More

    ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಎಚ್​ಓಡಿಗೆ ಪ್ರೊಫೆಸರ್​ನಿಂದಲೇ ಕಪಾಳಮೋಕ್ಷ!

    ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ವಿಭಾಗದ ಎಚ್​.ಓ.ಡಿ. ಮೇಲೆ ಪ್ರೊಫೆಸರ್​ನಿಂದಲೇ ಹಲ್ಲೆಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸಸ್ಯಶಾಸ್ತ್ರ ವಿಭಾಗದ ಎಚ್.ಓ.ಡಿ. ಡಾ. ಜಿ.ಎಂ. ವಿದ್ಯಾಸಾಗರ ಹಲ್ಲೆಗೊಳಗಾದವರು. ಈ ಕೃತ್ಯವೆಸಗಿದ್ದು, ಇದೇ ವಿವಿಯ ಮನೋಶಾಸ್ತ್ರ ವಿಭಾಗದ ಹಿರಿಯ ಪ್ರೊ. ಎಸ್.ಪಿ. ಮೇಲಕೇರಿ.

    ಇದನ್ನೂ ಓದಿರಿ ಹಾಲು ಖರೀದಿ ದರ 2 ರೂಪಾಯಿ ಇಳಿಕೆ!

    ಡಾ.ವಿದ್ಯಾಸಾಗರ ಅವರ ಕಚೇರಿಗೆ ಪ್ರಾಧ್ಯಾಪಕಿ ಪ್ರತಿಮಾ ಮಠ ಅವರೊಂದಿಗೆ ಮಂಗಳವಾರ ಸಂಜೆ ತೆರಳಿದ ಪ್ರೊ. ಎಸ್.ಪಿ. ಮೇಲಕೇರಿ, ಅವಾಚ್ಯವಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಎಚ್​ಓಡಿಗೆ ಪ್ರೊಫೆಸರ್​ನಿಂದಲೇ ಕಪಾಳಮೋಕ್ಷ!ನಿಂದಿಸಿದ್ದಾರೆ. ಬಳಿಕ ಎಚ್​ಓಡಿ ಕಪಾಳಕ್ಕೆ ಹೊಡೆದಿದ್ದಾರೆ. ಮೇಲಕೇರಿ ಅವರ ಅಣ್ಣನ ಮಗನ ಎಂ.ಫಿಲ್ ವಿಚಾರವಾಗಿ ಈ ಗಲಾಟೆ ನಡೆದಿದೆ. ಎಸ್‌.ಪಿ.ಮೇಲಕೇರಿ ಜೊತೆಗೆ ಪ್ರೊ.ಪ್ರತಿಮಾ ಮಠ ಅವರ ಮೇಲೂ ಡಾ.ಜಿ.ಎಂ.ವಿದ್ಯಾಸಾಗರ್‌ ದೂರು ನೀಡಿದ್ದಾರೆ. ಕಲಬುರಗಿ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಿವಿಯಲ್ಲಿನ ಕೆಲ ಉಪನ್ಯಾಸಕರ ದರ್ಪಕ್ಕೆ ಈ ಹಲ್ಲೆ ಘಟನೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳಿಗೆ ಪಾಠ ಕಲಿಸಬೇಕಾದ ಉಪನ್ಯಾಸಕರೇ ಹೊಡೆದಾಟಕ್ಕಿಳಿದರೆ ವಿವಿ ಗತಿಯೇನು? ಇಂತಹ ಕೆಟ್ಟ ಸಂಸ್ಕೃತಿ ನಾಶವಾಗಲು ಸಂಬಂಧಪಟ್ಟವರು ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಕೇಳಿಬಂದಿದೆ.

    ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!

    ಆರೋಪಿ ನವೀನ್​ನನ್ನು ಗಲಭೆಕೋರರಿಂದ ಬಚಾವ್​ ಮಾಡಿದ್ದೇ ಅಖಂಡ ಶ್ರೀನಿವಾಸ ಮೂರ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts