More

    ಖಾತ್ರಿ ಯೋಜನಡಿ 200 ಮಾನವ ದಿನಗಳನ್ನು ಹೆಚ್ಚಿಸುವಂತೆ ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಒತ್ತಾಯ

    ಹಗರಿಬೊಮ್ಮನಹಳ್ಳಿ: ನರೇಗಾ ಖಾತ್ರಿ ಕಾನೂನಡಿಯಲ್ಲಿ 200 ಮಾನವ ದಿನಗಳನ್ನು ಹೆಚ್ಚಿಸಿ, ಪಡಿತರ ವಿತರಣೆಯಲ್ಲಿ ತಲಾ 5 ಕೆಜಿ ಹೆಚ್ಚಿಗೆ ಆಹಾರ ಧಾನ್ಯಗಳನ್ನು ನೀಡುವಂತೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ತಹಸಿಲ್ ಕಚೇರಿಗೆ ಮಂಗಳವಾರ ಮುತ್ತಿಗೆ ಪ್ರತಿಭಟನೆ ನಡೆಸಿತು.

    ಬಳಿಕ ಸಂಘಟನೆ ಸಂಚಾಲಕಿ ಎಂ.ಬಿ.ಕೊಟ್ರಮ್ಮ ಮಾತನಾಡಿ, ಲಾಕ್‌ಡೌನ್ ಮತ್ತು ಕೋವಿಡ್ 19 ಸಾಂಕ್ರಮಿಕ ರೋಗದಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸವಿಲ್ಲದೇ ತಮ್ಮ ಗ್ರಾಮಗಳಿಗೆ ಮರಳಿ ಬಂದಿದ್ದಾರೆ. ಸಾವಿರಾರು ಕುಟುಂಬಗಳು ಈಗಾಗಲೇ 100 ದಿನಗಳನ್ನು ಪೂರೈಸಿದ್ದಾರೆ. ಮರುವಲಸೆ ಬಂದ ಕುಟುಂಬದ ಸದಸ್ಯರು ಸೇರಿದಂತೆ ಸದ್ಯಕ್ಕೆ ಯಾವುದೇ ಉದ್ಯೋಗವಿಲ್ಲದೇ ಆಹಾರ ಧಾನ್ಯ ಕೊರತೆಯಿಂದಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಇದರೊಂದಿಗೆ ಅತಿವೃಷ್ಟಿ, ಪ್ರವಾಹದಿಂದಾಗಿ ಸಾವಿರಾರು ಕಾರ್ಮಿಕ ಕುಟುಂಬಗಳ ಬದುಕು ಬೀದಿಗೆ ಬಂದಂತಾಗಿದೆ. ರಾಜ್ಯ ಸರ್ಕಾರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

    ಇದಕ್ಕೂ ಮುನ್ನ ಪಟ್ಟಣದ ರಾಮನಗರದ ಈಶ್ವರ ದೇಗುಲದಿಂದ ತಹಸಿಲ್ ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಸಿತು. ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆಯ ಕಾರ್ಯಕರ್ತರಾದ ಆರ್.ಹನುಮಂತಪ್ಪ, ಎಸ್.ಅಕ್ಕಮಹಾದೇವಿ, ತ್ರಿವೇಣಿ, ಮುಖಂಡ ಕೋಗಳಿ ಉಮೇಶ್, ಕಾಯಕಬಂಧುಗಳಾದ ಕೊಟ್ರೇಶ್, ನಾಗಭೂಷಣ್, ಅಜ್ಜಪ್ಪ, ಯಮುನಪ್ಪ, ದೇವರಾಜ್, ಮರಿಯಮ್ಮ, ದೊಡ್ಡಬಸಪ್ಪ, ಶಿವಮೂರ್ತಿ, ಮಲ್ಲೇಶ್, ಮಹೇಶ್, ನಾಗರಾಜ, ದಾಕ್ಷಾಣಮ್ಮ, ದುರುಗೇಶ್, ಮಲ್ಲಪ್ಪ, ಯಲ್ಲಪ್ಪ, ಜಯಮ್ಮ, ಗಂಗಮ್ಮ, ಬುಡೆನ್‌ಸಾಬ್, ಮೇಘರಾಜ, ಸೋಮಶೇಖರ್, ಶರಣಪ್ಪ, ವಿಠಲ, ಉಮಾದೇವಿ, ಪ್ರವೀಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts