More

    VIDEO| ಕರೊನಾ ನಿಯಂತ್ರಿಸಲು ಆಯುರ್ವೇದಿಕ್​ ಸ್ಟೀಮ್​ ಮೊರೆ ಹೋದ ಗುಂಡ್ಲುಪೇಟೆ ಪೊಲೀಸರು!

    ಚಾಮರಾಜನಗರ: ಮಹಾಮಾರಿ ಕರೊನಾ ವೈರಸ್​ ನಿಯಂತ್ರಿಸಲು ಜನರು ವಿವಿಧ ತಂತ್ರಗಳ ಮೊರೆ ಹೋಗುತ್ತಿದ್ದಾರೆ. ಅದಕ್ಕೆ ಪೊಲೀಸರು ಸಹ ಹೊರತಾಗಿಲ್ಲ. ಸದ್ಯ ಹೆಚ್ಚು ಪ್ರಚಾರದಲ್ಲಿರುವ ತಂತ್ರವೆಂದರೆ ಅದು ಸ್ಟೀಮ್​.

    ಇದೀಗ ಗುಂಡ್ಲುಪೇಟೆ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿದ್ದು, ಆಯುರ್ವೇದಿಕ್​ ಸ್ಟೀಮ್​ ಮೂಲಕ ಕರೊನಾದಿಂದ ರಕ್ಷಣೆ ಪಡೆದುಕೊಳ್ಳಲು ಮುಂದಾಗಿದ್ದಾರೆ.

    ಜನರ ನಡುವೆ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮುಂದಾಗಿರುವ ಗುಂಡ್ಲುಪೇಟೆ ಠಾಣಾಧಿಕಾರಿಗಳು ಆಯುರ್ವೇದಿಕ್​ ಸ್ಟೀಮ್​ ಮೊರೆ ಹೋಗಿದ್ದಾರೆ.

    ಒಂದು ಕುಕ್ಕರ್​ಗೆ ನೀರು, ಅರಿಶಿನ, ಮೆಣಸು, ಜೀರಿಗೆ ಹಾಕಿ ಕುದಿಸಿ ಸ್ಟೀಮ್ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಒಮ್ಮೆಗೆ ನಾಲ್ಕು ಜನ ಪೊಲೀಸರು ಸ್ಟೀಮ್ ತೆಗೆದುಕೊಳ್ಳುವಂತೆ ಪೈಪ್​ಗಳನ್ನು ಅಳವಡಿಸಲಾಗಿದೆ.

    ಕರ್ತವ್ಯಕ್ಕೆ ಹಾಜರಾಗುವ ಮೊದಲು ಹಾಗೂ ಕರ್ತವ್ಯ ಮುಗಿಸಿ ಮನೆಗೆ ಹೋಗುವ ಮುನ್ನ ಪೊಲೀಸ್​ ಸಿಬ್ಬಂದಿ ಈ ಆಯುರ್ವೇದಿಕ್ ಸ್ಟೀಮ್ ತೆಗೆದುಕೊಳ್ಳುತ್ತಿದ್ದಾರೆ.

    ಸಬ್ ಇನ್ಸ್​ಪೆಕ್ಟರ್​ ರಾಜೇಂದ್ರ ಹಾಗೂ ಹೆಡ್ ಕಾನ್ಸ್‌ಟೇಬಲ್ ಸುರೇಶ್ ಅವರ ಯೋಜನೆಗೆ ಪೊಲೀಸ್​ ಸಿಬ್ಬಂದಿ ಫುಲ್​ ಖುಷ್ ಆಗಿದ್ದಾರೆ. (ದಿಗ್ವಿಜಯ ನ್ಯೂಸ್​)

    ಯಾರೋ ಬಂದು ಸ್ಫೂರ್ತಿ ತುಂಬಲೆಂದು ಕಾಯಬಾರದು: ಸೆಲೆಬ್ರಿಟಿ ಕಾರ್ನರ್​ನಲ್ಲಿ ತಾರಾ ಅನೂರಾಧಾ

    ಕಾಬೂಲ್​ನ ಹೆಣ್ಣುಮಕ್ಕಳ ಶಾಲೆ ಬಳಿ ಬಾಂಬ್​ ಸ್ಫೋಟ: ವಿದ್ಯಾರ್ಥಿನಿಯರು ಸೇರಿ 30 ಮಂದಿ ದುರ್ಮರಣ

    ಪಿಎಂ ಕೊಟ್ರೂ ಜನರಿಗೆ ಸಿಗ್ತಿಲ್ಲ!: ಧೂಳು ಹಿಡಿದಿವೆ ಕೇಂದ್ರದಿಂದ ಬಂದ ವೆಂಟಿಲೇಟರ್​ಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts