟು ಕಡಿಮೆಗೊಳಿಸಿರುವುದಾಗಿ ಹೇಳಿಕೊಂಡಿದ್ದಾನೆ. 45 ವರ್ಷದ ಜಾನ್ಸನ್, 30 ವೈದ್ಯಕೀಯ ತಜ್ಞರ ತಂಡವನ್ನು ಹೊಂದಿದ್ದಾರೆ. ಅವರು ಈತನ ಯೌನವನ್ನು ಕಾಪಾಡಲು ಸಹಾಯ ಮಾಡುತ್ತಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ಜಾನ್ಸನ್‌ನ ಪ್ರತಿಯೊಂದು ಅಂಗಗಳಲ್ಲಿ ವಯಸ್ಸಾಗುವ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸಲು ಸಹಾಯ ಮಾಡಲು ವೈದ್ಯರು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ.

    ಕರ್ನಲ್‌ಕೋದ ಕ್ಯಾಲಿಫೋರ್ನಿಯಾ ಮೂಲದ CEO 18ರ ಯುವಕನಂತೆ ಇರಲು ಈ ವರ್ಷ ಅವರು 2 ಮಿಲಿಯನ್ ಡಾಲರ್​ಗಳನ್ನು ಖರ್ಚು ಮಾಡಲಿದ್ದಾರೆ.

    ಪ್ರಾಜೆಕ್ಟ್ ಬ್ಲೂಪ್ರಿಂಟ್ ಅಡಿಯಲ್ಲಿ, ಜಾನ್ಸನ್ ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸುತ್ತಾರೆ. ಸಸ್ಯಾಹಾರಿ ಆಹಾರವನ್ನು ಮಾತ್ರ ತಿನ್ನುವ ಅವರು ದಿನಕ್ಕೆ 1,977 ಕ್ಯಾಲೊರಿಗಳನ್ನು ಸೇವಿಸುತ್ತಾರೆ. ನಿತ್ಯ ಒಂದು ಗಂಟೆ ವ್ಯಾಯಾಮ ಮಾಡುವ ಇವರು ಪ್ರತಿ ರಾತ್ರಿ ಅದೇ ಸಮಯಕ್ಕೆ ಮಲಗುತ್ತಾರೆ. ಬೆಳಗ್ಗೆ 5 ಗಂಟೆಗೆ ಏಳುವ ಅವರು, ಬೆಳಿಗ್ಗೆ ಎರಡು ಡಜನ್​ಗಳಷ್ಟು ಸಪ್ಲಿಮೆಂಟ್​ಗಳನ್ನು ಮತ್ತು ಕ್ರಿಯೇಟೈನ್ ಮತ್ತು ಕಾಲಜನ್ ಪೆಪ್ಟೈಡ್‌ಗಳ ಜೊತೆಗೆ ಹಸಿರು ತರಕಾರಿ ಅಥವಾ ಸೊಪ್ಪಿನ ರಸವನ್ನು ಕುಡಿಯುತ್ತಾರೆ.

    ದಿನವಿಡೀ, ಜಾನ್ಸನ್‌ನ ಶರೀರದ ಪ್ರಮುಖ ಅಂಶಗಳನ್ನು ಅಳೆದು ಮೇಲ್ವಿಚಾರಣೆ ಮಾಡಲಾಗುತ್ತದೆ. ಅಲ್ಟ್ರಾಸೌಂಡ್‌ಗಳು, ಎಂಆರ್‌ಐಗಳು, ಕೊಲೊನೋಸ್ಕೋಪಿಗಳು ಮತ್ತು ರಕ್ತ ಪರೀಕ್ಷೆಗಳು 45 ವರ್ಷ ವಯಸ್ಸಿನ ಇವರ ಜೀವನದಲ್ಲಿ ನಿಯಮಿತ ಭಾಗವಾಗಿದೆ. ಅವರ ತೂಕ, ದೇಹದ ತೂಕ, ದೇಹದ ಕೊಬ್ಬು, ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳು ಮತ್ತು ಹೃದಯ ಬಡಿತದ ವ್ಯತ್ಯಾಸಗಳನ್ನು ಪ್ರತಿದಿನ ಅಳೆಯಲಾಗುತ್ತದೆ.

    ಅಷ್ಟೇ ಅಲ್ಲದೇ ರಾತ್ರಿ ನಿದ್ದೆಯಲ್ಲಿ ಒಂದು ಯಂತ್ರ, ಈತ ರಾತ್ರಿ ಎಷ್ಟು ಬಾರಿ ಕನಸಿನಲ್ಲಿ ಲೈಂಗಿಕ ಆಸಕ್ತಿಗೆ ಒಳಗಾಗುತ್ತಾನೆ ಎಂಬುದನ್ನೂ ಟ್ರ್ಯಾಕ್ ಮಾಡುತ್ತದೆ. ಅದು ಹದಿಹರೆಯದವರಂತೆಯೇ ಇರುತ್ತದೆ ಎಂದು ವರದಿಗಳು ಹೇಳಿವೆ. ಒಟ್ಟಿನಲ್ಲಿ ಚಿರಯೌವನದ ಹುಚ್ಚು ಸಾವು ಇರುವ ತನಕವೂ ಜಗತ್ತಿನಲ್ಲಿ ಮುಂದುವರೆಯುವುದು ಸುಳ್ಳಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts