More

    ಕಾಪರ್ ವೈರ್ ಕಳ್ಳರ ಬಂಧನ

    ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಸಾಗರ ಗ್ರಾಮದ ರೈತ ತಟ್ಟಿ ಜಗದೀಶ್ ಅವರ ಜಮೀನಿನಲ್ಲಿ ಮೋಟಾರ್, ಸ್ಟಾರ್ಟರ್ ಮತ್ತು ಕಾಪರ್ ವೈರ್‌ಗಳನ್ನು ಕಳ್ಳರನ ಮಾಡಿದ್ದ ನಾಲ್ವರನ್ನು ತಂಬ್ರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಹೂವಿನಹಡಗಲಿಯ ಹನುಮಂತಪ್ಪ ಕೊರವರ, ಹಂಪಸಾಗರ-3 ಗ್ರಾಮದ ಸುರೇಶ ಕೊರವರ, ಭಜಂತ್ರಿ ಜಗದೀಶ್ ಮತ್ತು ಕೊಂಬಳಿಯ ಮಾರುತಿ ಬಂಧಿತರು. ಇವರು ತಂಬ್ರಹಳ್ಳಿಯ ಠಾಣೆಯಲ್ಲಿನ 2, ಹೊಸಹಳ್ಳಿಯಲ್ಲಿನ 1, ಗುಡೇಕೋಟೆಯಲ್ಲಿನ 2 ಮತ್ತು ಹರಪನಹಳ್ಳಿ ಠಾಣೆಯಲ್ಲಿನ 1 ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇವರು ಬ್ಯಾಟರಿ ಕಳ್ಳತನ ಮಾಡಿ, ಅದರಲ್ಲಿದ್ದ ಕಾಪರ್ ವೈರ್ ಮಾರಾಟ ಮಾಡುತ್ತಿದ್ದರು.

    ಇವರನ್ನು ಬಂಧಿಸಿರುವ ಸಿಪಿಐ ಮಂಜಣ್ಣ ನೇತೃತ್ವದಲ್ಲಿ ತಂಡ 3.50ಲಕ್ಷ ರೂ. ಮತ್ತು 40 ಸಾವಿರ ರೂ. ಮೌಲ್ಯದ 210 ಮೀಟರ್ ಉದ್ದದ ಕಾಪರ್ ವೈರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೊಲೇರೋ ವಾಹನ, ಯೂನಿಕಾರ್ನ್ ಬೈಕ್ ಜಪ್ತಿ ಮಾಡಿದ್ದಾರೆ. ತಂಬ್ರಹಳ್ಳಿ ಪಿಎಸೈ ಮಾರುತಿ, ಸಿಬ್ಬಂದಿ ವೆಂಕಟೇಶ್, ಕಿರಣಕುಮಾರ್, ದಶರಥ, ಗುರುರಾಜ್, ದೊಡ್ಡಬಸವರಾಜ, ವಿರೇಶ್, ರೇವಣಸಿದ್ದಪ್ಪ, ಪ್ರಶಾಂತ ಕುಮಾರ್, ಶಿವಾನಂದ, ಶಿವರಾಜ ಈ ತಂಡದಲ್ಲಿ ಇದ್ದರು. ವಿಜಯನಗರ ಎಸ್ಪಿ ಡಾ.ಕೆ.ಅರುಣ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts