More

    ಚಿನ್ನ-ಬೆಳ್ಳಿ ವ್ಯಾಪಾರ : ಹಾಲ್​ಮಾರ್ಕ್​ ಇಲ್ಲದಿದ್ದರೆ ಬೀಳುತ್ತೆ ಕ್ರಿಮಿನಲ್​ ಕೇಸ್​!

    ಬೆಂಗಳೂರು: ರಾಜ್ಯದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಆಭರಣ ಮಳಿಗೆಗಳಿದ್ದು, ಶೇ.90 ರಷ್ಟು ಚಿನ್ನಾಭರಣ ತಯಾರಕರು ಮತ್ತು ಮಾಲೀಕರು ಹಾಲ್​ಮಾರ್ಕ್​ ಪರವಾನಗಿ ಪಡೆದಿಲ್ಲ. ಈವೆರೆಗೆ ಶೇ.10 ಮಾಲೀಕರು ಮಾತ್ರವೇ ಪರವಾನಗಿ ಹೊಂದಿದ್ದಾರೆ. ಉಳಿದವರು ಪರವಾನಗಿ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ಅಂಥವರಿಗೆ ಕ್ರಿಮಿನಲ್​ ಕೇಸ್​, ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ರಾಮಾಚಾರಿ ಹೇಳಿದ್ದಾರೆ.

    ಚಿನ್ನ ಮತ್ತು ಬೆಳ್ಳಿ ಆಭರಣಗಳ ಪರಿಶುದ್ಧತೆ ಮತ್ತು ಗುಣಮಟ್ಟವನ್ನು ದೃಢೀಕರಿಸಲು ಜೂ.1 ರಿಂದ ಹಾಲ್​ಮಾರ್ಕ್​ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ. ಕರೊನಾ ಹಿನ್ನೆಲೆಯಲ್ಲಿ ಪರವಾನಗಿ ಪಡೆಯಲು ಆಭರಣ ಮಾಲೀಕರಿಗೆ ಮುಂದಿನ ನಾಲ್ಕೈದು ತಿಂಗಳು ರಿಯಾಯಿತಿ ಸಿಗುವ ಸಾಧ್ಯತೆಯಿದೆ. ಆಭರಣ ತಯಾರಕರು, ಅಂಗಡಿ ಮಾಲೀಕರು, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಣ್ಣಪುಟ್ಟ ಆಭರಣ ಮಳಿಗೆಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವವರು ಕಡ್ಡಾಯವಾಗಿ ಹಾಲ್​ಮಾರ್ಕ್​ ಪರವಾನಗಿ ನಿಯಮ ಪಾಲಿಸಬೇಕು.

    ಇದನ್ನೂ ಓದಿ: ಡಿಅಡಿಕ್ಷನ್ ಸೆಂಟರ್‌ನಲ್ಲಿ ಜೂಜಾಡುತ್ತಿದ್ದ 14 ಮಂದಿ ಬಂಧನ

    ಹೀಗಾಗಿ ರಾಜ್ಯದ ಎಲ್ಲ ಆಭರಣ ತಯಾರಕರು ಹಾಗೂ ಚಿನ್ನ-ಬೆಳ್ಳಿ ಮಾರಾಟಗಾರರು ಕೂಡಲೇ ಹಾಲ್​ಮಾರ್ಕ್​ ಪರವಾನಗಿ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಇದರ ಬಗ್ಗೆ ಉದಾಸೀನ ಮಾಡಕೂಡದು ಎಂದು ರಾಮಾಚಾರಿ ಹೇಳಿದ್ದಾರೆ.

    ಏನಿದು ಹಾಲ್​ಮಾರ್ಕ್​? : ಗ್ರಾಹಕರ ಬಳಕೆಯ ವಸ್ತುಗಳಿಗೆ ಐಎಸ್​ಐ, ಖಾದ್ಯ ವಸ್ತುಗಳಿಗೆ ಅಗ್​ಮಾರ್ಕ್​ ಇದ್ದಂತೆ ಚಿನ್ನಾಭರಣಗಳ ಶುದ್ಧತೆಗೆ ಹಾಲ್​ಮಾರ್ಕ್​ ಕಡ್ಡಾಯ. ಆಭರಣದಲ್ಲಿ ಬಳಸಲಾಗಿರುವ ಚಿನ್ನದ ಶುದ್ಧತೆಗೆ ಇದೊಂದು ಪ್ರಮಾಣ ಪತ್ರ.

    ಮದ್ಯದಂಗಡಿಯ ಶಟರ್​ ಕೊರೆದು ಒಳನುಗ್ಗಿ ಕಳ್ಳತನ

    ಅಳಿವಿನ ಅಂಚಿನಲ್ಲಿರುವ ಪ್ಯಾಂಗೋಲಿನ್ ಕಳ್ಳಸಾಗಣೆ : ಮೂವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts