More

    ಅಕ್ಷಯ ತೃತೀಯಕ್ಕೆ ಬೆಂಗಳೂರಿನಲ್ಲಿ ಎಷ್ಟಾಯಿತು ವಹಿವಾಟು: ಆನ್​ಲೈನ್​ ನಲ್ಲೂ ನಡೆದಿತ್ತು ವ್ಯಾಪಾರ

    ಬೆಂಗಳೂರು: ಲಾಕ್​ಡೌನ್ ನಡುವೆಯೂ ರಾಜ್ಯಾದ್ಯಂತ ಅಕ್ಷಯ ತೃತೀಯಕ್ಕೆ 45 ಕೋಟಿ ರೂ.ಗೂ ಅಧಿಕ ವಹಿವಾಟು ನಡೆದಿದೆ. ಕರೊನಾ ಸೋಂಕು ಹರಡುವ ಭೀತಿ ಕಾರಣ ಈ ಬಾರಿ ಆನ್​ಲೈನ್​ನಲ್ಲಿ ಚಿನ್ನಾಭರಣ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ಗ್ರಾಹಕರು ತಮ್ಮಿಷ್ಟದ ಆಭರಣ ಆಯ್ಕೆ ಮಾಡಿ ರಸೀದಿ ಪಡೆದಿದ್ದಾರೆ. ದಿಗ್ಬಂಧನ ಮುಕ್ತಾಯವಾಗಿ ಸಹಜ ಸ್ಥಿತಿಗೆ ಮರಳಿದ ಆಭರಣಗಳನ್ನು ಜನರು ಪಡೆಯಲಿದ್ದಾರೆ ಎಂದು ರಾಜ್ಯ ಆಭರಣ ವರ್ತಕರ ಸಂಘ ತಿಳಿಸಿದೆ.

    ಆಭರಣ ವಿಮೆ: ಚಿನ್ನಾಭರಣದ ಮೇಲೆ ಇದೇ ಮೊದಲ ಬಾರಿಗೆ ವಿಮೆ ಮಾಡಿಸಿದ್ದರಿಂದ ಸ್ವಲ್ಪ ಮಟ್ಟಿಗೆ ವ್ಯಾಪಾರ ವಹಿವಾಟು ನಡೆದಿದೆ. ಇದಲ್ಲದೆ ಮೊದಲೇ ನಿಗದಿಪಡಿಸಿದಂತೆ ಚಿನ್ನಾಭರಣಕ್ಕಾಗಿ ಮಾಸಿಕ ಕಂತಿನಲ್ಲಿ ಹಣ ಕಟ್ಟಿದ್ದ ಗ್ರಾಹಕರ ಮನೆಗೆ ಆಭರಣಗಳನ್ನು ತಲುಪಿಸಲಾಗಿದೆ.

    1 ಗ್ರಾಂ ಚಿನ್ನದ ನಾಣ್ಯ ಪಾರ್ಸೆಲ್: ಕೆಲ ಚಿನ್ನದ ವ್ಯಾಪಾರಿಗಳು ಮಾಸ್ಕ್, ಸ್ಯಾನಿಟೈಸರ್ ಜತೆ 1 ಗ್ರಾಂ ಚಿನ್ನದ ನಾಣ್ಯವನ್ನು ಗ್ರಾಹಕರಿಗೆ ಪಾರ್ಸೆಲ್ ಮಾಡಿದರು. ಇನ್ನು ಕೆಲ ಗ್ರಾಹಕರು ಮಳಿಗೆ ಸಿಬ್ಬಂದಿಗೆ ವಿಡಿಯೋ ಕಾಲ್ ಮೂಲಕ ಆಭರಣ ಬುಕ್ ಮಾಡಿದರು.

    ರಾಜಧಾನಿಯಲ್ಲಿ ಕೆಲವೆಡೆ ಮಳಿಗೆಗಳನ್ನು ತೆರೆದರೆ, ಹಲವೆಡೆ ತೆರೆಯುವ ಗೋಜಿಗೆ ಹೋಗಲಿಲ್ಲ. ಈ ಹಿನ್ನೆಲೆಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ವಹಿವಾಟು ನಡೆದಿದೆ ಎಂದು ಸಂಘದ ಮೂಲಗಳು ತಿಳಿಸಿವೆ.

    VIDEO: ನಿಯಮ ಉಲ್ಲಂಘಕರ ಕ್ವಾರಂಟೈನ್ ಹೋಮ್​ ಯಾವುದೆಂದು ತಿಳಿದರೆ ಬೆಚ್ಚಿ ಬೀಳೋದು ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts