More

    ಕಾಬೂಲ್​ನ ಹೆಣ್ಣುಮಕ್ಕಳ ಶಾಲೆ ಬಳಿ ಬಾಂಬ್​ ಸ್ಫೋಟ: ವಿದ್ಯಾರ್ಥಿನಿಯರು ಸೇರಿ 30 ಮಂದಿ ದುರ್ಮರಣ

    ಕಾಬೂಲ್​​: ಅಫ್ಘಾನಿಸ್ತಾನದ ಪಶ್ಚಿಮ ಕಾಬೂಲ್​ನ ಮೆಜಾರಿಟಿ ಶಿಟೆ ಜಿಲ್ಲೆಯಲ್ಲಿ ಬರುವ ಹೆಣ್ಣು ಮಕ್ಕಳ ಶಾಲೆಯ ಸಮೀಪ ಶನಿವಾರ ಸಂಭವಿಸಿದ ಬಾಂಬ್​ ಸ್ಫೋಟದಲ್ಲಿ ಸುಮಾರು 30 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.

    ಮೃತರಲ್ಲಿ ಬಹುತೇಕ 11 ರಿಂದ 15ನೇ ವಯಸ್ಸಿನ ಯುವ ವಿದ್ಯಾರ್ಥಿಗಳು. ಈ ದಾಳಿಯನ್ನು ಖಂಡಿಸಿರುವ ತಾಲಿಬಾನ್​ ತಮ್ಮ ಹೊಣೆಗಾರಿಕೆಯನ್ನು ನಿರಾಕರಿಸಿದ್ದಾರೆ.

    ದಾಶ್ತ್​ ಇ ಬಾರ್ಚಿಯಲ್ಲಿರುವ ಸೈಯದ್​ ಅಲ್​ ಶಾಹ್ದಾ ಶಾಲೆ ಬಳಿ ದಾಳಿ ನಡೆದಿದೆ. ಶಾಲೆ ಸಮೀಪವೇ ಇದ್ದ ಜನರು ಘಟನೆ ನೋಡಿ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ಬೆನ್ನಲ್ಲೇ ರಕ್ಷಣಾ ಕಾರ್ಯ ಆರಂಭವಾಯಿತು. ಗಾಯಗೊಂಡಿರುವವರನ್ನು ಆಂಬ್ಯುಲೆನ್ಸ್​ ಮೂಲಕ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗುತ್ತಿದೆ ಎಂದು ಅಫ್ಘಾನಿಸ್ತಾನd ಒಳಗಾಂಣ ಸಚಿವಾಲಯದ ವಕ್ತಾರ ತಾರಿಖ್​ ಅರಿಯನ್​ ಹೇಳಿದ್ದಾರೆ.

    ಇನ್ನು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಯು ಇದೆ. ಯುಎಸ್ ಮತ್ತು ನ್ಯಾಟೋ ಪಡೆಗಳ ನಡುವಿನ ಸುಮಾರು 20 ವರ್ಷಗಳ ಮಿಲಿಟರಿ ಒಪ್ಪಂದ ಕೊನೆಗೊಳಿಸುವುದರಿಂದ ದೇಶದಲ್ಲಿ ಹಿಂಸಾಚಾರವು ಹೆಚ್ಚಾಗಬಹುದೆಂಬ ಆತಂಕವನ್ನು ಸೃಷ್ಟಿಸುವ ಉದ್ದೇಶದಿಂದ ಬಾಂಬ್ ಸ್ಫೋಟ ನಡೆದಿದೆ ಎನ್ನಲಾಗಿದೆ.

    ಸರಣಿ ಸ್ಫೋಟವಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಬಾಂಬ್​ನ ತೀವ್ರತೆ ಅಧಿಕವಾಗಿತ್ತು. ಸಂಜೆ 4.30ಕ್ಕೆ ವಿದ್ಯಾರ್ಥಿನಿಯರು ಶಾಲೆ ಮುಗಿಸಿ ಹಿಂದಿರುಗುವಾಗ ಸ್ಫೋಟ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

    ದಾಳಿ ಹಿಂದೆ ಯಾರಿದ್ದಾರೆ?
    ಈವರೆಗೆ ದಾಳಿಯ ಹೊಣೆಯನ್ನು ಯಾರು ಹೊತ್ತಿಲ್ಲ. ಆದರೆ, ಆಫ್ಘಾನ್​ ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆ ಈ ಮೊದಲು ಶಿಯಾ ನೆರೆಹೊರೆಯವರನ್ನು ಗುರಿಯಾಗಿಸಿದೆ. (ಏಜೆನ್ಸೀಸ್​)

    ನಂಬಿಕೆದ್ರೋಹ ಮಾಡಿದ ವಕೀಲ; ಆ ಕ್ಷಣ ಅಂಕಣ…

    ದಿನಪತ್ರಿಕೆ ವಿತರಣೆ, ಸಾಗಾಣಿಕೆಗೆ ಇಲ್ಲ ಅಡ್ಡಿ: ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟನೆ

    ಜಗತ್ತಿನಲ್ಲಿ ವಿದ್ಯೆ ಕಲಿತವರಿಗೆ ಇರುವ ಬೆಲೆ ಬೇರೆ ಯಾರಿಗೂ ಇಲ್ಲಮ್ಮಾ: ಭವಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts