More

    ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಹಬೊಹಳ್ಳಿ ಜನವಾದಿ ಮಹಿಳಾ ಸಂಘಟನೆ-ಅಂಗವಿಕಲರ ಒಕ್ಕೂಟ ಒತ್ತಾಯ

    ಹಗರಿಬೊಮ್ಮನಹಳ್ಳಿ: ಆರನೇ ವೇತನ ಆಯೋಗ ಶಿಫಾರಸಿಗೆ ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ಪದಾಧಿಕಾರಿಗಳು ಭಾನುವಾರ ಸಾರಿಗೆ ಡಿಪೋ ವ್ಯವಸ್ಥಾಪಕ ವೆಂಕಟಚಲಪತಿಗೆ ಮನವಿ ಸಲ್ಲಿಸಿದರು.

    ಅಂಗವಿಕಲರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಉಸ್ಮಾನ್ ಬಾಷಾ ಮಾತನಾಡಿ, ವೇತನ ಪರಿಷ್ಕರಣೆಗೆ ಕಳೆದ 11 ದಿನಗಳಿಂದ ಸಾರಿಗೆ ನೌಕರರು ಮುಷ್ಕರ ಕೈಗೊಂಡಿದ್ದಾರೆ. ಆದರೆ, ಸರ್ಕಾರ ಸ್ಪಂದಿಸದಿರುವುದು ಖಂಡನೀಯ. ಸರ್ಕಾರಿ ಬಸ್‌ಗಳಿಲ್ಲದ ಕಾರಣ ರಾಜ್ಯದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರಕ್ಕೆ ಮುಂಗಡ ಹಣ ಪಾವತಿಸಿ ಬಸ್‌ಪಾಸ್ ಪಡೆದವರು, ಅಂಗವಿಕಲರು, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಶೀಘ್ರವೇ ಸರ್ಕಾರ ನೌಕರರ ಬೇಡಿಕೆ ಈಡೇರಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

    ಜನವಾದಿ ಮಹಿಳಾ ಸಂಘಟನೆ ತಾಲೂಕು ಕಾರ್ಯದರ್ಶಿ ಜಿ.ಸರೋಜಮ್ಮ, ಮುಖಂಡರಾದ ಸರ್ದಾರ್ ಹುಲಿಗೆಮ್ಮ, ಬಿ.ರೇಣುಕಾ, ಕೆ.ಪಾಯಲ್ ಬಾನು, ಕೆ.ಹುಲುಗಪ್ಪ, ಡಿ.ಬಸವರಾಜ, ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಎಚ್.ನಿಂಗಪ್ಪ, ಕೃಷ್ಣ, ಚಾಂದ್ ಸಲಾಂ, ಸಮುದಾಯ ಸಂಘಟನೆಯ ಬಸವರಾಜ ಕಮ್ಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts