More

    ನಂಬರ್ ಪ್ಲೇಟ್ ಮಣಿಸುವ ಬಿಲ್ ಕ್ಲರ್ಕ್ ಗಿನ್ನೆಸ್ ದಾಖಲೆ

    ವಾಷಿಂಗ್ಟನ್: ಅಮೆರಿಕದ ವೃತ್ತಿಪರ ವೇಟ್‌ಲಿಫ್ಟಿಂಗ್ ಚಾಂಪಿಯನ್ ಬಿಲ್ ಕ್ಲಾರ್ಕ್ ಕೇವಲ ಒಂದು ನಿಮಿಷದಲ್ಲಿ 29 ಮೆಟಲ್ ಲೈಸೆನ್ಸ್ ಪ್ಲೇಟ್‌ಗಳನ್ನು ಬರಿಗೈಯಿಂದ ಮಣಿಸಿ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
    2018 ರ ಆಗಸ್ಟ್ 22 ರಂದು ಮಾಡಿದ್ದ ತಮ್ಮದೇ ದಾಖಲೆಯನ್ನು ಕ್ಲರ್ಕ್ ಈಗ ಮುರಿದಿದ್ದಾರೆ. ಆಗ, ಅವರು 23 ಫಲಕಗಳನ್ನು ಮಣಿಸಿದ್ದರು.
    ಗುರುವಾರ ಸಂಜೆ ಬಿಂಗ್‌ಹ್ಯಾಮ್‌ಟನ್‌ನ ಎನ್‌ವೈಎಸ್‌ಇಜಿ ಕ್ರೀಡಾಂಗಣದಲ್ಲಿ, ಅವರು 29 ಫಲಕಗಳನ್ನು ಕೇವಲ ಒಂದು ನಿಮಿಷದಲ್ಲಿ ಮಣಿಸಿದರು. ದಾಖಲೆಗಾಗಿ ಬಳಸಲಾದ ಕಾರ್ ನಂಬರ್ ಪ್ಲೇಟ್‌ಗಳನ್ನು ಯಾವುದೇ ರೀತಿಯಲ್ಲಿ ಕತ್ತರಿಸಲಾಗಿಲ್ಲ ಅಥವಾ ಬದಲಾಯಿಸಲಾಗಿಲ್ಲ.

    ಇದನ್ನೂ ಓದಿ: ಸಣ್ಣಗಾಗಬೇಕು, ದಪ್ಪಗಾಗಬೇಕು, ಸಿಕ್ಸ್‌ಪ್ಯಾಕ್ ಬೇಕು ಎಂದೆಲ್ಲಾ ಜಿಮ್‌ಗೆ‌ ಹೋಗುತ್ತಿರುವಿರಾ?

    ” ನಿಜ ಹೇಳಬೇಕೆಂದರೆ ಗಿನ್ನೆಸ್ ನನ್ನನ್ನು ಸಂಪರ್ಕಿಸಿದಾಗ ನಾನು ಅದನ್ನು ಮಾಡಲು ಬಯಸಿರಲಿಲ್ಲ. ಆದರೆ ದತ್ತಿ ಮತ್ತು ಇತರ ಕಾರಣಗಳಿಂದ ಅದನ್ನು ಮಾಡುವುದು ಒಳ್ಳೆಯದು ಎಂದು ನಿರ್ಧರಿಸಿದೆ” ಎಂದು ಕ್ಲರ್ಕ್ ಹೇಳಿದರು.
    ರಂಬಲ್ ಪೋನಿಸ್ ಅವರು ಎಸ್‌ವೈಎಸ್‌ಇಜಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಕರೋನವೈರಸ್ ಮುಂಚೂಣಿ ಕೆಲಸಗಾರರಿಗೆ ಹಣವನ್ನು ಸಂಗ್ರಹಿಸಲಾಯಿತು.
    “ನಮ್ಮ ಸುತ್ತಲಿರುವ ಇಂಥ ಅನನ್ಯ ಜನರ ಬಗ್ಗೆ ನನಗೆ ತುಂಬ ಗೌರವವಿದೆ. ಏನಾದರೂ ಒಳಿತನ್ನು ಮಾಡಲು ಬಯಸಿದರೆ ನೀವು ಯಾವಾಗ ಬೇಕಾದರೂ ಜನರಿಗೆ ಸಹಾಯ ಮಾಡಬಹುದು. ನಿಮ್ಮ ಕ್ಷೇತ್ರದಲ್ಲಿ ಉನ್ನತಿ ಸಾಧಿಸಲು ನಿಮಗೆ ಸಾಧ್ಯವಾದಾಗ ಜನರಿಗೆ ಸಹಾಯ ಮಾಡುವುದೂ ಕೂಡ ನಿಮ್ಮ ಜವಾಬ್ದಾರಿ ಎಂದು ಕ್ಲಾರ್ಕ್ ಹೇಳಿದರು.

    ಇದನ್ನೂ ಓದಿ:  ಪತಿಯ ಪಾಸ್​​ಪೋರ್ಟ್​ ಬಳಸಿ ಪ್ರಿಯತಮನನ್ನು ಟ್ರಿಪ್​ಗೆ ಕರೆದುಕೊಂಡು ಹೋದ ಮಹಿಳೆ; ಮುಂದಾಗಿದ್ದು ದೊಡ್ಡ ಫಜೀತಿ

    ಕ್ಲರ್ಕ್ ಬಾಲ್ಯದಿಂದಲೂ ಒತ್ತಡವನ್ನು ನಿವಾರಿಸಿಕೊಳ್ಳಲು ವೇಯ್ಟ್ ಲಿಫ್ಟಿಂಗ್ ನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ತಮ್ಮ ವಿಶಿಷ್ಟ ಕೌಶಲದಿಂದಾಗಿ ವೃತ್ತಿಜೀವನದಲ್ಲಿ, ಅವರು ಅಮೆರಿಕದ ರಾಷ್ಟ್ರೀಯ ಮತ್ತು ವಿಶ್ವ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ.
    ಪವರ್‌ಲಿಫ್ಟಿಂಗ್‌ನಲ್ಲಿ 100 ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರೀಯ ಮತ್ತು ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ.
    90 ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು 350 ಕೆಜಿಗಿಂತಲೂ ಹೆಚ್ಚು ಭಾರವನ್ನು ಎತ್ತಿದ ಸಾಧನೆ ಮಾಡಿದ್ದಾರೆ.
    2014 ರಲ್ಲಿ ನ್ಯಾಷನಲ್ ಸ್ಟ್ರೆಂಗ್ತ್ , ಪವರ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ನಂತರ ಕ್ಲಾರ್ಕ್ ವ್ಯಕ್ತಿತ್ವ ವಿಕಸನ ಮತ್ತು ಬಲವರ್ಧನೆಯ ತರಬೇತುದಾರರಾಗಿ ಮತ್ತಷ್ಟು ಖ್ಯಾತಿ ಗಳಿಸಿದರು ಮತ್ತು ಮತ್ತು ಬಲವರ್ಧನೆ ತರಬೇತುದಾರರಾಗಿ ಜನಪ್ರಿಯತೆಯನ್ನು ಗಳಿಸಿದರು.

    ಬೆಟ್ಟಿಂಗ್‌ ದಂಧೆ: ಚೀನಿ ಆ್ಯಪ್‌ ಕಂಪೆನಿ ಮೇಲೆ ಇಡಿ ದಾಳಿ- 47 ಕೋಟಿ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts