More

    ಕೃಷ್ಣನಿಗೆ ಅರ್ಪಿಸಿಕೊಂಡಿದ್ದೇ ನನ್ನ ಸಂನ್ಯಾಸ ಜೀವನದ ಸಾಧನೆ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಐವತ್ತು ವರ್ಷ ಸಂನ್ಯಾಸ ಧರ್ಮ ಪಾಲಿಸಿದ ಸುವರ್ಣ ಸಂದರ್ಭದಲ್ಲಿ ಪದ್ಮಪಿಠದಲ್ಲಿ ಕುಳ್ಳಿರಿಸಿ, ಗೌರವಿಸಿರುವುದು ಸಂತಸ ತಂದಿಲ್ಲ. ಈ ವಂದನೆ ನನಗೆ ಆಶ್ಚರ್ಯ ತಂದಿದೆ. ಏಕೆಂದರೆ, ನಾನೇನೂ ಸಾಧನೆ ಮಾಡಿಲ್ಲ. ಆದರೆ, ಶ್ರೀಕೃಷ್ಣನಿಗೆ ಅರ್ಪಿಸಿಕೊಂಡಿದ್ದೇ ನನ್ನ ಸಂನ್ಯಾಸ ಜೀವನದ ಸಾಧನೆ ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

    ಉಡುಪಿಯ ರಾಜಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪುತ್ತಿಗೆ ಶ್ರೀ ಸಂನ್ಯಾಸ ಸುವಣೋರ್ತ್ಸವ ಗುರುವಂದನೆ ಹಾಗೂ ಶ್ರೀಕೃಷ್ಣನ ಪಾರ್ಥಸಾರಥಿ ಸುವರ್ಣ ರಥಕ್ಕೆ 108 ಸುವರ್ಣ ನಾಣ್ಯಗಳ ಸಮರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

    ಭಕ್ತರ ಸಹಕಾರ

    ಜಗದ್ಗುರು ಮಧ್ವಾಚಾರ್ಯರ ಹಾಗೂ ಉಪೇಂದ್ರ ತೀರ್ಥರ ಪೀಠದಲ್ಲಿ ಕುಳಿತು ಮಾಡಿದ ಸೇವೆ ಅದು ನನ್ನದಲ್ಲ. ಅದೆಲ್ಲ ಶ್ರೀಕೃಷ್ಣನ ಸಂಕಲ್ಪ. ಕೈಗೊಂಡ ಯೋಜನೆ, ಯೋಚನೆಗಳೆಲ್ಲವೂ ಶ್ರೀಕೃಷ್ಣನಿಗೇ ಸಮರ್ಪಣೆ ಆಗಬೇಕೆಂಬ ಉದ್ದೇಶದಿಂದ ‘ಪಾರ್ಥಸಾರಥಿ’ ಸ್ವರ್ಣರಥದ ಸಮರ್ಪಣೆಗೆ ಸಂಕಲ್ಪ ಮಾಡಿದ್ದೇನೆ. ಎಲ್ಲ ಸಮಾಜದ ಭಕ್ತರ ಸಹಕಾರದೊಂದಿಗೆ ಅವರೇ ಈ ಯೋಜನೆಗೆ ಚಾಲನೆ ನೀಡದ್ದು ಸಂತಸ ತಂದಿದೆ ಎಂದರು.

    ಕೃಷ್ಣನಿಗೆ ಕೊಡುಗೆ

    50 ವರ್ಷದ ಸಂನ್ಯಾಸ ಪಯಣ ಸುಗಮಗೊಳಿಸಿದ ಶ್ರೀಕೃಷ್ಣನಿಗೆ ಕೃತಜ್ಞತೆ ಸಲ್ಲಿಸಲು ಪೊಡವಿಗೊಡೆಯನಾದರೂ ಆತನಿಗೊಂದು ವಾಹನ ಕೊಡುಗೆ ಸಂಕಲ್ಪ ನನ್ನದು. ಅನೇಕರು ಶುಭ ಸಂದರ್ಭದಲ್ಲಿ, ಜನ್ಮದಿನದಂದು ಕಾರು ಇನ್ನಿತರ ವಸ್ತು ನೀಡುತ್ತಾರೆ. ವ್ಯಕ್ತಿಯೊಬ್ಬ ತನ್ನ ಪತ್ನಿಯ ಜನ್ಮದಿನಕ್ಕೆ ವಿಮಾನ ಕೊಡುಗೆ ಕೊಟ್ಟಿದ್ದನ್ನು ಕೇಳಿದ್ದೇವೆ. ಹಾಗೆಯೇ ನನ್ನ ಸಂನ್ಯಾಸ ಜನ್ಮದಿನದ ಕೊಡುಗೆಯಾಗಿ ಕೃಷ್ಣನಿಗೆ ಸ್ವರ್ಣರಥವೆಂಬ ವಾಹನ ಕೊಡಲು ಯೋಜಿಸಿದ್ದೇನೆ. ಅದಕ್ಕೆ ಅನೇಕ ಸಮಾಜ, ಜಾತಿಯ ನೂರಾರು ಭಕ್ತರು ಸುವರ್ಣ ದಾನದ ಮೂಲಕ ಕೈಜೋಡಿಸಿದ್ದೀರಿ. ತಮ್ಮೆಲ್ಲರ ಬದುಕೂ ಸಹ ಸುವರ್ಣವಾಗಿರಲಿ ಎಂದು ಆಶೀರ್ವದಿಸಿದರು.

    ಕಾರ್ಯಕ್ರಮದಲ್ಲಿ ಡಾ.ಎಚ್​.ಎಸ್​, ಬಲ್ಲಾಳ್​, ಭುವನೇಂದ್ರ ಕಿದಿಯೂರು, ರತಶಿಲ್ಪಿ ರಾಜಗೋಪಾಲ್​ ಆಚಾರ್​, ಕರ್ನಾಟಕ ಬ್ಯಾಂಕ್​ ಎಜಿಎಂ ರಾಜಗೋಪಾಲ್​, ಮಂಜುನಾಥ ಉಪಾಧ್ಯಾಯ, ಸುಬ್ರಹ್ಮಣ್ಯ ಶೇಟ್​, ರಾಜೇಶ್​ ಮುಧೋಳ್​, ಹರಿಶ್ಚಂದ್ರ ಜೋಗಿ ಇತರರಿದ್ದರು.
    ಪುತ್ತಿಗೆ ವಿದ್ಯಾಪಿಠದ ವಿದ್ಯಾರ್ಥಿಗಳು ವೇದಘೋಷ ಹೇಳಿದರು. ಮಠದ ಕಾರ್ಯಕ್ರಮಗಳ ಉಸ್ತುವಾರಿ ರಮೇಶ್​ ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಶತಾವಧಾನಿ ವಿದ್ವಾನ್​ ಡಾ. ರಾಮನಾಥ ಆಚಾರ್ಯ ಅಭಿನಂದನಾ ಮಾತುಗಳನ್ನಾಡಿದರು. ವಿದ್ವಾನ್​ ಡಾ. ಬಿ. ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

    ಪ್ರೀತಿಯನ್ನು ಬೆಳೆಸಿ, ದ್ವೇಷವನ್ನಲ್ಲ

    ಜಗತ್ತಿನಲ್ಲಿ ವಿಭಾಜಕ ಶಕ್ತಿಗಳು ಪ್ರಬಲವಾಗುತ್ತಿವೆ. ಎಲ್ಲೆಡೆ ದ್ವೇಷ ಬೆಳೆಸುವ ಪ್ರವೃತ್ತಿ ಬೆಳೆಯುತ್ತಲಿದೆ. ಸ್ನೇಹ&ಪ್ರೀತಿ, ವಿಶ್ವಾಸ ಬೆಳೆಸುವ ಶಕ್ತಿ ಕುಂಠಿತವಾಗುತ್ತಿವೆ. ಹೀಗಾಗಿ ಯತಿಗಳು, ಸ್ವಾಮಿಗಳು, ಪೀಠಾಧಿಪತಿಗಳಾದವರು ಸಮಾಜದಲ್ಲಿ ಏಕತೆ, ಒಗ್ಗಟ್ಟು ಸಾಧಿಸಬೇಕು. ದ್ವೇಷದ ಬದಲು ಪ್ರೀತಿ ಬೆಳೆಸುವಂತಹ ವಾತಾವರಣ ಸೃಷ್ಟಿಸಬೇಕು. ಸಮಾಜ, ಧರ್ಮ, ಜಾತಿಗಳ ನಡುವೆ ಪರಸ್ಪರ ವಿಶ್ವಾಸ ವೃದ್ಧಿಸುವ ಕೆಲಸ ಮಾಡಬೇಕು. ಆಗಲೇ ಸಜ್ಜನರು ಹೆಚ್ಚಾಗಿ, ದುರ್ಜನರ ಉಪಟಳ ಕಡಿಮೆಯಾಗುತ್ತದೆ. ಎಲ್ಲ ಸಮಾಜದ ಸಜ್ಜನರು, ಸಾತ್ವಿಕರು ಒಂದಾಗಿ ಬದುಕಿದರೆ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಸುಗುಣೆಂದ್ರ ಶ್ರೀಗಳು ಆಶೀರ್ವಚನ ನೀಡಿದರು.

    ಪುತ್ತಿಗೆ ಶ್ರೀಗಳೆಂದರೆ ಇತಿಹಾಸ ನಿರ್ಮಿಸುವವರು. 800 ವರ್ಷಗಳಿಂದ ಮಠದೊಳಗೆ ಉತ್ಸವ ನಡೆಸಲು ರಥ ಇರಲಿಲ್ಲ. ಅವರ 50ನೇ ವರ್ಷದ ಸಂನ್ಯಾಸದ ಸುವರ್ಣ ಸಂದರ್ಭದಲ್ಲಿ ಸ್ಪರ್ಣ ರಥ ಕೊಡುಗೆ ನೀಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅವರ ಪರ್ಯಾಯ ಅವಧಿಯಲ್ಲಿ ಕಾಶಿ ಕಾರಿಡಾರ್​ನಂತೆ ಉಡುಪಿಯಲ್ಲೂ ಕಾರಿಡಾರ್​ ನಿರ್ಮಿಸುವ ಮೂಲಕವೂ ಮತ್ತೊಂದು ಇತಿಹಾಸ ದಾಖಲಿಸಲಿದ್ದಾರೆ.

    ರಘುಪತಿ ಭಟ್​. ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts