More

    VIDEO: ಕೆಸರು ಮಣ್ಣಲ್ಲಿ ಬಿದ್ದು ಒದ್ದಾಡುತ್ತಿದ್ದ ಚಿಗರೆಯ ರಕ್ಷಣೆ ಮಾಡಿದ ಸೈಕ್ಲಿಸ್ಟ್​ಗಳು…ನೆಟ್ಟಿಗರಿಂದ ಹೊಗಳಿಕೆ

    ಕಾಡುಹಾದಿಯಲ್ಲಿ ಸೈಕ್ಲಿಂಗ್​ ಮಾಡುತ್ತಿದ್ದ ಸೈಕ್ಲಿಸ್ಟ್​ಗಳ ಒಂದೊಳ್ಳೆ ಕೆಲಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ತುಂಬ ಮೆಚ್ಚುಗೆ ಗಳಿಸಿದೆ.

    ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಎಂಬುವರು ಪೋಸ್ಟ್ ಮಾಡಿದ 27 ಸೆಕೆಂಡ್​ಗಳ ವಿಡಿಯೋದಲ್ಲಿ ಈ ಸೈಕ್ಲಿಸ್ಟ್​ಗಳು ಚಿಗರೆಯನ್ನು ರಕ್ಷಿಸಿದ್ದನ್ನು ನೋಡಬಹದು.

    ಯಾವ ಪ್ರದೇಶದಲ್ಲಿ ನಡೆದಿದ್ದು ಎಂಬುದು ಗೊತ್ತಾಗಿಲ್ಲ. ಆದರೆ ಇದು ತುಂಬ ಜನರಿಗೆ ಮಾದರಿಯಾಗುವಂತಹ ವಿಡಿಯೋ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

    ದೊಡ್ಡದಾದ ಚಿಗರೆಯೊಂದು ಕೆಸರುಮಣ್ಣುಗಳು ತುಂಬಿದ ಕಂದಕದಲ್ಲಿ ಬಿದ್ದು, ಎದ್ದು ಬರಲಾಗದೆ ಒದ್ದಾಡುತ್ತಿತ್ತು. ಅದೇ ದಾರಿಯಲ್ಲಿ ಸೈಕಲ್​ ತುಳಿದುಕೊಂಡು ಹೋಗುತ್ತಿದ್ದ ಸೈಕ್ಲಿಸ್ಟ್​ಗಳು, ತಮ್ಮ ಸೈಕಲ್​ಗಳನ್ನು ನಿಲ್ಲಿಸಿ ಕಂದಕದಿಂದ ಮೂಕಪ್ರಾಣಿಯನ್ನು ಎತ್ತಿದ್ದಾರೆ. ಅದು ಮಣ್ಣಿನ ಹೊಂಡದಿಂದ ಬರುತ್ತಲೇ ಒಂದು ಕ್ಷಣವೂ ನಿಲ್ಲದೆ ಓಡಿ ಹೋಗಿದೆ.
    ವಿಡಿಯೋ ಪೋಸ್ಟ್ ಮಾಡಿದ ಐಎಫ್​ಎಸ್ ಅಧಿಕಾರಿ, ಬಲಿಷ್ಠ ಜನರು ಇತರರು ಕೆಳಗೇ ಇರಲು ಬಿಡುವುದಿಲ್ಲ. ಅವರನ್ನೂ ಮೇಲೆತ್ತುತ್ತಾರೆ ಎಂದು ಕ್ಯಾಪ್ಷನ್​ ಬರೆದಿದ್ದಾರೆ.

    ವಿಡಿಯೋ ಫೆ.19ರಂದು ಸಂಜೆ ಪೋಸ್ಟ್ ಆಗುತ್ತಿದ್ದಂತೆ ಸಿಕ್ಕಾಪಟೆ ವೈರಲ್​ ಆಗಿದೆ. ಈಗಾಲೇ 4000ಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.

    ಪ್ರತಿಫಲವನ್ನು ಅಪೇಕ್ಷಿಸದೆ ಸಹಾಯಕ್ಕೆ ಇಳಿಯುವುದು ಎಂದರೆ ಇದು, ಸೈಕ್ಲಿಸ್ಟ್​ಗಳು ತುಂಬ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೊಗಳುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts