More

    ಆಹಾರ ಧಾನ್ಯದ ಕಿಟ್ ಕಳಪೆ

    ಶಿರಹಟ್ಟಿ: ಕಾರ್ವಿುಕ ಇಲಾಖೆಯಿಂದ ವಿತರಿಸಲಾದ ಆಹಾರ ಧಾನ್ಯದ ಕಿಟ್ ಕಳಪೆಯಾಗಿವೆ ಎಂದು ಕಾರ್ವಿುಕರು ಆರೋಪಿಸಿದ್ದಾರೆ.

    ತಾಲೂಕಿನ ಕುಂದ್ರಳ್ಳಿ ಗ್ರಾಮದಲ್ಲಿ ಮಂಗಳವಾರ ಸಾಂಕೇತಿಕವಾಗಿ ಕೆಲವರಿಗೆ ಆಹಾರ ಧಾನ್ಯದ ಕಿಟ್ ವಿತರಿಸಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಗೋಧಿ ಹಿಟ್ಟು, ರವೆ, ಬೇಳೆ ಪ್ಯಾಕೆಟ್ ತೆಗೆದು ನೋಡಿದಾಗ ವಾಸನೆ ಬರುತ್ತಿತ್ತು. ಕಳೆದ ಸೆಪ್ಟೆಂಬರ್​ನಲ್ಲಿ ಸಿದ್ಧಪಡಿಸಿದ ಪ್ಯಾಕೆಟ್ ಬಳಕೆ ಕಾಲಾವಧಿ 3 ತಿಂಗಳು ಎಂದು ನಮೂದಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಕಟ್ಟಡ ಕಾರ್ವಿುಕ ಸಂಘದ ಮುಖಂಡ ಅಶರತ್ ಢಾಲಾಯತ್, ಕಾರ್ವಿುಕ ನೂರ್​ಅಹ್ಮದ್ ಢಾಲಾಯತ್, ಶಶಿ ಪರಬತ ಇತರರು ಪಟ್ಟಣದ ಕಾರ್ವಿುಕ ಇಲಾಖೆ ಕಚೇರಿಯಲ್ಲಿ ಕಾರ್ವಿುಕ ಇಲಾಖೆ ಅಧಿಕಾರಿ ಅನುರಾಧಾ ಕಾಕತ್ಕರ ಅವರನ್ನು ತರಾಟೆಗೆ ತೆಗೆದುಕೊಂಡು.

    ಪ್ರತಿಕ್ರಿಯಿಸಿದ ಅಧಿಕಾರಿ ಅನುರಾಧಾ, ‘ತಾಲೂಕಿನ ಬಡ ಕಾರ್ವಿುಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಶಾಸಕರು ಕಾರ್ವಿುಕ ಇಲಾಖೆ ಸಚಿವರಿಗೆ ಮನವಿ ಮಾಡಿದ್ದರಿಂದ ನಮಗೆ 3 ಸಾವಿರ ಆಹಾರ ಕಿಟ್ ಪೂರೈಸಲಾಗಿದೆ. ಕಿಟ್​ನಲ್ಲಿದ್ದ ಆಹಾರ ಧಾನ್ಯ ಕಳಪೆಯಾಗಿವೆ ಎಂಬುದು ಗಮನಕ್ಕೆ ಬಂದಿಲ್ಲ. ಈ ಕುರಿತು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts