More

    ಬೆಟ್ಟಿಂಗ್‌ ದಂಧೆ: ಚೀನಿ ಆ್ಯಪ್‌ ಕಂಪೆನಿ ಮೇಲೆ ಇಡಿ ದಾಳಿ- 47 ಕೋಟಿ ವಶಕ್ಕೆ

    ನವದೆಹಲಿ: ದೆಹಲಿ, ಗುರುಗ್ರಾಮ, ಮುಂಬೈ ಮತ್ತು ಪುಣೆಯಲ್ಲಿ ಜಾರಿ ನಿರ್ದೇಶನಾಲಯವು ಚೀನಾದ ಆ್ಯಪ್‌ ಕಚೇರಿಗಳ ಮೇಲೆ ದಾಳಿ ನಡೆಸುವ ಮೂಲಕ 47 ಕೋಟಿ ರೂಪಾಯಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

    ಚೀನಿಯರು ಭಾರತದಲ್ಲಿ ಅಕ್ರಮವಾಗಿ ಆನ್‌ಲೈನ್‌ ಬೆಟ್ಟಿಂಗ್ ದಂಧೆ ನಡೆಸುತ್ತಿರುವ ಮಾಹಿತಿ ಮೇರೆಗೆ ಅಧಿಕಾರಿಗಳು, ಚೀನಾದ ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಡೇಟಿಂಗ್‌ ಆ್ಯಪ್‌ ಕಚೇರಿಗಳ ಮೇಲೆ ಈ ದಾಳಿ ನಡೆಸಿದ್ದು, ಖಾತೆಯಲ್ಲಿದ್ದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಚೀನಿಯರು ಈ ರೀತಿಯಾಗಿ ಭಾರತೀಯರಿಂದ ಅಕ್ರಮವಾಗಿ 1300 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಇದನ್ನೂ ಓದಿ: ಶರ್ಮಿಳಾ ಮಾಂಡ್ರೆಯಿದ್ದ ಕಾರು ಅಪಘಾತದ ಕೇಸ್‌: ಸಲ್ಲಿಕೆಯಾಯ್ತು ಚಾರ್ಜ್‌ಷೀಟ್‌- ಕೆಲವು ಪ್ರಶ್ನೆಗಳು ಗಪ್‌ಚುಪ್‌!

    ಇದಕ್ಕೂ ಮೊದಲು ಹೈದರಾಬಾದ್‌ನ ಪೊಲೀಸರು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದ ಚೀನಿ ಪ್ರಜೆ ಟುಮಾರೊ ಪವರ್‌ ಕಂಪನಿಯ ವ್ಯವಸ್ಥಾಪಕ ಯಾನ್‌ ಹೋ ಸೇರಿದಂತೆ ಮೂವರನ್ನು ಬಂಧಿಸಿದ್ದರು. ಈ ರೀತಿ ಅಕ್ರಮ ಚಟುವಟಿಕೆಗಳು ಹೇರಳವಾಗಿ ನಡೆಯುತ್ತಿರುವ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು.

    ಈ ಹಿನ್ನೆಲೆಯಲ್ಲಿ ಪೇಟಿಎಂ, ಕ್ಯಾಷ್‌ಫ್ರೀ ಮತ್ತು ರೆಝೋರ್‌ಪೇ ಸೇರಿದಂತೆ ಕೆಲವು ಭಾರತೀಯ ಆನ್‌ಲೈನ್‌ ವ್ಯಾಲೆಟ್‌ ಮತ್ತು ಗೇಟ್‌ವೇಗಳ ವಹಿವಾಟಿನ ಮೇಲೆ ಅಧಿಕಾರಿಗಳು ನಿಗಾ ಇರಿಸಿದ್ದರು. ಇದೀಗ ಈ ಅಕ್ರಮ ಹಣವನ್ನು ಹವಾಲಾ ವಹಿವಾಟಿಗೂ ಬಳಸಿಕೊಂಡಿರುವ ಬಗ್ಗೆ ಅನುಮಾನವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಗಲ್ವಾನ್‌ ಘರ್ಷಣೆಯಲ್ಲಿ ತನ್ನ ಸೈನಿಕರು ಸತ್ತೇ ಇಲ್ಲ ಎಂದಿದ್ದ ಚೀನಾಕ್ಕೆ ಹೀಗಾಗಬಾರದಿತ್ತು!

    ಎಣ್ಣೆ ಪ್ರಿಯರಿಗೆ ‘ಶುಭ ಮಂಗಳವಾರ’: ಸರ್ಕಾರದಿಂದ ಸಿಕ್ಕಿದೆ ‘ಕಿಕ್‌’ ಏರಿಸುವ ಸುದ್ದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts