More

    ಹಂಪಿ ಉತ್ಸವಕ್ಕೆ ಸರ್ಕಾರ ಅನುದಾನ ಮೀಸಲಿಡಲಿ: ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಕೂಡ್ಲಿಗಿ ತಾಲೂಕು ಘಟಕ ಆಗ್ರಹ

    ಕೂಡ್ಲಿಗಿ: ಮುಂದಿನ ಹಂಪಿ ಉತ್ಸವಕ್ಕೆ ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ತಾಲೂಕು ಘಟಕ ಮಂಗಳವಾರ ತಹಸೀಲ್ದಾರ್ ಟಿ.ಜಗದೀಶ್ ಮೂಲಕ ಸಿಎಂಗೆ ಮನವಿ ಸಲ್ಲಿಸಿತು.

    ಒಕ್ಕೂಟದ ತಾಲೂಕು ಅಧ್ಯಕ್ಷ ಬಣಕಾರ ಮೂಗಪ್ಪ ಮಾತಾನಾಡಿ, ಪ್ರತಿ ವರ್ಷ ಹಂಪಿ ಉತ್ಸವ ಆಚರಣೆ ಮಾಡಬೇಕು. ಅದಕ್ಕಾಗಿ ಸರ್ಕಾರ ಬಜೆಟ್‌ನಲ್ಲಿ ಅಂದಾಜು 10 ಕೋಟಿ ರೂ.ಮೀಸಲಿಡಬೇಕು. ಉತ್ಸವದಲ್ಲಿ ರಂಗಕಲೆಯ ತವರೂರು ಕೂಡ್ಲಿಗಿ ಹಾಗೂ ವಿಜಯನಗರ ಜಿಲ್ಲೆಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕು. ಹೆಚ್ಚಿನ ಸಂಭಾವನೆ ಕೊಡಬೇಕು ಎಂದು ಆಗ್ರಹಿಸಿದರು.

    ಕಲಾವಿದರ ಬೇಡಿಕೆಗೆ ಪಪಂ ಸದಸ್ಯರ ಬೆಂಬಲಿಸಿದರು. ಪಪಂ ಸದಸ್ಯರಾದ ಕೆ.ಎಚ್.ಎಂ.ಸಚಿನ್ ಕುಮಾರ್, ಪಿ.ಚಂದ್ರು, ಪೂರ್ಯ ನಾಯ್ಕ, ಬಸೂ ನಾಯ್ಕ, ಕೆ.ಈಶಪ್ಪ, ಒಕ್ಕೂಟದ ತಾಲೂಕು ಉಪಾಧ್ಯಕ್ಷ ಕಂಬಿ ಶಿವಣ್ಣ, ಕಾರ್ಯದರ್ಶಿ ವಿ.ಕೊಟ್ರೇಶ್, ಜಿಲ್ಲಾ ಕಾರ್ಯದರ್ಶಿ ಎ.ತಿಂದಪ್ಪ, ಪ್ರಮುಖರಾದ ಪಿ.ಭದ್ರಪ್ಪ, ಬಿ.ಭಿಮೇಶ್, ರಾಘವೇಂದ್ರ, ಎಸ್.ದುರುಗೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts