More

    ಜ್ಞಾನವಾಪಿ ಮಸೀದಿ ಪ್ರಕರಣ: 45 ನಿಮಿಷಗಳ ಕಾಲ ವಾದ-ಪ್ರತಿವಾದ ಆಲಿಸಿದ ಕೋರ್ಟ್​​, ನಾಳೆಗೆ ಪ್ರಕಟವಾಗಲಿದೆಯಾ ಅಂತಿಮ ತೀರ್ಪು?

    ವಾರಾಣಸಿ: ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.

    ತೀವ್ರ ಕುತೂಹಲ ಮೂಡಿಸಿರುವ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ವಿಚಾರದ ಬಗ್ಗೆ ವಾದ -ಪ್ರತಿವಾದ ಆಲಿಸಿದ ಕೋರ್ಟ್​​​​ ಮಂಗಳವಾರಕ್ಕೆ ತೀರ್ಪು ಪ್ರಕಟಿಸಲಿದೆ.

    ಜಿಲ್ಲಾ ನ್ಯಾಯಾಧೀಶ ಎಕೆ ವಿಶ್ವೇಶ ಅವರು ಪ್ರಕರಣದ ವಿಚಾರಣೆಯನ್ನು ಆಲಿಸಿದ್ದಾರೆ. ಕಾಶಿವಿಶ್ವನಾಥ ದೇವಾಲಯ ಹಾಗೂ ಜ್ಞಾನವಾಪಿ ಮಸೀದಿ ಪರವಾಗಿ ಇಬ್ಬರ ವಾದವನ್ನು 45 ನಿಮಿಷಗಳವರೆಗೆ ಆಲಿಸಿದ ನ್ಯಾಯಾಧೀಶರು ತೀರ್ಪನ್ನು ನಾಳೆಗೆ ಪ್ರಕಟಿಸಲಾಗುವುದು ಎಂದು ವಿಚಾರಣೆಯನ್ನು ಮುಂದೂಡಿದ್ದಾರೆ.

    ಇದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ಕೇವಲ 19 ಕೌನ್ಸಿಲರ್​​ ಮತ್ತು ನಾಲ್ವರು ಅರ್ಜಿದಾರರು ಸೇರಿದಂತೆ ಒಟ್ಟು 23 ಮಂದಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಮಾಜಿ ಕೋರ್ಟ್​​ ಕಮಿಷನರ್​ ಅಜಯ್​ ಮಿಶ್ರಾ ಅವರನ್ನು ಸಹ ಒಳಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತು.

    ಇನ್ನು ಈ ಪ್ರಕರಣ ಸುಪ್ರೀಂಕೋರ್ಟ್​ ಅಂಗಳಕ್ಕೂ ವಿಚಾರಣೆಗೆ ಬಂದಿತ್ತು. ಪ್ರಕರಣವನ್ನು ಸ್ಥಳೀಯ ನ್ಯಾಯಾಲಯದಲ್ಲೇ ಬಗೆಹರಿಸುವಂತೆ ಆದೇಶಿಸಿತ್ತು. ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಜಾಗವನ್ನು ಸೀಲ್​ ಮಾಡುವಂತೆಯೂ ಸುಪ್ರೀಂ ಆದೇಶಿಸಿತ್ತು. ಸದ್ಯ ತೀರ್ಪಿಗಾಗಿ ಇಡೀ ದೇಶವೇ ಕಾಯುತ್ತಿದೆ. (ಏಜೆನ್ಸೀಸ್​)

    ಹೊಸ ವಿಮಾನದ ವಿನ್ಯಾಸ ನೋಡಿದ್ರೆ ಬೆರಗಾಗ್ತೀರಾ! ಆಕಾಶ ಏರ್​​ಲೈನ್​​ ವಿಮಾನದ ಮೊದಲ ಚಿತ್ರ ಹಂಚಿಕೊಂಡ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts