More

    ಜಮ್ಮು ಕಾಶ್ಮೀರ, ಲಡಾಕ್​ಗೆ ಭೇಟಿ ನೀಡಲು ಸಜ್ಜಾಗಿರುವ ಕೇಂದ್ರ ಸಚಿವರ ತಂಡ; ಅಲ್ಲಿನ ಪರಿಸ್ಥಿತಿ ಅರಿಯಲು, ಜನರೊಂದಿಗೆ ಚರ್ಚಿಸಲು ನಿರ್ಧಾರ

    ಶ್ರೀನಗರ: ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರ ತಂಡವೊಂದು ಅಲ್ಲಿಗೆ ಶೀಘ್ರವೇ ಭೇಟಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

    ಈ ಕೇಂದ್ರ ಸಚಿವರ ತಂಡ ಜನವರಿ 19 ರಿಂದ 24ರವರೆಗೆ ಎರಡೂ ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದು ಅಲ್ಲಿನ ವಾಸ್ತವ ಸ್ಥಿತಿಯನ್ನು ಪರಿಶೀಲನೆ ಮಾಡಲಿದೆ ಹಾಗೂ ಅಲ್ಲಿನ ಜನರಿಗೆ ಕೇಂದ್ರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದೆ. ಹಾಗೇ ಅಲ್ಲಿನ ಜನರ ಜತೆ ಚರ್ಚಿಸಿ, ಅವರ ಅಗತ್ಯಗಳ ಬಗ್ಗೆಯೂ ವರದಿ ಪಡೆಯಲಿದೆ ಎನ್ನಲಾಗಿದೆ.

    ಉನ್ನತ ಮೂಲಗಳ ಪ್ರಕಾರ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಜಿ.ಕಿಶನ್​ ರೆಡ್ಡಿ, ಕಾನೂನು ಸಚಿವ ರವಿಶಂಕರ್​ ಪ್ರಸಾದ್​, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ, ಕ್ರೀಡಾ ಸಚಿವ ಕಿರಣ್​ ರಿಜ್ಜು, ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಅನುರಾಗ್​ ಠಾಕೂರ್​, ಸಾಂಸ್ಕೃತಿಕ ಸಚಿವ ಪ್ರಲ್ಹಾದ್​ ಜೋಶಿ, ಮಾನವ ಸಂಪನ್ಮೂಲ ಸಚಿವ ರಮೇಶ್​ ಪೋಕ್ರಿಯಾಲ್​ ಅವರು ಜಮ್ಮುಕಾಶ್ಮೀರ ಮತ್ತು ಲಡಾಕ್​ಗೆ ಭೇಟಿ ನೀಡಲಿದ್ದಾರೆ.
    ಕಳೆದ ವಾರ 15 ಜನ ವಿದೇಶಿ ರಾಯಭಾರಿಗಳ ತಂಡವೊಂದು ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ನೀಡಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts