More

    ಕೇರಳ ಮಾದರಿಯಲ್ಲಿ ಗೌರವಧನ ಹೆಚ್ಚಿಸಿ

    ಹಗರಿಬೊಮ್ಮನಹಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ತಾಲೂಕು ಘಟಕ ಸೋಮವಾರ ಉಪತಹಸೀಲ್ದಾರ್ ಶಿವಕುಮಾರ ಗೌಡಗೆ ಮನವಿ ಸಲ್ಲಿಸಿತು.

    ಒಕ್ಕೂಟದ ತಾಲೂಕಾಧ್ಯಕ್ಷೆ ಮಮತಾ ತಳವಾರ್ ಮಾತನಾಡಿ, ಗ್ರಾಪಂಗಳಿಗೆ ಜವಾಬ್ದಾರಿ ನಕ್ಷೆ ರಚಿಸಬೇಕಿದೆ. ಸರ್ಕಾರದ ವಿವಿಧ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯುವ ದೃಷ್ಟಿಯಿಂದ ಬಾಪೂಜಿ ಸೇವಾ ಕೇಂದ್ರಗಳ ಬಲವರ್ಧನೆ, ಮುಂಚೂಣಿ ಕಾರ್ಯಾಲಯಗಳ ಸ್ಥಾಪಿಸಬೇಕು. 29 ವಿಷಯಗಳಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ಪಂಚಾಯತ್ ರಾಜ್ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವಂತಾಗಲು ಅಧಿಕಾರ ವಿಕೇಂದ್ರಿಕರಣ ಕಾಯ್ದೆ ರಚನೆ ಮಾಡಬೇಕು.

    ಇ-ಸ್ವತ್ತು ಅಂದೋಲನದ ಮೂಲಕ ಗ್ರಾಪಂ ತೆರಿಗೆಗೆ ಒಳಪಟ್ಟಿರುವ ಎಲ್ಲ ಆಸ್ತಿಗಳಿಗೆ ಇ-ಸ್ವತ್ತು ದಾಖಲೆ ಸೃಜನೆ ಮಾಡಿ ಹಂಚಬೇಕು. ಪಂಚಾಯಿತಿ ಸದಸ್ಯರನ್ನು ರಾಜ್ಯ ಶಿಷ್ಟಾಚಾರಕ್ಕೆ ಒಳಪಡಿಸುವುದು ಸೇರಿದಂತೆ ಕೇರಳ ಮಾದರಿಯಲ್ಲಿ ಗೌರವಧನ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಫೆ.8ರಂದು ಬೆಂಗಳೂರು ಚಲೋ ಹೋರಾಟ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ವಲ್ಲಭಾಪುರ ಗ್ರಾಪಂ ಸದಸ್ಯರಾದ ಕೆ.ಲಕ್ಷ್ಮೀ, ಎಸ್.ಲಕ್ಷ್ಮವ್ವ, ನಾಗರಾಜ, ಎ.ಗಂಗಮ್ಮ ಹನುಮಂತಪ್ಪ, ಕರೀಂಸಾಬ್, ಕೆ.ಮಂಜುನಾಥ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts