More

    ಇಸ್ರೇಲ್​ ದಾಳಿ ಹಿಂದಿದೆ ಮತ್ತೊಂದು ಭೀಕರತೆ; ಹತ ಹಮಾಸ್ ಉಗ್ರರ ಬಳಿ ಪತ್ತೆಯಾದ್ವು ಆ ಮಾತ್ರೆಗಳು!

    ನವದೆಹಲಿ: ಇಸ್ರೇಲ್​ನಲ್ಲಿ ಹಮಾಸ್​ ಉಗ್ರರ ದಾಳಿಯಿಂದ ರಣಭೀಕರ ಪರಿಸ್ಥಿತಿ ಉಂಟಾಗಿದ್ದು, ಅಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ. ಈ ಮಧ್ಯೆ ಹಮಾಸ್ ಉಗ್ರರ ದಾಳಿಗೂ ಮುನ್ನದ ಸಂಗತಿಯೊಂದು ಬೆಳಕಿಗೆ ಬಂದಿದೆ. ಹತ ಉಗ್ರರ ಬಳಿ ಪತ್ತೆಯಾದ ಮಾತ್ರೆಗಳು ಆ ರಹಸ್ಯವನ್ನು ಬಯಲು ಮಾಡಿವೆ.

    ಇಸ್ರೇಲ್​ನಲ್ಲಿ ಅ.7ರ ಬೆಳ್ಳಂಬೆಳಗ್ಗೆ ಹಮಾಸ್ ಉಗ್ರರ ಗುಂಪು ಮಾರಕ ಎನಿಸುವಂಥ ಭೀಕರ ದಾಳಿ ನಡೆಸಿತ್ತು. ಇದರಿಂದಾಗಿ ಬಹಳಷ್ಟು ಸಾವು-ನೋವುಗಳು ಸಂಭವಿಸಿದ್ದು, ಜನರನ್ನೇ ಗುರಿಯಾಗಿಸಿ ಗುಂಡಿಟ್ಟು ಸಾಯಿಸಲಾಗಿತ್ತು. ಬಹಳಷ್ಟು ಯುವತಿಯರನ್ನು ಅತ್ಯಾಚಾರ ಮಾಡಿದ್ದರೆ, ಒತ್ತೆಯಾಳಾಗಿರಿಸಿಕೊಂಡಿದ್ದರೆ, ಇನ್ನೊಂದಷ್ಟು ಮಕ್ಕಳನ್ನು ಅಯ್ಯೋ ಪಾಪ ಎಂತಲೂ ನೋಡದೆ ಕೊಂದು ಹಾಕಲಾಗಿದೆ.

    ಅವರಲ್ಲಿನ ಈ ಕ್ರೌರ್ಯದ ಹಿಂದಿನ ಕಾರಣ ಏನಿರಬಹುದು ಎಂಬುದಕ್ಕೆ ಸಂಬಂಧಿಸಿದಂತೆ ಮಹತ್ವದ ಸಂಗತಿಯೊಂದು ಬೆಳಕಿಗೆ ಬಂದಿದೆ. ಇಸ್ರೇಲ್​ನ ಪ್ರತಿದಾಳಿಗೆ ಸಾವಿಗೀಡಾದ ಹಮಾಸ್ ಉಗ್ರರ ಮೃತದೇಹಗಳನ್ನು ತಡಕಾಡಿದಾಗ ಹಲವರ ಜೇಬುಗಳಲ್ಲಿ ಒಂದು ನಿರ್ದಿಷ್ಟ ಮಾತ್ರೆಗಳು ಸಿಕ್ಕಿವೆ ಎನ್ನಲಾಗಿದೆ.

    ಇದನ್ನೂ ಓದಿ: ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

    ಕ್ಯಾಪ್ಟಗಾನ್ ಎಂಬ ಈ ಮಾತ್ರೆಗಳು ಅಮಲೇರಿಸುವಂಥ ಅಂಶ ಹೊಂದಿದ್ದು, ಈ ಮಾತ್ರೆಗಳನ್ನು ಬಡವರ ಕೊಕೇನ್ ಎಂದೂ ಕರೆಯಲಾಗುತ್ತದೆ. ದಕ್ಷಿಣ ಯುರೋಪ್​ನಲ್ಲಿ ಉತ್ಪಾದನೆ ಆಗುವ ಈ ಮಾತ್ರೆಗಳು ಟರ್ಕಿ ಮೂಲಕ ಅರೇಬಿಯನ್ ಪೆನಿನ್ಸುವಲ ಮಾರ್ಕೆಟ್​ಗಳಲ್ಲಿ ಬಿಕರಿ ಆಗುತ್ತಿವೆ ಎನ್ನಲಾಗಿದೆ.
    ಈ ಮಾತ್ರೆಗಳ ಅಮಲಿನಿಂದಾಗಿಯೇ ಆ ಹಮಾಸ್ ಭಯೋತ್ಪಾದಕರು ಅಷ್ಟೊಂದು ಉಗ್ರವಾಗಿ ನಡೆದುಕೊಳ್ಳಲು ಸಾಧ್ಯವಾಯಿತು. ಅಲ್ಲದೆ ತುಂಬಾ ಸಮಯದ ವರೆಗೆ ಆಹಾರದ ಪರಿವೆಯೇ ಇರದೆ ಜಾಗೃತವಾಗಿರಲು ಸಾಧ್ಯವಾಯಿತು ಎನ್ನಲಾಗಿದೆ.

    ಇದನ್ನೂ ಓದಿ: ಜೊಮ್ಯಾಟೊ ಫುಡ್ ಡೆಲಿವರಿಗೆ ಸ್ಟೈಲಿಶ್ ಬೈಕು, ಚಂದದ ಯುವತಿ!; ಏನಿದರ ರಹಸ್ಯ?

    2015ರಲ್ಲಿ ಐಸಿಸ್ ಉಗ್ರರಿಂದಾಗಿ ಈ ಮಾತ್ರೆಗಳು ಜನಪ್ರಿಯತೆ ಪಡೆದಿದ್ದವು. ನಂತರ ಸಿರಿಯಾ ಹಾಗೂ ಲೆಬನಾನ್​ಗಳಲ್ಲೂ ಈ ಮಾತ್ರೆಗಳನ್ನು ದೊಡ್ಡ ಮಟ್ಟದಲ್ಲಿ ಉತ್ಪಾದಿಸಲು ಆರಂಭಿಸಿತು. ಗಾಜಾದ ಯುವಸಮೂಹ ಇದರ ವ್ಯಸನಕ್ಕೆ ಅಂಟಿಕೊಂಡಿದ್ದರಿಂದ ಗಾಜಾದಲ್ಲೂ ಇದಕ್ಕೆ ದೊಡ್ಡ ಮಾರುಕಟ್ಟೆ ಇದೆ ಎನ್ನಲಾಗಿದೆ.

    ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ: ಸರ್ಕಾರದಿಂದ ಹೊಸ ಆದೇಶ

    ತಪ್ಪಾಯ್ತು ಅಂದ್ರೂ ಬಿಡ್ಲಿಲ್ಲ: ಬಹರೈನ್​ನಲ್ಲಿ ಸ್ಟೇಟಸ್​ ಹಾಕಿ ಕೆಲಸ ಕಳ್ಕೊಂಡ ಕರ್ನಾಟಕದ ಡಾಕ್ಟರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts