More

    ಶಿಥಿಲಾವಸ್ಥೆಯಲ್ಲಿ ಯರಜಂತಿ ಸರ್ಕಾರಿ ಶಾಲೆ

    ಗುರುಗುಂಟಾ: ಯರಜಂತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಛಾವಣಿ ಶಿಥಿಲಾವಸ್ಥೆಯಲ್ಲಿದ್ದು, ಕಾಂಕ್ರಿಟ್ ಕಿತ್ತು ಹೋಗಿದ್ದು, ಕಬ್ಬಿಣದ ಸರಳು ಕಾಣುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು ತರಗತಿಯಲ್ಲಿ ಆತಂಕದಲ್ಲಿ ಕುಳಿತುಕೊಳ್ಳುವಂತಾಗಿದೆ.

    444 ವಿದ್ಯಾರ್ಥಿಗಳಿಗೆ ಒಬ್ಬ ಕಾಯಂ ಶಿಕ್ಷಕ

    2001ರಲ್ಲಿ ಆರಂಭವಾದ ಶಾಲೆಯಲ್ಲಿ ಒಂದರಿಂದ ಏಳರವರೆಗೆ ತರಗತಿಗಳಿದ್ದು, ಎಂಟು ಕೊಠಡಿಗಳಿವೆ. 444 ವಿದ್ಯಾರ್ಥಿಗಳು ಓದುತ್ತಿದ್ದು, ಒಬ್ಬ ಕಾಯಂ ಶಿಕ್ಷಕರಿದ್ದಾರೆ. ಏಳು ಜನ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಗಣಿತ, ವಿಜ್ಞಾನ, ಇಂಗ್ಲಿಷ್ ಶಿಕ್ಷಕರಿಲ್ಲ. ಶಾಲೆ ಆರಂಭದಿಂದ ಹಿಂದಿ ಶಿಕ್ಷಕರ ನಿಯೋಜನೆಯಾಗಿಲ್ಲ.

    ಇದನ್ನೂ ಓದಿ: ಈತನ ಹೆಸರು ಸಚಿನ್, ಇಷ್ಟದ ಕ್ರಿಕೆಟಿಗ ವಿರಾಟ್ ಕೊಹ್ಲಿ!: ಭಾರತ ಕಿರಿಯರ ತಂಡದ ಗೆಲುವಿನ ರೂವಾರಿ 

    ಕನಿಷ್ಠ ಸೌಕರ್ಯಗಳನ್ನು ಒದಗಿಸಲು ಶಿಕ್ಷಣ ಇಲಾಖೆ ಮುತುವರ್ಜಿ ವಹಿಸಿಲ್ಲ. ಶಾಲೆಯ ಬೋರ್‌ವೆಲ್ ಕೆಟ್ಟು ಒಂದು ವರ್ಷವಾದರೂ ದುರಸ್ತಿ ಮಾಡಿಲ್ಲ. ಸಾರ್ವಜನಿಕ ಬೋರ್‌ವೆಲ್‌ನಿಂದ ಶಾಲೆ ಗುಮ್ಮಿಗೆ ನೀರು ಪೂರೈಸಲಾಗುತ್ತದೆ. ಶಾಲೆ ಸುತ್ತಲೂ ಎಲ್ಲೆಂದರಲ್ಲಿ ಕಸ ಚೆಲ್ಲುತ್ತಿದ್ದರಿಂದ ಸ್ವಚ್ಛತೆ ಮಾಯವಾಗಿದೆ.
    ಶಾಲೆಯಲ್ಲಿ ಶೌಚಗೃಹವಿದ್ದರೂ ನೀರಿನ ಕೊರತೆಯಿಂದ ಉಪಯೋಗಕ್ಕಿಲ್ಲದಂತಾಗಿದೆ. ಅನೇಕ ವರ್ಷಗಳು ಕಳೆದರೂ ಶಾಲೆ ಕಟ್ಟಡ ದುರಸ್ತಿ ಹಾಗೂ ಸುಣ್ಣ-ಬಣ್ಣಕ್ಕೆ ಕ್ರಮ ಕೈಗೊಂಡಿಲ್ಲ. ಮುಖ್ಯಶಿಕ್ಷಕ ರಾಚಯ್ಯಗೆ ಯರಜಂತಿಯೊಂದಿಗೆ ಮಲ್ಲಾಪುರ ಶಾಲೆ ಜವಾಬ್ದಾರಿಯನ್ನೂ ವಹಿಸಲಾಗಿದೆ. ತಲಾ ಮೂರು ದಿನ ಒಂದೊಂದು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts