More

    ಅತಿಥಿ ಉಪನ್ಯಾಸಕರಿಗೆ ಗುಡ್​ ನ್ಯೂಸ್ ಕೊಟ್ಟ ಸಿಎಂ ಯಡಿಯೂರಪ್ಪ

    ಬೆಂಗಳೂರು: ಮಾರ್ಚ್​ನಿಂದ ಅತಿಥಿ ಉಪನ್ಯಾಸಕರ ಗೌರವ ಧನ ಬಿಡುಗಡೆ ಮಾಡದೆ ಮೊಂಡುತನ ತೋರುತ್ತಿದ್ದ ರಾಜ್ಯ ಸರ್ಕಾರ, ಇದೀಗ ತನ್ನದೇ ಪಕ್ಷದ ಎಂಎಲ್ಸಿಯ ಪ್ರತಿಭಟನೆ ಬಳಿಕ ಎಚ್ಚೆತ್ತುಕೊಂಡಿದೆ. ಇಷ್ಟು ದಿನ ಸಂಬಳವಿಲ್ಲ ಸಂಕಷ್ಟಕ್ಕೆ ಸಿಲುಕಿದ ಅತಿಥಿ ಉಪನ್ಯಾಸರಿಗೆ ಸಿಎಂ ಯಡಿಯೂರಪ್ಪ ಸಿಹಿ ಸುದ್ದಿ ನೀಡಿದ್ದಾರೆ.

    ಕರೊನಾ ಸಂಕಷ್ಟಕ್ಕೆ ಸಿಲುಕಿರುವ ಅತಿಥಿ ಉಪನ್ಯಾಸಕರಿಗೆ ಸಂಬಳವೂ ಇಲ್ಲದೆ ಬದುಕು ದುಸ್ತರವಾಗಿದೆ. ಕೂಡಲೇ ವೇತನ ಬಿಡುಗಡೆ ಮಾಡಿ ಎಂದು ಆಗ್ರಹಿಸಿದ್ದ ಬಿಜೆಪಿ ಎಂಎಲ್​ಸಿ ಆಯನೂರು ಮಂಜುನಾಥ್​, ರಾಜ್ಯ ಸರ್ಕಾರವನ್ನು ಹೃದಯಹೀನ ಎಂದು ಛೇಡಿಸಿದ್ದರು. ಮಂಗಳವಾರ ಸದನದಲ್ಲಿ ಪ್ರಶ್ನೋತ್ತರ ಕಲಾಪ ವೇಳೆ ಈ ಷಯ ಪ್ರಸ್ತಾಪಿಸಿದ ಅವರು, ಅತಿಥಿ ಉಪನ್ಯಾಸಕರಿಗೆ5 ತಿಂಗಳಿಂದ ಸಂಬಳವಿಲ್ಲದೆ ಕಷ್ಟ-ನಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ವೇತನ ಪಾವತಿಸಿ. ಆತ್ಮಹತ್ಯೆ ಮಾಡಿಕೊಂಡ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ಪರಿಹಾರ ನೀಡಿ ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಲು ಕಾಲಾವಕಾಶ ಬೇಕು ಎಂದು ಸಭಾನಾಯಕ ಕೋಟ ಶೀನಿವಾಸ ಪೂಜಾರಿ ಹೇಳುತ್ತಿದ್ದಂತೆ ಕೋಪಗೊಂಡ ಆಯನೂರು, ಏಕಾಂಗಿಯಾಗಿ ಸಭಾಪತಿ ಪೀಠದ ಮುಂದೆ ಪ್ರತಿಭಟನೆಗೆ ಕುಳಿತ್ತಿರು. ಇದಕ್ಕೆ ಕಾಂಗ್ರೆಸ್​ ಹಾಗೂ ಜೆಡಿಎಸ್​ ಕೂಡ ಬೆಂಬಲಿಸಿದ್ದವು. ಇದನ್ನೂ ಓದಿರಿ ಸದನದಲ್ಲಿ ತನ್ನದೇ ಸರ್ಕಾರದ ವಿರುದ್ಧ ಧರಣಿಗೆ ಕುಳಿತ ಬಿಜೆಪಿ ಎಂಎಲ್ಸಿ!

    ಅತಿಥಿ ಉಪನ್ಯಾಸಕರಿಗೆ ಗುಡ್​ ನ್ಯೂಸ್ ಕೊಟ್ಟ ಸಿಎಂ ಯಡಿಯೂರಪ್ಪಸಭಾನಾಯಕ ಎಷ್ಟೇ ಮನವೊಲಿಸಿದರೂ ಸ್ಪಷ್ಟ ಉತ್ತರಕ್ಕಾಗಿ ಆಯನೂರು ಹಿಡಿದ ಪಟ್ಟು ಸಡಿಲಿಸಲಿಲ್ಲ. ಗಂಭೀರ ಸಮಸ್ಯೆ ಇತ್ಯರ್ಥಪಡಿಸಲೇಬೇಕು ಎಂದು ಪ್ರತಿಪಕ್ಷಗಳೂ ಆಗ್ರಹಿಸಿದವು. ಸುಗಮ ಕಲಾಪಕ್ಕೆ ಅವಕಾಶ ಸಿಗದಿದ್ದಾಗ ಸಭಾಪತಿ ಕೆ.ಪ್ರತಾಪಚಂದ್ರಶೆಟ್ಟಿ ಅರ್ಧ ತಾಸು ಮುಂದೂಡಿದರು.

    ಸದನ ಪುನರಾರಂಭವಾದಾಗ ಸ್ವತಃ ಬಿಎಸ್​ವೈ ಉತ್ತರಿಸಲು ಧಾವಿಸಿದ್ದರು. ರಾಜ್ಯದ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧವಾಗಿದ್ದು, ಸಂಬಳ ಪಾವತಿಸಲು ಸೂಚಿಸಲಾಗಿದೆ ಎಂದ ಬಳಿಕ ಪರಿಸ್ಥಿತಿ ತಿಳಿಯಾಯಿತು.

    ಪ್ರತಿಭಟನೆ ಕಾರಣಕ್ಕೆ ಮುಂದೂಡಿಕೆಯಾಗಿದ್ದ ಸದನ ಮತ್ತೆ ಸೇರಿದಾಗ ಡಿಸಿಎಂ, ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಸಿ.ಎನ್​.ಅಶ್ವತ್ಥ ನಾರಾಯಣ ಪರವಾಗಿ ಸಿಎಂ ನೀಡಿದ ಉತ್ತರದಿಂದ ಆಡಳಿತ ಪಕ್ಷದ ಆಯನೂರು ಮಂಜುನಾಥ್​ ಸಂತಸ ವ್ಯಕ್ತಪಡಿಸಿ, ಸಭಾಪತಿ ಪೀಠದ ಮುಂದೆ ನಡೆಸಿದ್ದ ಪ್ರತಿಭಟನೆ ಕೈಬಿಟ್ಟರು.

    ಕಟ್ಟಿದ್ದು ಕೇವಲ 12 ರೂಪಾಯಿ, ಬಂದದ್ದು ಬರೋಬ್ಬರಿ 2 ಲಕ್ಷ ರೂಪಾಯಿ!

    ದೇವೇಗೌಡ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ!

    ವಿಧಾನಸಭೆಯ ಕ್ಯಾಂಟೀನ್​ನಲ್ಲಿ ಕಿತ್ತಾಡಿಕೊಂಡು ಹೊಡೆದಾಟಕ್ಕೆ ಮುಂದಾದ ಶಾಸಕ-ಸಚಿವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts